/newsfirstlive-kannada/media/post_attachments/wp-content/uploads/2024/09/Devara.jpg)
ತೆಲುಗು ಸೂಪರ್​​ಸ್ಟಾರ್ ಜೂನಿಯರ್​ ಎನ್​ಟಿಆರ್​ ಅಭಿನಯದ ದೇವರ ಸಿನಿಮಾ ತೆರೆಕಂಡಿದೆ. ಅದ್ಭುತ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಉತ್ತಮ ಪ್ರದರ್ಶನ ಕಂಡ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಿತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2998 AD ಸಿನಿಮಾದ ಬಳಿಕ ದೇವರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಲಿದೆ ಎಂಬ ನಿರೀಕ್ಷೆಯಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆ ಜೂನಿಯರ್​ ಎನ್​ಟಿಆರ್​ ಅಭಿನಯದ ಈ ಸಿನಿಮಾ ಮೊದಲ ದಿನ 125 ಕೋಟಿ ಗಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Devara release; ದೇಶದಲ್ಲಿ Jr NTR ಅಭಿಮಾನಿಗಳಿಗೆ ಹಬ್ಬ.. ಹೆಂಗಿದೆ ಸಂಭ್ರಮ..? ವಿಡಿಯೋ
ಕಲ್ಕಿ ಸಿನಿಮಾ ಮೊದಲ ದಿನ 177.70 ಕೋಟಿ ಗಳಿಕೆ ಮಾಡಿತ್ತು. ಇದೀಗ ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವು ವಿಶ್ವಾದಾದ್ಯಂತ ಸುಮಾರು 75 ಕೋಟಿಗೂ ಮುಂಗಡ ಬುಕ್ಕಿಂಗ್​​ ಪಡೆದಿತ್ತು ಎಂದು ಸ್ಯಾಕ್​​ನಿಲ್ಕ್​ ಹೇಳಿದೆ.
ಇದನ್ನೂ ಓದಿ: ಮಾವನ ಮನೆಯ ಪಿತೃಪಕ್ಷ ಊಟಕ್ಕೆ ಹೋಗಲು ಪೊಲೀಸ್​ ಜೀಪ್​ ಕರೆಸಿಕೊಂಡ ಭೂಪ!
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 60-70 ಕೋಟಿ ಗಳಿಕೆಯ ನಿರೀಕ್ಷೆಯಿದೆ. ಒಟ್ಟಾರೆ ಭಾರತದಲ್ಲಿ 85-90 ಕೋಟಿ ರೂಪಾಯಿಯಷ್ಟು ಮೊದಲ ದಿನ ಗಳಿಸಬಹುದು ಎಂದು ಹೇಳಲಾಗುತ್ತಿದೆ. ಅಂದಹಾಗೆಯೇ ಈ ಸಿನಿಮಾದ ಪ್ರೀಮಿಯಂ ಮಾರಾಟ ಸೇರಿದಂತೆ 40 ಕೋಟಿ ಮೌಲ್ಯದ ಟಿಕೆಟ್​ ಮಾರಾಟ ಮಾಡಿದೆ ಎಂದ ಫಿಲ್ಮ್​ ಟ್ರೇಡ್​ ಪೋರ್ಟಲ್​​ ಸ್ಯಾಕ್​​​​ನಿಲ್ಕ್​ ಹೇಳಿದೆ.
#Devara Opening Day Box Office Expectations (rough estimation) -
AP/TG - 65-70 Crore Gross
All India - 85-90 Crore Gross
Overseas - 40 Crore ($5 Million), including premiere.
Worldwide - 125 CroreAdvance Booking is around 75 crore gross worldwide. #DevaraMassJathara#JrNTR
— Sacnilk Entertainment (@SacnilkEntmt)
#Devara Opening Day Box Office Expectations (rough estimation) -
AP/TG - 65-70 Crore Gross
All India - 85-90 Crore Gross
Overseas - 40 Crore ($5 Million), including premiere.
Worldwide - 125 Crore
Advance Booking is around 75 crore gross worldwide. #DevaraMassJathara#JrNTR— Sacnilk Entertainment (@SacnilkEntmt) September 26, 2024
">September 26, 2024
ಇದನ್ನೂ ಓದಿ: ದರ್ಶನ್​ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?
ಇನ್ನು ದೇವರ ಸಿನಿಮಾದಲ್ಲಿ ಜ್ಯೂನಿಯರ್​ ಎನ್​ಟಿಆರ್​ಗೆ ನಟಿಯಾಗಿ ಜಾನ್ವಿ ಕಪೂರ್​ ನಟಿಸಿದ್ದಾರೆ. ಸೈಫ್​ ಅಲಿ ಖಾನ್​ ಕೂಡ ಬಣ್ಣ ಹಚ್ಚಿದ್ದಾರೆ. ಅಂದಹಾಗೆಯೇ ಇದರಲ್ಲಿ ದ್ವಿಪಾತ್ರದಲ್ಲಿ ಜೂನಿಯರ್​ ಎನ್​ಟಿಆರ್​ ಕಾಣಿಸಿಕೊಂಡಿದ್ದಾರೆ ​​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ