ಅಷ್ಟೊಂದು ಹಣ ಹೇಗೆ ಬಂತು, ಆ ದುಡ್ಡು ಯಾರಿಗೆ ಸೇರಿದ್ದು?
ಐಟಿ ಅಧಿಕಾರಿಗಳಿಗೆ ದಾಖಲೆ ನೀಡಿರುವ ಎಂ.ಆರ್ ರಾವ್
ಕೃತ್ಯದ ಬಳಿಕ ಸಾಕ್ಷ್ಯ ನಾಶಕ್ಕೆ ದುಡ್ಡಿನ ಹೊಳೆ ಹರಿಸಿದ್ದ ದರ್ಶನ್
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ ಅಕ್ಷರಶಃ ನರಕಯಾತನೆ ಅನುಭವಿಸ್ತಿದ್ದಾರೆ. ಒಂದು ಕಡೆ ಜಾಮೀನು ಟೆನ್ಶನ್ ಆದ್ರೆ, ಮತ್ತೊಂದು ಕಡೆ ಜೈಲಿನಲ್ಲಿ ಸೆಣೆಸಾಟ. ಇದರ ಜೊತೆ ಮತ್ತೊಂದು ಸಂಕಷ್ಟಗಳ ಸರಮಾಲೆ ಎದುರಾಗಿದೆ. ಕೃತ್ಯದ ಬಳಿಕ ಸಾಕ್ಷ್ಯ ನಾಶಕ್ಕೆ ದುಡ್ಡಿನ ಹೊಳೆ ಹರಿಸಿದ್ದ ದರ್ಶನ್‌ಗೆ ಪ್ರಶ್ನೆಗಳ ಸುರಿಮಳೆಗೈದು ಜೈಲಿನಲ್ಲೇ ಡ್ರಿಲ್ ಮಾಡಿದ್ದು, ಇವತ್ತೂ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ ಮುಂದುವರೆಯಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿರೋ ದರ್ಶನ್‌ಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಬೇಲ್ ಚಿಂತಯಲ್ಲೇ ಬಳ್ಳಾರಿ ಜೈಲಿನಲ್ಲಿ ಕಂಗಾಲಾಗಿರುವ ದರ್ಶನ್‌ಗೆ ಐಟಿ ಸಂಕಟ ಶುರುವಾಗಿದ್ದು, ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್ ಏನ್ ಹೇಳುತ್ತೆ?
ಆರೋಪ ಏನು?
ರೇಣುಕಾಸ್ವಾಮಿ ಹತ್ಯೆ ಬಳಿಕ ನಟ ದರ್ಶನ್ ಹಣದ ಹೊಳೆಯನ್ನೇ ಹರಿಸಿದ್ದರು ಎಂಬ ಆರೋಪ ಇದೆ. ದುಡ್ಡಿನ ಆಸೆ ತೋರಿಸಿ ಕೆಲವರನ್ನ ಸರೆಂಡರ್ ಮಾಡಿಸಿದ್ದರು. ಮತ್ತೆ ಕೆಲವರನ್ನ ಸಾಕ್ಷ್ಯ ನಾಶಕ್ಕೆ ಬಳಸಿಕೊಂಡಿದ್ದ, ಇದೆಕ್ಕೆಲ್ಲಾ ದರ್ಶನ್ ಹತ್ತಲ್ಲ.. ಇಪ್ಪತ್ತಲ್ಲ ಬರೋಬ್ಬರಿ 84 ಲಕ್ಷ ಹಣ ಖರ್ಚು ಮಾಡಿದ್ದ, ಬಳಿಕ ಈ ಹಣವನ್ನ ಪೋಲಿಸ್ರು ಸೀಜ್ ಮಾಡಿದ್ರು. ಈಗ ಹಣದ ಮೂಲ ಪತ್ತೆ ಹಚ್ಚುಲು ಐಟಿ ಅಧಿಕಾರಿಗಳು ಮುಂದಾಗಿದ್ದು, ನಿನ್ನೆ ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಭೇಟಿ ಕೊಟ್ಟು 7 ಗಂಟೆಗಳ ಕಾಲ ದರ್ಶನ್‌ಗೆ ಡ್ರಿಲ್ ಮಾಡಿದ್ದಾರೆ.
ದರ್ಶನ್‌ಗೆ ಐವರು ಐಟಿ ಅಧಿಕಾರಿಗಳಿಂದ ವಿಚಾರಣೆ
ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ನಿಂದ ಅನುಮತಿ ಪಡೆದ ಐವರು ಐಟಿ ಅಧಿಕಾರಿಗಳ ತಂಡ ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್‌ಗೆ ಹಣದ ಮೂಲ ಕುರಿತು ದರ್ಶನ್‌ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್‌ಗೆ ಕೇಳಿದ್ದಾರೆ. ದರ್ಶನ್ನ ಎಲ್ಲಾ ವ್ಯವಹಾರ ನೋಡಿಕೊಳ್ತಿದ್ದ ಎಂ.ಆರ್ ರಾವ್, ಎಲ್ಲಾ ದಾಖಲೆಗಳ ಸಮೇತ ಆಗಮಿಸಿ ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.
ಇದನ್ನೂ ಓದಿ: ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?
ಇಂದು ಜಾಮೀನು ಅರ್ಜಿ ವಿಚಾರಣೆ
ಇನ್ನು ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿ, ನೂರಕ್ಕೂ ಹೆಚ್ಚು ದಿನಗಳು ಆಗಿದೆ. ಬೇಲ್ ಟೆನ್ಷನ್ನಲ್ಲೇ ದಾಸ ಬಳ್ಳಾರಿ ಜೈಲಿನಲ್ಲಿ ಚಿಂತಾಕ್ರಾಂತರಾಗಿದ್ದಾರೆ. ಇವತ್ತು ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಸೆಷನ್ಸ್ ಕೋರ್ಟ್‌ನಲ್ಲೇ ಬೇಲ್ ಸಿಗುವ ವಿಶ್ವಾಸದಲ್ಲಿ ದರ್ಶನ್ ಪರ ವಕೀಲರಿದ್ದಾರೆ. ಇದರ ನಡುವೆ ಡೆವಿಲ್ ಚಿತ್ರದ ನಿರ್ದೇಶಕ ಕೂಡ, ಬಳ್ಳಾರಿ ಜೈಲಿಗೆ ಆಗಮಿಸಿ, ದರ್ಶನ್ರನ್ನು ಭೇಟಿ ಆಗಿದ್ದಾರೆ. ಒಂದ್ವೇಳೆ ದರ್ಶನ್‌ಗೆ ಜಾಮೀನು ಸಿಕ್ಕಿದರೆ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಆಪ್ತರು ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಕೊಲೆ ಕೇಸ್ನಲ್ಲಿ ಲಾಕ್ ಆಗಿರುವ ದರ್ಶನ್‌ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗ್ತಿವೆ. ಇವತ್ತು ದರ್ಶನ್ ಜಾಮೀನು ಅರ್ಜಿ ವಿಚಾರವಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುತ್ತಾ ಇಲ್ವಾ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ