ಧೋನಿಗಾಗಿ ಐಪಿಎಲ್ ನಿಯಮವೇ ಬದಲಾಗುತ್ತಾ..? ಈ ಚರ್ಚೆ ಹಿಂದಿರೋ ನಿಜವಾದ ಕಾರಣ ಏನು..?

author-image
Ganesh
Updated On
ಧೋನಿಗಾಗಿ ಐಪಿಎಲ್ ನಿಯಮವೇ ಬದಲಾಗುತ್ತಾ..? ಈ ಚರ್ಚೆ ಹಿಂದಿರೋ ನಿಜವಾದ ಕಾರಣ ಏನು..?
Advertisment
  • ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿನಾ? ಕೆಟ್ಟ ಸುದ್ದಿನಾ?
  • ರೈಟ್​ to ಮ್ಯಾಚ್​ ಕಾರ್ಡ್​ ಮತ್ತೆ ಕಮ್​ಬ್ಯಾಕ್ ಆಗುತ್ತಾ?
  • ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಫುಲ್​ ಖುಷ್ ಆಗಿದ್ದೇಕೆ?

ಧೋನಿ ಅಭಿಮಾನಿಗಳು ಏನನ್ನ ಬಯಸಿದ್ರೋ ಆ ಬಯಕೆ ಈಡೇರಿದೆ. ಮುಂದಿನ ಸೀಸನ್​ ಐಪಿಎಲ್​ನಲ್ಲಿ ಫ್ಯಾನ್ಸ್​​ ತಲಾ ದರ್ಶನ ಬಹುತೇಕ ಪಕ್ಕಾ. ಐಪಿಎಲ್​ ಫ್ರಾಂಚೈಸಿಗಳ ಸಭೆ ಬಳಿಕ ಬಿಸಿಸಿಐ ಬಾಸ್​ಗಳು ರಿಟೈನ್​, ರಿಲೀಸ್​ಗೆ ಸಂಭಂದಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಫೈನಲ್​ ಡಿಶಿಷನ್​ ಧೋನಿ ಮುಂದಿನ ಸೀಸನ್​​ ಐಪಿಎಲ್ ಆಡೋ ಹಿಂಟ್​ ಕೊಟ್ಟಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 18ರ ಆರಂಭಕ್ಕೆ ಬರೋಬ್ಬರಿ ಆರೇಳು ತಿಂಗಳುಗಳೇ ಬಾಕಿ ಉಳಿದಿವೆ. ಅದಾಗಲೇ ಮುಂದಿನ ಐಪಿಎಲ್​ಗೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಜೋರಾಗಿ ನಡೀತಿದೆ. ಡಿಸೆಂಬರ್​ನಲ್ಲಿ ನಡೆಯಬೇಕಿರೋ, ಮೆಗಾ ಆಕ್ಷನ್ ಸಿದ್ಧತೆಯ ಭಾಗವಾಗಿ ಬಿಸಿಸಿಐ- ಫ್ರಾಂಚೈಸಿಗಳ ಜೊತೆ ಮೊನ್ನೆಯಷ್ಟೇ ಹೈವೋಲ್ಟೆಜ್​ ಸಭೆ ನಡೆಸಿತ್ತು. ಈ ಸಭೆಯಲ್ಲಿ ಹಲವು ಫ್ರಾಂಚೈಸಿಗಳು ಮೆಗಾ ಆಕ್ಷನ್​ ಬೇಡವೇ ಬೇಡ ಅಂದ್ರೆ ಇನ್ನು ಫ್ರಾಂಚೈಸಿಗಳು ರಿಟೈನ್​-ರಿಲೀಸ್​ ವಿಚಾರದಲ್ಲಿ ಹಲವು ಬೇಡಿಕೆ ಇಟ್ಟಿದ್ವು. ಅಂದು ಈ ಬೇಡಿಕೆಗಳನ್ನ ಸ್ವೀಕರಿಸಿದ್ದ, ಬಿಸಿಸಿಐ ಇದೀಗ ಈ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ:KL ರಾಹುಲ್ ಒಂದೇ ಅಲ್ಲ.. ಈ ಆಟಗಾರನೂ ಬಿಗ್ ಟಾರ್ಗೆಟ್.. ಟೀಂ ಇಂಡಿಯಾದಲ್ಲಿ ಭಾರೀ ಹುನ್ನಾರ..!

publive-image

6 ಆಟಗಾರರ ರಿಟೈನ್​ಗೆ ಬಿಸಿಸಿಐ ಒಲವು
ಮೆಗಾ ಆಕ್ಷನ್​ ಬೇಡ ಅನ್ನೋ ಕೆಲ ಫ್ರಾಂಚೈಸಿಗಳ ನಿಲುವನ್ನ ತಳ್ಳಿ ಹಾಕಿರೋ ಬಿಸಿಸಿಐ, ಆಕ್ಷನ್​​​ ನಡೆಸೋ ತೀರ್ಮಾನವನ್ನ ತೆಗೆದುಕೊಂಡಿದೆ. ಬರೋಬ್ಬರಿ ಆಕ್ಷನ್​ಗೂ ಮುನ್ನ ಫ್ರಾಂಚೈಸಿಗಳಿಗೆ 6 ಆಟಗಾರರನ್ನ ರಿಟೈನ್​ ಮಾಡಿಕೊಳ್ಳೋ ಅವಕಾಶ ನೀಡೋ ಚಿಂತನೆ ನಡೆಸಿದೆ. ಜೊತೆಗೆ ರೈಟ್​ ಟು ಮ್ಯಾಚ್​​ ಕಾರ್ಡ್​ ಬಳಕೆಗೂ ಅವಕಾಶ ನೀಡಲು ಸಜ್ಜಾಗಿದ್ದು, ಅಧಿಕೃತ ನಿರ್ಧಾರ ಹೊರ ಬೀಳೋದಷ್ಟೇ ಬಾಕಿ ಇದೆ.

ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್​..
ಬಿಸಿಸಿಐ ಬಾಸ್​ಗಳು 6 ಆಟಗಾರರ ರಿಟೈನ್​ಗೆ ಅವಕಾಶ ನೀಡಲು ಮುಂದಾಗಿರೋದು, ಕೇಳಿ ಯಾರು ಖುಷ್​ ಆದ್ರೂ ಇಲ್ವೋ ಗೊತ್ತಿಲ್ಲ. ಧೋನಿ ಫ್ಯಾನ್ಸ್​ಗಂತೂ, ಇದಕ್ಕಿಂತ ಒಳ್ಳೆ ಗುಡ್​ನ್ಯೂಸ್​ ಬೇರೆ ಯಾವ್ದೂ ಇಲ್ಲ. 6 ಆಟಗಾರರ ರಿಟೈನ್​ಗೆ ಅವಕಾಶ ನೀಡಿದ್ದೇ ಆದರೆ 8 ಐಪಿಎಲ್​ನಲ್ಲೂ ಮಾಸ್​​ ಮಹಾರಾಜ ಮಹೇಂದ್ರ ಸಿಂಗ್​ ಧೋನಿ, ಅಂಗಳಕ್ಕಿಳಿದು ಭರ್ಜರಿ ಎಂಟರ್​​​ಟೈನ್​ಮೆಂಟ್​ ನೀಡೋದು ಫಿಕ್ಸ್​.

ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಫುಲ್​ ಖುಷ್
ಮೊನ್ನೆ ನಡೆದ ಸಭೆಯಲ್ಲಿ ಧೋನಿಯನ್ನ ತಂಡದಲ್ಲಿ ಉಳಿಸಿಕೊಳ್ಳಬೇಕು ಅನ್ನೋದೇ ಸಿಎಸ್​ಕೆ ಏಕಮೇವ ಅಜೆಂಡಾ ಆಗಿತ್ತು. ಅದಕ್ಕಾಗಿ ಈ ಹಿಂದೆ ಇದ್ದ ಅನ್​​ಕ್ಯಾಪ್ಡ್​​ ಪ್ಲೇಯರ್​ ರೂಲ್​ನ ಮತ್ತೆ ಜಾರಿ ತರಬೇಕು ಎಂಬ ದಾರ ಉರುಳಿಸಿತ್ತು. ಆ ರೋಲ್​ ಪ್ರಕಾರ 5 ವರ್ಷಕ್ಕೂ ಹಿಂದೆ ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಆಟಗಾರರನ್ನ ಕಡಿಮೆ ಮೊತ್ತಕ್ಕೆ ರಿಟೈನ್​ ಮಾಡಿಕೊಳ್ಳ ಬಹುದಿತ್ತು. ಇದೀಗ ಈ ರೂಲ್​ನ ಬದಲಾಗಿ 6 ಆಟಗಾರರ ರಿಟೈನ್​ಗೆ ಬಿಸಿಸಿಐ ಚಾನ್ಸ್​ ನೀಡಲು ಮುಂದಾಗಿದೆ. ಈ ನಿಯಮ ಜಾರಿಯಾದ್ರೆ ಸಿಎಸ್​ಕೆ ಧೋನಿಯನ್ನ ತಂಡದಲ್ಲಿ ಉಳಿಸಿಕೊಳ್ಳೋದಂತೂ ಕನ್ಫರ್ಮ್.

ಇದನ್ನೂ ಓದಿ:ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!

publive-image

IPL ಅಖಾಡಕ್ಕಿಳಿಯಲು ಧೋನಿ ರೆಡಿ
ವಯಸ್ಸು 43ರ ಗಡಿ ದಾಟಿದೆ. ಕಳೆದ 2 ಸೀಸನ್​ ಐಪಿಎಲ್​ನ ಇಂಜುರಿಯ ನೋವಿನ ನಡುವೆಯೇ ಅಡಿದ್ದಾರೆ. ಹೀಗಾಗಿ 17ನೇ ಆವೃತ್ತಿಯೇ ಧೋನಿ ಪಾಲಿಗೆ ಕೊನೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ಈ ಬಗ್ಗೆ ಮಾತನಾಡಿದ ಧೋನಿ, ಐಪಿಎಲ್​ ಆಡೋದಕ್ಕೆ ಆಸಕ್ತಿ ಇರೋದನ್ನ ಓಪನ್​ ಆಗಿ ಹೇಳಿಕೊಂಡಿದ್ರು. ಎಲ್ಲವೂ ರಿಟೈನ್​ ನಿಯಮದ ಮೇಲೆ ನಿಂತಿದೆ ಅಂದಿದ್ರು. ಇದೀಗ ಬಿಸಿಸಿಐ 6 ಆಟಗಾರರ ರಿಟೈನ್​ಗೆ ನಿರ್ಧರಿಸಿದ್ದು, ಧೋನಿ ಅಖಾಡಕ್ಕಿಳಿಯೋದು ಬಹುತೇಕ ಖಚಿತವಾಗಿದೆ.

ಧೋನಿಗಾಗಿಯೇ ಬದಲಾಗುತ್ತಾ IPL ರೂಲ್ಸ್​?
ಧೋನಿ ಐಪಿಎಲ್​ಗೆ ಗುಡ್​ ಬೈ ಹೇಳಿದ್ರೆ ಸಿಎಸ್​ಕೆ ಖದರ್​ ಕಡಿಮೆಯಾಗುತ್ತೆ ಅನ್ನೋದು ಮಾರ್ಕೆಟ್​ನ ಲೆಕ್ಕಾಚಾರ. ಅಸಲಿಗೆ ಸಿಎಸ್​ಕೆ ಮಾತ್ರವಲ್ಲ, ಧೋನಿ ನಿವೃತ್ತಿಯಾದ್ರೆ ಇಡೀ ಐಪಿಎಲ್​ನ ಬ್ರ್ಯಾಂಡ್​ವ್ಯಾಲ್ಯೂಗೂ ಹೊಡೆತ ಬೀಳಲಿದೆ. ಕಳೆದ 2 ಸೀಸನ್​ಗಳಲ್ಲಿ ಚೆನ್ನೈ ಮಾತ್ರವಲ್ಲ.. ದೇಶದ ಯಾವುದೇ ಮೂಲೆಯಲ್ಲಿ ಧೋನಿ ಆಡಿದ್ರೂ ಅಕ್ಷರಶಃ ಜಾತ್ರೆ ನಡೆದಿದೆ. ಧೋನಿ ಒಂದು ಬಾರಿ ಕಣ್ತುಂಬಿಕೊಳ್ಳಬೇಕು ಅಂತಾ ಮೈದಾನಕ್ಕೆ ನುಗ್ಗಿದ ಫ್ಯಾನ್ಸ್​ ಇದ್ದಾರೆ. ಧೋನಿ ಆಟವನ್ನ ನೋಡಬೇಕು ಅನ್ನೋ ಉದ್ದೇಶದಿಂದಲೇ ಟಿವಿ, ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಐಪಿಎಲ್​ ನೋಡಿದವರಿದ್ದಾರೆ. ಇದೀಗ ಧೋನಿ ಐಪಿಎಲ್​ಗೆ ಗುಡ್​ ಬೈ ಹೇಳಿದ್ರೆ, ಬ್ರ್ಯಾಂಡ್​​ ವ್ಯಾಲ್ಯೂ ಬೀಳದೆ ಇರುತ್ತಾ ಎಂಬ ಪ್ರಶ್ನೆ ಕೂಡ ಇದೆ.

ಇದನ್ನೂ ಓದಿ:ನೀರಜ್ ಚೋಪ್ರಾಗೆ ಚಿನ್ನ ಸಿಗುತ್ತಾ? ಡೋಪ್​​ ಟೆಸ್ಟ್​ನಲ್ಲಿ ಸಿಕ್ಕಿಬಿದ್ದರಾ ಪಾಕ್​ನ ನದೀಮ್? ಹೊಸ ಟ್ವಿಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment