ಬಾಂಗ್ಲಾ ಟಿ20 ಸರಣಿಗಾಗಿ ಸೂರ್ಯ ಪೂರ್ವಾಭ್ಯಾಸ?
ಕೋಚ್ ಮಾತನ್ನ ಗಂಭೀರವಾಗಿ ತೆಗೆದುಕೊಂಡ್ರಾ ಸೂರ್ಯ?
40 ದಿನ ರಜೆ.. ಯಾವ ಕಡೆ ಇತರೆ ಆಟಗಾರರ ನಡೆ..?
ಶ್ರೀಲಂಕಾ ಸಿರೀಸ್ ಮುಗೀತು. ಇನ್ನು ಒಂದೂವರೆ ತಿಂಗಳು. ಆಟಗಾರರಿಗೆ ಫುಲ್ ರೆಸ್ಟ್.. ಟಿ20 ಕ್ಯಾಪ್ಟನ್ ಸೂರ್ಯ, ದೇಶಿ ಕ್ರಿಕೆಟ್ ಆಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ.
ಟೀಮ್ ಇಂಡಿಯಾ ಆಟಗಾರರಿಗೆ ಈಗ ಹಾಲಿ ಡೇ.. ಒಂದಲ್ಲ.. ಎರಡಲ್ಲ.. ಬರೋಬ್ಬರಿ 5 ವಾರಗಳೂ ಟೀಮ್ ಇಂಡಿಯಾ ಆಟಗಾರರಿಗೆ ಕೆಲ್ಸಾನೇ ಇಲ್ಲ. ಸದ್ಯ ಇದೇ ರಜಾ ದಿನಗಳನ್ನ ಎಂಜಾಯ್ ಮಾಡೋಕೆ ಟೀಮ್ ಇಂಡಿಯಾ ಆಟಗಾರರು ರೆಡಿಯಾಗಿದ್ದಾರೆ. ಟಿ20 ನಾಯಕ ಸೂರ್ಯಕುಮಾರ್ ಮಾತ್ರ ಇದೇ ರಜಾ ದಿನಗಳನ್ನ ಎನ್ಕ್ಯಾಶ್ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ.
ಇದನ್ನೂ ಓದಿ:KL ರಾಹುಲ್ ಒಂದೇ ಅಲ್ಲ.. ಈ ಆಟಗಾರನೂ ಬಿಗ್ ಟಾರ್ಗೆಟ್.. ಟೀಂ ಇಂಡಿಯಾದಲ್ಲಿ ಭಾರೀ ಹುನ್ನಾರ..!
ಟೀಮ್ ಇಂಡಿಯಾದ ಆಟಗಾರರಿಗೆ ರಜೆ ಸಿಕ್ಕರೆ ಸಾಕು, ಫಾರೀನ್ ಟ್ರಿಪ್ ಹೋಗ್ತಾರೆ. ಮಸ್ತ್ ಎಂಜಾಯ್ ಮಾಡ್ತಾರೆ. ಟಿ20 ತಂಡದ ನಾಯಕ ಸೂರ್ಯಕುಮಾರ್ ಮಾತ್ರ, ಭಿನ್ನ ನಿಲುವು ತಳೆದಿದ್ದಾರೆ. ಫಾರೀನ್, ಗೀರಿನ್ ಅಂತೆಲ್ಲಾ ಬಿಟ್ಟು, ದೇಶಿ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ.
ದೇಶಿ ಕ್ರಿಕೆಟ್ನತ್ತ ಸೂರ್ಯಕುಮಾರ್ ಯಾದವ್ ಚಿತ್ತ
40 ದಿನಗಳ ಕಾಲ ಟೀಮ್ ಇಂಡಿಯಾಗೆ ಯಾವುದೇ ಮ್ಯಾಚ್ ಇಲ್ಲ. ಇದೇ ಅವಧಿಯಲ್ಲಿ ಅಖಿಲ ಭಾರತ ಬುಚ್ಚಿಬಾಬು ಕ್ರಿಕೆಟ್ ಟೂರ್ನಿ ಆಗಸ್ಟ್ 15ರಿಂದ ಆರಂಭಗೊಳ್ಳುತ್ತಿದೆ. ಈ ನಡುವೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ಸೂರ್ಯಕುಮಾರ್ ಯಾದವ್, ಬುಚ್ಚಿಬಾಬು ಟೂರ್ನಿಯಲ್ಲಿ ಆಡುವ ಮನವಿ ಮಾಡಿಕೊಂಡಿದ್ದಾರೆ. ಇದರಂತೆ ಇದೇ 27ರಂದು ನಡೆಯಲಿರುವ ಜಮ್ಮು ಕಾಶ್ಮೀರ ಎದುರಿನ ಪಂದ್ಯವನ್ನಾಡಲು ಸೂರ್ಯ ರೆಡಿಯಾಗಿದ್ದಾರೆ. ಇದಕ್ಕೆ ಕಾರಣವೂ ಇದೆ.
ಟೆಸ್ಟ್, ODI ಕಮ್ಬ್ಯಾಕ್ಗೆ ಈ ನಡೆ
ಶ್ರೀಲಂಕಾ ಎದುರಿನ ಟಿ20 ಪ್ರವಾಸದ ಅಂತ್ಯದ ಬೆನ್ನಲ್ಲೇ ಗಂಭೀರ್, ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಒಂದು ತಿಂಗಳ ಅವಧಿಯಲ್ಲಿ ಮೈ ಮರೆಯದೇ ಸ್ಕಿಲ್ಸ್ ಹಾಗೂ ಫಿಟ್ನೆಸ್ ಮೇಲೆ ವರ್ಕೌಟ್ ಮಾಡುವಂತೆ ಹೇಳಿದ್ದರು. ಈ ಮಾತನ್ನ ಸಿರೀಯಸ್ ಆಗಿಯೇ ತೆಗೆದುಕೊಂಡಿರುವ ಸೂರ್ಯ, ಟಿ20 ಸರಣಿ ಆರಂಭಕ್ಕೂ ಮುನ್ನ ನಡೆಯೋ ಈ ದೇಶಿ ಕ್ರಿಕೆಟ್ನಲ್ಲಿ ಆಡಲು ಮುಂದಾಗಿದ್ದಾರೆ. ಆ ಮೂಲಕ ಬಾಂಗ್ಲಾ ಎದುರಿನ ಟಿ20 ಸರಣಿ ವೇಳೆಗೆ ಪ್ರಿಪೇರ್ ಆಗಿರುವ ಪ್ಲಾನ್ನಲ್ಲಿದ್ದಾರೆ.
ಇದನ್ನೂ ಓದಿ:ವಿನೇಶ್ ಭಯ ಕಂಚು ಗೆದ್ದ ಅಮನ್ಗೂ ಕಾಡಿತ್ತು.. ಪಂದ್ಯ ಆರಂಭಕ್ಕೂ ಮುನ್ನ ತೂಕ ಇಳಿಸಲು ಕಸರತ್ತು ಹೇಗಿತ್ತು..?
ಟಿ20ಯಲ್ಲಿ ಮಾತ್ರವೇ ಸಕ್ಸಸ್ ಕಂಡಿರುವ ಸೂರ್ಯ, ಏಕದಿನ ಹಾಗೂ ಟೆಸ್ಟ್ನಲ್ಲಿ ಯಶಸ್ಸು ಕಾಣಲು ಹೆಣಗಾಡ್ತಿದ್ದಾರೆ. ಹೀಗಾಗಿ ಈ ರೆಡ್ ಬಾಲ್ ಟೂರ್ನಿಯಲ್ಲಿ ಹೆಡ್ ಕೋಚ್ ಗಂಭೀರ್ನ ಇಂಪ್ರೆಸ್ ಮಾಡೋ ಲೆಕ್ಕಚಾರವೂ ಇದ್ದೇ ಇದೆ. ಇದನ್ನ ಸ್ವತಃ ಸೂರ್ಯಕುಮಾರ್ ಹೇಳಿಕೊಂಡಿದ್ದಾರೆ.
ಮೂರು ಫಾರ್ಮೆಟ್ ಆಡಬೇಕು!
ನಾನು ಟೀಮ್ ಇಂಡಿಯಾ ಪರ 3 ಫಾರ್ಮೆಟ್ ಆಡಲು ಬಯಸುತ್ತೇನೆ. ಬುಚ್ಚಿ ಬಾಬುನಲ್ಲಿ ಆಡುವುದರಿಂದ ರೆಡ್ ಬಾಲ್ ಪಂದ್ಯಗಳ ಅಭ್ಯಾಸ ಆಗುತ್ತದೆ. ಇದಕ್ಕಾಗಿಯೇ ಬುಚ್ಚಿಬಾಬು ಟೂರ್ನಿಯನ್ನಾಡಲು ಬಯಸಿದ್ದೇನೆ.
ಸೂರ್ಯಕುಮಾರ್, ಟಿ20 ಕ್ಯಾಪ್ಟನ್
ಸೂರ್ಯನ ಹಾದಿಯಲ್ಲೇ ಸಾಗ್ತಾರಾ ಸ್ಟಾರ್ ಪ್ಲೇಯರ್ಸ್?
ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರೇ ವೈಫಲ್ಯ ಕಂಡಿದ್ದಾರೆ. ಸ್ಪಿನ್ನರ್ಗಳ ಎದುರು ತಿಣುಕಾಡಿದ್ದಾರೆ. ಇಂತಹ ವೇಳೆ 40 ದಿನಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಆಟಗಾರರು ದೂರ ಉಳಿಯಲಿದ್ದಾರೆ. ಇದು ಸಹಜವಾಗೇ ಟೀಮ್ ಇಂಡಿಯಾ ಮೇಲೆ ಎಫೆಕ್ಟ್ ಆಗಲಿದೆ. ಆ ಕಾರಣಕ್ಕೆ ಬಾಂಗ್ಲಾ ಎದುರಿನ ಸರಣಿಗೂ ಮುನ್ನ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್, ಸೂರ್ಯಕುಮಾರ್ ಸೇರಿದಂತೆ ಪ್ರಮುಖರು ದೇಶಿ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವ ಅನಿವಾರ್ಯ ಇದ್ದೇ ಇದೆ. ಹೀಗಾಗಿ ಸೂರ್ಯಕುಮಾರ್ ಹಾದಿಯಲ್ಲೇ ಇತರೆ ಸ್ಟಾರ್ ಆಟಗಾರರು ಸಾಗ್ತಾರಾ ಅನ್ನೋ ಅನುಮಾನ ಹುಟ್ಟಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾರ ಈ ಒಂದು ಹೇಳಿಕೆ.

ಅದು ನಮ್ಮ ಆದ್ಯತೆ ಆಗಿರುತ್ತೆ. ಲಭ್ಯವಿರುವ ಆಟಗಾರರು ರಣಜಿ ಟ್ರೋಫಿಯನ್ನು ಆಡುವುದು ಖಚಿತವಾಗಿರುತ್ತೆ. ನಮ್ಮ ದೇಶಿ ಕ್ರಿಕೆಟ್ ನಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೆನ್ನೆಲುಬಾಗಿದೆ. ದೇಶವನ್ನ ಪ್ರತಿನಿಧಿಸುತ್ತಿರುವ ಬಹಳಷ್ಟು ಆಟಗಾರರು ದೇಶಿ ಕ್ರಿಕೆಟ್‌ನಿಂದಲೇ ಬಂದಿದ್ದಾರೆ. ಆದ್ದರಿಂದ ನಮ್ಮ ದೇಶಿ ಕ್ರಿಕೆಟ್ ಎಲ್ಲರಿಗೂ ನಿರ್ಣಾಯಕವಾಗಿದೆ. ನಾವು ದೇಶಿ ಕ್ರಿಕೆಟ್‌ನ ಸ್ಪರ್ಧಾತ್ಮಕವಾಗಿ ಉಳಿಸಬೇಕಿದೆ. ನಾವು ನಮ್ಮ ಆಟಗಾರರನ್ನ ದೇಶಿ ಕ್ರಿಕೆಟ್ನಿಂದ ಹೆಚ್ಚಾಗಿ ಪಡೆಯುತ್ತೇವೆ. ಐಪಿಎಲ್ನಿಂದ ಅಲ್ಲ. ನಾವು ಯಾವಾಗ ಆಟಗಾರನನ್ನ ಟೆಸ್ಟ್, ಓಡಿಐಗೆ ಸೆಲೆಕ್ಟ್ ಮಾಡ್ತೀವೋ ಆಗ ಹೆಚ್ಚು ಚರ್ಚೆ ನಡೆಯುತ್ತೆ. ಯಾರು ರಣಜಿಯಲ್ಲಿ ಮುಷ್ತಾಕ್ ಆಲಿಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ ಅನ್ನೋದು ಚರ್ಚಿಸುತ್ತೇವೆ-ರೋಹಿತ್ ಶರ್ಮಾ, ಏಕದಿನ, ಟೆಸ್ಟ್ ತಂಡದ ನಾಯಕ
ರೋಹಿತ್ ಶರ್ಮಾರ ಈ ಹೇಳಿಕೆ ಪರೋಕ್ಷವಾಗಿ ದೇಶಿ ಕ್ರಿಕೆಟ್ ಆಡಲು ಸೂಚಿಸ್ತಾರಾ ಎಂಬ ಅನುಮಾನ ಹುಟ್ಟಿದೆ. ಯಾಕಂದ್ರೆ, ಸೆಪ್ಟೆಂಬರ್-19ರಿಂದ ಬಾಂಗ್ಲಾ ಎದುರಿನ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಈ ನಡುವೆ ಟೀಮ್ ಇಂಡಿಯಾಗೆ ಒಂದೇ ಒಂದು ಅಭ್ಯಾಸ ಪಂದ್ಯವೂ ಇಲ್ಲ. ಸದ್ಯ ಲಂಕಾ ಎದುರೇ ಟೀಮ್ ಇಂಡಿಯಾ ಪರದಾಡಿದೆ. ಹೀಗಾಗಿ ಬಾಂಗ್ಲಾ ಎದುರಿನ ಸರಣಿಗೂ ಮುನ್ನ ದೇಶಿ ಕ್ರಿಕೆಟ್ಗೆ ಒತ್ತು ನೀಡಬೇಕಿದೆ.
ಇದನ್ನೂ ಓದಿ:ಪದಕದ ಆಸೆ ಇನ್ನೂ ಜೀವಂತ; ವಿನೇಶ್ ಫೋಗಟ್ ಪರ 4 ವಾದ ಮಂಡಿಸಿದ ಹರೀಶ್ ಸಾಳ್ವೆ.. ಹೇಗಿತ್ತು ವಾದ?
ಇದಿಷ್ಟೇ ಅಲ್ಲ.. ಮುಂದಿನ 10 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಐದಾರು ಪಂದ್ಯಗಳನ್ನ ಗೆದ್ದರಷ್ಟೇ, WTC ಫೈನಲ್ ಅವಕಾಶ ಇರಲಿದೆ. ಇದಕ್ಕಾಗಿ ಬಾಂಗ್ಲಾ ಎದುರಿನ ಸರಣಿಯನ್ನೇ ಎನ್ಕ್ಯಾಶ್ ಮಾಡಿಕೊಳ್ಳಬೇಕು. ಇದಕ್ಕಾಗಿ ಪೂರ್ವ ತಯಾರಿ ನಡೆಸಬೇಕಿದೆ. ಇಲ್ಲ ಬಾಂಗ್ಲಾ ಎದುರು ಅನಾಹುತ ತಪ್ಪಿದ್ದಲ್ಲ. ಒಟ್ನಲ್ಲಿ! ಸ್ಟಾರ್ ಕ್ರಿಕೆಟಿಗರಾದ ಮೇಲೆ ದೇಶಿ ಕ್ರಿಕೆಟ್ ಆಡಲು ಟೀಮ್ ಇಂಡಿಯಾ ಆಟಗಾರರು ಹಿಂದೇಟು ಹಾಕಿದ್ರು. ಆದ್ರೀಗ ಸುದೀರ್ಘ ರಜೆಯಲ್ಲಿರುವ ಆಟಗಾರರು, ಬಾಂಗ್ಲಾ ಸರಣಿಗೂ ಮುನ್ನ ದೇಶಿ ಕ್ರಿಕೆಟ್ನಲ್ಲಿ ಆಡಿ ಸರಣಿಗೆ ಸಜ್ಜಾಗ್ತಾರಾ? ಇಲ್ವಾ ಅನ್ನೋದು ಕಾದುನೋಡಬೇಕಿದೆ.
ಇದನ್ನೂ ಓದಿ: ಮೂಗಿನಿಂದ ರಕ್ತ ಬರುತ್ತಲೇ ಇತ್ತು.. ಆದರೂ ಛಲ ಬಿಡಲಿಲ್ಲ.. ಭಾರತಕ್ಕೆ ಪದಕ ತಂದ್ಕೊಟ್ಟ ಅಮನ್ ಯಾರು
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್