newsfirstkannada.com

IPLನಲ್ಲಿ ಮೊಟ್ಟ ಮೊದಲ ಹಾಫ್​ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್​ ಪ್ಲೇಯರ್​!

Share :

Published April 28, 2024 at 10:15am

    197 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ಗೆ ಗೆಲುವು

    ನಾಯಕನಿಗೆ ಉತ್ತಮ ಸಾಥ್, ಪಂದ್ಯ ಗೆಲ್ಲಿಸಿದ ಯುವ ಬ್ಯಾಟ್ಸ್​ಮನ್

    ಮೊದಲ ಐಪಿಎಲ್​ ಹಾಫ್​ ಸೆಂಚುರಿ ಭಾರಿಸಿ ಫ್ಯಾಮಿಲಿ ಜತೆ ಸಂಭ್ರಮ

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಭರ್ಜರಿ ಗೆಲುವು ಸಾಧಿಸಿದೆ. ರಾಜಸ್ಥಾನ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿರುವ ಧ್ರುವ್ ಜುರೆಲ್ ಅವರು ಅಮೋಘವಾದ ಮೊದಲ ಐಪಿಎಲ್​ ಹಾಫ್​ ಸೆಂಚುರಿ ಭಾರಿಸಿ ತಮ್ಮ ಫ್ಯಾಮಿಲಿ ಜೊತೆ ಸಂಭ್ರಮಿಸಿದ್ದಾರೆ.

ರಾಜಸ್ಥಾನ ಗೆಲುವು ಪಡೆದ ಬಳಿಕ ಮೈದಾನಕ್ಕೆ ಆಗಮಿಸಿದ ಧ್ರುವ್ ಜುರೆಲ್ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ಐಪಿಎಲ್​ ಹಾಫ್​ ಸೆಂಚುರಿಯನ್ನು ಜುರೆಲ್ ಇಡೀ ಫ್ಯಾಮಿಲಿ ಜೊತೆ ಸಂಭ್ರಮಿಸಿದರು. ಮೈದಾನದಲ್ಲಿ ಅಜ್ಜಿ, ತಾಯಿ, ಸಹೋದರ, ಸಹೋದರಿ ಅವರು ಧ್ರುವ್ ಜುರೆಲ್​ರನ್ನ ತಬ್ಬಿಕೊಂಡು ಬೆನ್ನು ತಟ್ಟಿ ಶುಭ ಹಾರೈಸಿದರು. ಬಳಿಕ ಎಲ್ಲರೂ ಸೇರಿ ಫೋಟೋಗೆ ಪೋಸ್ ನೀಡಿದರು.

ಇದನ್ನೂ ಓದಿ: ಪಕ್ಕದ ಮನೆಯ ಕಾರಿನ ಗ್ಲಾಸ್​ಗಳನ್ನ ಒಡೆದು ಹಾಕಿದ ಸ್ಕೂಲ್ ಟೀಚರ್​.. ಕಾರಣವೇನು?

ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 197 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿತ್ತು. ಕೇವಲ 78 ರನ್​ಗೆ ಪ್ರಮುಖವಾದ 3 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕಿ ಸಿಲುಕಿತ್ತು. ಈ ವೇಳೆ ಕ್ರೀಸ್ ಕಚ್ಚಿ ನಿಂತಿದ್ದ ನಾಯಕ ಸಂಜು ಸ್ಯಾಮ್ಸನ್​ಗೆ ಜೋಡಿಯಾದ ಧ್ರುವ್ ಜುರೆಲ್ ಉತ್ತಮವಾದ ಸಾಥ್ ನೀಡಿದರು. ಇಬ್ಬರು ಪಾರ್ಟನರ್​ಶಿಫ್​ನಲ್ಲಿ ಬರೋಬ್ಬರಿ 121 ರನ್​ಗಳು ಹರಿದು ಬಂದಿದ್ದರಿಂದ ರಾಜಸ್ಥಾನ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ: Lok Sabha; ‘ಲೋಕ’ ಅಖಾಡದಲ್ಲಿ PM, CM ಅಬ್ಬರ.. ಮಗಳಿಗಾಗಿ ತಂದೆ, ಮಗನಿಗಾಗಿ ತಾಯಿ ಭರ್ಜರಿ ಕ್ಯಾಂಪೇನ್

ಇದನ್ನೂ ಓದಿ: ಹನಿ ನೀರಿಗೂ ಹಾಹಾಕಾರ.. ರೊಚ್ಚಿಗೆದ್ದ ಮಹಿಳೆಯರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ

ಇನ್ನು ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಆಟ ಪ್ರದರ್ಶಿಸಿ 33 ಎಸೆತದಲ್ಲಿ 7 ಬೌಂಡರಿ, 4 ಭರ್ಜರಿ ಸಿಕ್ಸರ್ ಸಮೇತ 71 ರನ್ ಸಿಡಿಸಿದರು. ಇನ್ನು ನಾಯಕನಿಗೆ ಸಾಥ್ ನೀಡಿದ್ದ ಧ್ರುವ್ ಜುರೆಲ್ 34 ಎಸೆತದಲ್ಲಿ 5 ಫೋರ್, 2 ಅಮೋಘವಾದ ಸಿಕ್ಸರ್​​ನಿಂದ ಐಪಿಎಲ್​​ನಲ್ಲಿ ತಮ್ಮ ಮೊಟ್ಟ ಮೊದಲ ಹಾಫ್ ​​ಸೆಂಚುರಿ ದಾಖಲಿಸಿದರು. ಧ್ರುವ್​ ಆಟಕ್ಕೆ ಗ್ಯಾಲರಿಯಲ್ಲಿ ಕುಳಿತ್ತಿದ್ದ ಅವರ ಕುಟುಂಬ ಚಪ್ಪಳೆ ತಟ್ಟಿ ಖುಷಿ ಪಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPLನಲ್ಲಿ ಮೊಟ್ಟ ಮೊದಲ ಹಾಫ್​ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್​ ಪ್ಲೇಯರ್​!

https://newsfirstlive.com/wp-content/uploads/2024/04/Dhruv_Jurel.jpg

Load More