/newsfirstlive-kannada/media/post_attachments/wp-content/uploads/2024/06/Dhruva-Sarja_Darshan.jpg)
ಬೆಂಗಳೂರು: ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದರು ಅನ್ನೋ ಆರೋಪದಲ್ಲಿ ರೇಣುಕಾಸ್ವಾಮಿ ಎಂಬ ಯುವಕ ಕೊಲೆಯಾಗಿದ್ದರು. ಈ ಕೊಲೆ ಕೇಸಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿದೆ.
ಇನ್ನು, ಅರೆಸ್ಟ್ ಆದ ಬಳಿಕ ದರ್ಶನ್ ಮತ್ತು ಗ್ಯಾಂಗ್ ಅನ್ನು ಮೆಡಿಕಲ್ ಚೆಕಪ್ ಮಾಡಿಸಿ ಕೋರ್ಟ್ನಲ್ಲಿ ಹಾಜರು ಪಡಿಸಲಾಯ್ತು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ದರ್ಶನ್ ಮತ್ತು ಗ್ಯಾಂಗ್ಗೆ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಈ ಘಟನೆ ಬಗ್ಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಯಾರು ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಇದರ ಮಧ್ಯೆ ನಟ ಧ್ರುವ ಸರ್ಜಾ ದರ್ಶನ್ಗೆ ಸಂಬಂಧಿಸಿದ ರೀಲ್ಸ್ ಒಂದು ಲೈಕ್ ಮಾಡಿದ್ದಾರೆ.
Chad @DhruvaSarja liked this post... ?♂️?#Darshan#RenukaSwamy#Dhruvasarjapic.twitter.com/OBL1HgJCBa
— Agasthya (@sachi_1933)
Chad @DhruvaSarja liked this post... 🤦♂️😅#Darshan#RenukaSwamy#Dhruvasarjapic.twitter.com/OBL1HgJCBa
— Agasthya ᵀᵒˣᶦᶜ (@sachi_1933) June 13, 2024
">June 13, 2024
ಯೆಸ್, ದರ್ಶನ್ ಕುರಿತು ಖಾಸಗಿ ಮಾಧ್ಯಮವೊಂದರಲ್ಲಿ ಸುದ್ದಿ ಮಾಡಲಾಗಿದೆ. ಕೋರ್ಟಲ್ಲಿ ನಿಮ್ಮ ಹೆಸರೇನು ಎಂದು ಕೇಳಿದ್ರೆ, ಡಿ ಬಾಸ್ ಅನ್ನೋಕೆ ಆಗಲ್ಲ. ಬದಲಿಗೆ ಆಧಾರ್ ಕಾರ್ಡ್ನಲ್ಲಿರೋ ಹೆಸರು ಹೇಳಬೇಕು ಎಂದು ಖಾಸಗಿ ಮಾಧ್ಯಮದ ಪ್ರಮುಖ ಆ್ಯಂಕರ್ ಒಬ್ಬರು ಹೇಳುತ್ತಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಧ್ರುವ ಸರ್ಜಾ ಲೈಕ್ ಕೊಟ್ಟಿದ್ದಾರೆ.
ಇದನ್ನೂ ಓದಿ:ದರ್ಶನ್ ಕೇಸ್ ಮುಚ್ಚಿ ಹಾಕಲು ಡಿಕೆಶಿಗೆ ಸಂಪರ್ಕ ಮಾಡಿದ್ರಾ? ಈ ಬಗ್ಗೆ ಡಿಸಿಎಂ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ