newsfirstkannada.com

ಡ್ರಾ..ಡ್ರಾ.. ಲಕ್ಕಿ ಡ್ರಾ.. ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದ ಉಂಗುರ!

Share :

Published May 8, 2024 at 9:42am

  ಮತ ಚಲಾಯಿಸುವಂತೆ ಓಲೈಸಲು ಸಖತ್​ ಉಪಾಯ

  ಮತದಾನ ಮಾಡಲು ಮತದಾರರನ್ನು ಓಲೈಸಲು ಲಕ್ಕಿ ಡ್ರಾ

  ಅದೃಷ್ಟ ಪರೀಕ್ಷೆಯಲ್ಲಿ ಗೆದ್ದವನಿಗೆ ವಜ್ರದ ಉಂಗುರ, ಟಿವಿ, ರೆಫ್ರಿಜರೇಟರ್​!

ಭಾರತದಲ್ಲಿ 2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮತದಾರರನ್ನು ಓಲೈಸಲು ಮತ್ತು ತಪ್ಪದೇ ಮತದಾನ ಮಾಡಲು ನಾನಾ ಸರ್ಕಸ್​ ಕೂಡ ನಡೆದಿದೆ. ಅದರಲ್ಲೂ ಬೂತ್​​ ಅನ್ನು ವಿಶೇಷವಾಗಿ ವಿನ್ಯಾಸ ಮಾಡಿ ಮತ ಚಲಾಯಿಸಿ ಎಂಬ ಸಂದೇಶ ಸಾರಾಲಾಗುತ್ತಿದೆ. ಅತ್ತ ಬೋಫಾಲ್​ನಲ್ಲಿ ಮತದಾರರಿಗಾಗಿ ವಿಶಿಷ್ಟಕ್ರಮವನ್ನು ಜರುಗಿಸಲಾಗಿದೆ. ಅದೇನು ಗೊತ್ತಾ?

ಭೋಪಾಲ್​ನ ಪ್ರತಿ ಬೂತ್​ನಲ್ಲಿ ಲಕ್ಕಿ ಡ್ರಾ ನಡೆಸಲಾಗಿದೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ ಮತದಾರರನ್ನು ಕಡ್ಡಾಯವಾಗಿ ಮತ ಚಲಾಯಿಸಲು ಬರುವಂತೆ ಓಲೈಸಲಾಗಿತ್ತು. ಅದರಂತೆ ಲಕ್ಕಿ ಡ್ರಾದಲ್ಲಿ ಓರ್ವ ಮತದಾರನಿಗೆ ವಜ್ರದ ಉಂಗುರ ಸಿಕ್ಕಿದೆ.

ಸಹಾಯಕ ನೋಡಲ್​ ಅಧಿಕಾರಿ ರಿತೇಶ್​ ಶರ್ಮಾ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಮತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಮತದಾನದ ಶೇಕಡಾವಾರು ಗಮನದಲ್ಲಿಟ್ಟುಕೊಂಡು ಭೋಪಾಲ್​ ಆಡಳಿತವು ಮತದಾರರನ್ನು ಮತ ಚಲಾಯಿಸುವಂತೆ ಓಲೈಸಿದೆ. ಕೊನೆಗೆ ಮತದಾರರನ್ನು ಉತ್ತೇಜಿಸುವ ಅಲುವಾಗಿ ಲಕ್ಕಿ ಡ್ರಾ ಇಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏಕಕಾಲದಲ್ಲಿ ಪಂಚ ಪಾಂಡವರಿಗೆ ಜನ್ಮ ನೀಡಿದ ಮಹಿಳೆ! ದಂಪತಿಗೆ ಖುಷಿಯೋ ಖುಷಿ

ಬಳಿಕ ಮಾತನಾಡಿದ ಅವರು, ಮೂವರು ಮತದಾರರಿಗೆ ಲಕ್ಕಿ ಡ್ರಾ ಬಹುಮಾನ ದೊರೆತಿದೆ. ಅದರಲ್ಲಿ ಮತಗಟ್ಟೆ 211ರಲ್ಲಿ ಮತದಾರನೊಬ್ಬನಿಗೆ ವಜ್ರದ ಉಂಗುರ ಸಿಕ್ಕಿದೆ. 2 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮೂರು ಲಕ್ಕಿ ಡ್ರಾ ನಡೆಸಲಾಗಿದೆ. ಇದಲ್ಲಿ ವಿಜೇತರೊಗೆ ರೆಫ್ರಿಜರೇಟರ್​, ಟಿವಿ, ಉಂಗುರವನ್ನು ಬಹುಮಾನವಾಗಿ ನೀಡಲಾಗಿದೆ ಎಂದು ರಿತೇಶ್​ ಶರ್ಮಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರಾ..ಡ್ರಾ.. ಲಕ್ಕಿ ಡ್ರಾ.. ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದ ಉಂಗುರ!

https://newsfirstlive.com/wp-content/uploads/2024/05/Ring.jpg

Load More