newsfirstkannada.com

ಏಕಕಾಲದಲ್ಲಿ ಪಂಚ ಪಾಂಡವರಿಗೆ ಜನ್ಮ ನೀಡಿದ ಮಹಿಳೆ! ದಂಪತಿಗೆ ಖುಷಿಯೋ ಖುಷಿ

Share :

Published May 8, 2024 at 8:58am

  ನಾವಿಬ್ಬರು.. ನಮಗೆ ಐವರು ಎಂಬ ಖುಷಿಯಲ್ಲಿ ದಂಪತಿ

  ನಾರ್ಮಲ್​ ಡೆಲಿವರಿ ಮೂಲಕ ಏಕಕಾಲದಲ್ಲಿ ಐದು ಮಕ್ಕಳ ಜನನ

  ಅಲ್ಟ್ರಾಸೌಂಡ್ ಸ್ಕ್ಯಾನ್​ ಮಾಡುವಾಗಲೇ ಈ ವಿಚಾರ ದಂಪತಿಗೆ ತಿಳಿದಿತ್ತು

ನಾವಿಬ್ಬರು ನಮಗಿಬ್ಬರು ಅನ್ನೋ ಕಾಲವಿದು. ಆದರೆ ಇಲ್ಲೊಂದು ದಂಪತಿ ಒಂದಲ್ಲಾ, ಎರಡಲ್ಲಾ, ಬರೋಬ್ಬರು ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಇದರಲ್ಲೇನು ಹೊಸತು ಅಂತೀರಾ? ಮಹಿಳೆ ಏಕಕಾಲದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳು ಆರೋಗ್ಯವಾಗಿದ್ದಾರೆ.

ಬಿಹಾರದ ಕಿಶನ್​ಗಂಜ್​ ಜಿಲ್ಲೆಯ ಪೋಥಿಯಾ ಬ್ಲಾಕ್​ನಲ್ಲಿ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಅಲ್ಲಿನ ಖಾಸಗಿ ನರ್ಸಿಂಗ್​ ಹೋಮ್​ನಲ್ಲಿ ಮಹಿಳೆ ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ಯಾವುದೇ ಆಪರೇಷನ್​ ಇಲ್ಲದೆಯೇ ನಾರ್ಮಲ್​ ಡೆಲಿವರಿ ಮೂಲಕ ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಕಿಶನ್​ಗಂಜ್​ ಜಿಲ್ಲೆಯ ಠಾಕೂರ್​​ಗಂಜ್​ ಬ್ಲಾಕ್​​​ನ ಜಲ್​ ಮಿಲ್ಲಿಕ್​ ಗ್ರಾಮದ ಜಾವೇದ್​ ಆಲಂ ಮತ್ತು ಅವರ ಪತ್ನಿ ತಾಹೇರಾ ಬೇಗಂಗೆ ಪಂಚ ಪಾಂಡವರು ಜನಿಸಿದ್ದಾರೆ. ವೈದ್ಯೆ ಡಾ.ಫರ್ಜಾನಾ ನೂರಿ ನೇತೃತ್ವದಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಐಫೋನ್​ಗಾಗಿ ಭಾರತೀಯರು ಪಾವತಿಸುವ ತೆರಿಗೆ ಎಷ್ಟು ಗೊತ್ತಾ? ಯಾಕಿಷ್ಟು ವ್ಯತ್ಯಾಸ?

ಇನ್ನು ಜಾವೇದ್​ ಆಲಂ ಮತ್ತು ಅವರ ಪತ್ನಿ ತಾಹೇರಾ ಬೇಗಂಗೆ ಈಗಾಗಲೇ ಒಬ್ಬ ಮಗನಿದ್ದಾನೆ. ತಾಹೇರಾ ಬೇಗಂ 2 ತಿಂಗಳ ಗರ್ಭಿಣಿ ಸಮಯದಲ್ಲಿ ಅಲ್ಟ್ರಾಸೌಂಡ್​ ಮೂಲಕ ಪರೀಕ್ಷೆ ಮಾಡಿಸಿದ್ದರು. ಆದರೆ ಈ ವೇಳೆ 4 ಮಕ್ಕಳಿರುವುದು ಗೊತ್ತಾಯಿತು. ಬಳಿಕ ಮತ್ತೊಂದು ಸಾರಿ ಬಂದಾಗ 5 ಮಕ್ಕಳಿರುವುದನ್ನು ಡಾಕ್ಟರ್​ ದೃಢಪಡಿಸಿದರು.

ಸದ್ಯ ಜಾವೇದ್​ ಆಲಂ ಮತ್ತು ಅವರ ಪತ್ನಿ ತಾಹೇರಾ ಬೇಗಂ 6 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಏಕಕಾಳದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ದಂಪತಿ ಸಂತೋಷದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಕಕಾಲದಲ್ಲಿ ಪಂಚ ಪಾಂಡವರಿಗೆ ಜನ್ಮ ನೀಡಿದ ಮಹಿಳೆ! ದಂಪತಿಗೆ ಖುಷಿಯೋ ಖುಷಿ

https://newsfirstlive.com/wp-content/uploads/2024/05/5-children.jpg

Load More