newsfirstkannada.com

ಅಬ್ಬಾ.. ಐಫೋನ್​ಗಾಗಿ ಭಾರತೀಯರು ಪಾವತಿಸುವ ತೆರಿಗೆ ಎಷ್ಟು ಗೊತ್ತಾ? ಯಾಕಿಷ್ಟು ವ್ಯತ್ಯಾಸ?

Share :

Published May 8, 2024 at 8:24am

    ಐಫೋನ್​ 15 ಪ್ರೊ ಖರೀದಿಸುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ಓದಿ

    ಆ್ಯಪಲ್​ ಐಫೋನ್​ ತೆರಿಗೆ ಹೊರೆಯ ಬಗ್ಗೆ ಎಷ್ಟು ಜನಕ್ಕೆ ಗೊತ್ತಿದೆ?

    ಭಾರತದಲ್ಲೇ ಉತ್ಪಾದನಾ ಘಟಕವಿದ್ದರೂ ಅಷ್ಟೊಂದು ಬೆಲೆ ಯಾಕೆ?

ಐಫೋನ್​. ಭಾರತೀಯರ ನಿದ್ದೆ ಕೆಡಿಸಿದ ಸಾಧನ. ಅದರಲ್ಲೂ ಈಗಿನ ಜನರೇಶನ್​ ಐಫೋನ್​ ಮೊರೆ ಹೋಗೋದೆ ಜಾಸ್ತಿ. ಕಾಲೇಜು ಯುವಕ, ಯುವತಿಯರ ಕೈಯಲ್ಲೂ ಕೂಡ ಐಫೋನ್​ ಕಾಣಬಹುದು. ಹಾಗಾಗಿ ಆ್ಯಂಡ್ರಾಯ್ಡ್​ ನಡುವೆ ಭಾರತದಲ್ಲಿ ಐಫೋನ್​ ಕೊಂಚ ಮೇಲೂಗೈ ಸಾಧಿಸುತ್ತಿದೆ.

ಅಚ್ಚರಿ ಸಂಗತಿ ಎಂದರೆ ಬಹುತೇಕ ಜನರು ಕುಪರ್ಟಿನೋ ಮೂಲದ ಆ್ಯಪಲ್​ ಒಡೆತನದ ಐಫೊನ್​ ಖರೀದಿಸುತ್ತಾರೆ. ಆದರೆ ಐಫೋನ್​ ಮೂಲಕ ಭಾರತೀಯರು ಎಷ್ಟು ತೆರಿಗೆ ನೀಡುತ್ತಾರೆ ಎಂಬುದು ಗೊತ್ತಿದ್ಯಾ?. ಈ ಸ್ಟೋರಿ ಪೂರ್ತಿ ಓದಿ.

ಕಳೆದ ತಿಂಗಳು ಡಾಲರ್​ ಎದುರು ಭಾರತೀಯ ರೂಪಾಯಿ ಕುಸಿದಿದೆ. ಹೀಗಾಗಿ ಐಫೋನ್​ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಐಫೋನ್​ 15 ಮತ್ತು ಐಫೊನ್​ 15 ಪ್ಲಸ್​ ಬೆಲೆಯನ್ನು ಮಿತಿಗೊಳಿಸಿದರೂ ಸಹ ಐಫೋನ್​ ಪ್ರೊ ಬೆಲೆ ಮಾತ್ರ ಏರಿಕೆಯಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 1,34,900 ರೂ.ಗೆ ಐಫೋನ್​ 12 ಪ್ರೊ (128ಜಿಬಿ) ಸಿಗುತ್ತಿದೆ.

ಇದನ್ನೂ ಓದಿ: ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ.. ಚಿಕ್ಕೋಡಿ ಅತಿ ಹೆಚ್ಚು! ಹಾಗಿದ್ರೆ ಅತಿ ಕಡಿಮೆ ಮತದಾನ ಮಾಡಿದ ಕ್ಷೇತ್ರ ಯಾವುದು?

ಅಮೆರಿಕಾದಲ್ಲಿ ಇದೇ ಐಫೋನ್​ 15 ಪ್ರೊ ಬೆಲೆ 84 ಸಾವಿರ ರೂಪಾಯಿಯಾಗಿದೆ. ಹೆಚ್ಚೆಂದರೆ 90 ಸಾವಿರದ ಒಳಗೆ ಯುಎಸ್​ಎಯಲ್ಲಿ ಹೊಸ ಐಫೋನ್​ 15 ಪ್ರೊ ಖರೀದಿಸಬಹುದಾಗಿದೆ. ಭಾರತ ಮತ್ತು ಅಮೆರಿಕಾ ದೇಶವನ್ನು ಗಮನಿಸಿದಾಗ ಐಫೋನ್​ 15 ಪ್ರೊ ಬೆಲೆ ವ್ಯತ್ಯಾಸದ ಬಗ್ಗೆ ಅನೇಕರು ದೂರುತ್ತಾರೆ. ಕೊನೆಗೆ ದೂರುತ್ತಲೇ ಖರೀದಿಸುತ್ತಾರೆ. ಆದರೆ ಭಾರತೀಯರು ಐಫೋನ್​ಗಾಗಿ ದೊಡ್ಡ ಮೊತ್ತದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ ಎಂದರೆ ನಂಬಲೇ ಬೇಕು.

ಅಮೆರಿಕಾದಲ್ಲೆಷ್ಟು?

ಮೊದಲ ಹೇಳಿದಂತೆ ಅಮೆರಿಕಾದಲ್ಲಿ ಐಫೋನ್​ 15 ಪ್ರೊ 84 ಸಾವಿರ ರೂಪಾಯಿಗೆ ಸಿಗುತ್ತದೆ. ಆದರೆ ಇದಕ್ಕೆ ಅಲ್ಲಿನ ರಾಜ್ಯ ತೆರಿಗೆ ಅನ್ವಯವಾಗೋದಿಲ್ಲ. ಆದರೆ ಕೆಲವು ದೇಶ ರಾಜ್ಯಗಳನ್ನು ಗಮನಿಸಿದಾಗ ಶೇ.7ರಷ್ಟು ತೆರಿಗೆ ಹೆಚ್ಚಾಗುತ್ತಾ ಹೋಗುತ್ತದೆ.

ನೀವೆಷ್ಟು ತೆರಿಗೆ ಪಾವತಿಸುತ್ತೀರಿ?

ಭಾರತದಲ್ಲಿ ಐಫೋನ್​ 15 ಪ್ರೊ ತೆರಿಗೆಯನ್ನು ಗಮನಿಸುವುದಾದರೆ. ಬೆಲೆ 1,34,900 ರೂಪಾಯಿಯಾಗಿದೆ. ಇದಕ್ಕೆ ಶೇ18ರಷ್ಟು ಜಿಎಸ್​ಟಿ ಅನ್ವಯವಾಗುತ್ತದೆ. ಅಂದರೆ 20,577 ರೂಪಾಯಿ. ಇನ್ನು ಇದರ ಆಮದು, ಟ್ಯಾಕ್ಸ್​ ಶೇ 22ರಷ್ಟು ಸೇರಿಸುವ ಮೂಲಕ 20,615 ರೂಪಾಯಿ ಆಗುತ್ತದೆ. ಒಟ್ಟಿನಲ್ಲಿ ಭಾರತೀಯರು 41,193 ರೂಪಾಯಿಯನ್ನು ತೆರಿಗೆ ರೂಪಾದಲ್ಲಿ ಐಫೋನ್​ 15 ಪ್ರೊಗೆ ನೀಡಬೇಕಿದೆ. ಅದಕ್ಕಾಗಿ 1,34,900 ರೂಪಾಯಿ ಕೊಡಬೇಕಿದೆ.

ಇನ್ನು ಭಾರತದಲ್ಲೇ ಐಫೋನ್​ ಘಟನವಿದ್ದರೂ ಸಹ ಶೇ2.5 ರಿಂದ ಶೇ.12ರವರೆಗೆ ಸುಂಕವನ್ನು ಎರಿಳಿತ ಮಾಡುತ್ತಿರುತ್ತದೆ. ಇನ್ನು ದೇಶಕ್ಕೆ ಆಮದು ಮಾಡುವುದಾದರೆ ಪ್ರತಿಶತ 20ರಷ್ಟು ಕಸ್ಟಂ ಸುಂಕ, 2 ಪ್ರತಿಶತ ಸೆಸ್​​ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಐಫೋನ್​ಗಾಗಿ ಭಾರತೀಯರು ಪಾವತಿಸುವ ತೆರಿಗೆ ಎಷ್ಟು ಗೊತ್ತಾ? ಯಾಕಿಷ್ಟು ವ್ಯತ್ಯಾಸ?

https://newsfirstlive.com/wp-content/uploads/2024/05/Iphone-16-1.jpg

Load More