newsfirstkannada.com

ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ.. ಚಿಕ್ಕೋಡಿ ಅತಿ ಹೆಚ್ಚು! ಹಾಗಿದ್ರೆ ಅತಿ ಕಡಿಮೆ ಮತದಾನ ಮಾಡಿದ ಕ್ಷೇತ್ರ ಯಾವುದು?

Share :

Published May 8, 2024 at 7:24am

  ಪೂರ್ಣಗೊಂಡ ಎರಡನೇ ಹಂತದ ಮತದಾನ

  ಲೋಕ ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಭದ್ರ

  ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ ಮತದಾರರು

ರಾಜ್ಯದ 2ನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಹಾಕಿದ್ರು. ರಾಜ್ಯದಲ್ಲಿ ಮೊದಲ ಹಂತಕ್ಕಿಂತ 2ನೇ ಹಂತದಲ್ಲಿ ಹೆಚ್ಚು ಮತದಾನವಾಗಿದೆ. ಚಿಕ್ಕೋಡಿಯಲ್ಲಿ ಹೆಚ್ಚು ಮತದಾನವಾದ್ರೆ, ಕಲಬುರಗಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ. ಹಾಗಾದ್ರೆ ಯಾವ ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ ಆಗಿದೆ ಅನ್ನೋ ಬಗ್ಗೆ ಕಂಪ್ಲೀಟ್​ ರಿಪೋರ್ಟ್​ ಇಲ್ಲಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಅಬ್ಬರಕ್ಕೆ ತೆರೆಬಿದ್ದಿದೆ. 2 ಹಂತಗಳ ಪ್ರಜಾಪ್ರಭುತ್ವ ಯುದ್ಧದ ಮತದಾನ ಮುಕ್ತಾಯವಾಗಿದೆ. 28 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

‘ಲೋಕ’ ಅಭ್ಯರ್ಥಿಗಳ ಹಣೆಬರಹ ಮತಯಂತ್ರದಲ್ಲಿ ಭದ್ರ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. 14 ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದ್ದು, ಲೋಕ ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಭದ್ರವಾಗಿದೆ. ಉತ್ತರಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಜನರು ಬಿಸಿಲನ್ನೂ ಲೆಕ್ಕಿಸದೇ, ಬಹಳ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಮುಗಿದ ಬಳಿಕ ಬಿಗಿ ಭದ್ರತೆಯಲ್ಲಿ ಮತಯಂತ್ರಗಳನ್ನು ಸ್ಟ್ರಾಂಗ್​ ರೂಂಗೆ ರವಾನೆ ಮಾಡಲಾಗಿದೆ. ಇವಿಎಂ ಮಷಿನ್‌ಗಳಿರುವ ಸ್ಟ್ರಾಂಗ್​ ರೂಮ್​ಗೆ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ.

ಚಿಕ್ಕೋಡಿಯಲ್ಲಿ ಅತಿಹೆಚ್ಚು.. ಕಲಬುರಗಿಯಲ್ಲಿ ಕಡಿಮೆ ಮತದಾನ

ಏಪ್ರಿಲ್ 26ರಂದು ನಡೆದ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡ 69.56 ರಷ್ಟು ಮತದಾನವಾಗಿತ್ತು. ಇದೀಗ ಉತ್ತರ ಕರ್ನಾಟಕ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಒಟ್ಟಾರೆ ಶೇಕಡ 70.41 ರಷ್ಟು ಮತದಾನವಾಗಿದೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಆದ್ರೆ ಕಲಬುರಗಿ ಅತಿ ಕಡಿಮೆ ಮತದಾನವಾದ ಲೋಕಸಭಾ ಕ್ಷೇತ್ರವಾಗಿದೆ. ಹಾಗಾದ್ರೆ ಯಾವ ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನವಾಗಿದೆ ಅನ್ನೋದನ್ನ ಗಮನಿಸೋಣ

‘ಲೋಕ’ ಶೇಕಡಾವಾರು ಮತದಾನ

ಚಿಕ್ಕೋಡಿ-76.47%
ಬಾಗಲಕೋಟೆ-70.10%
ಬೆಳಗಾವಿ-71%
ಬಳ್ಳಾರಿ -72.37%
ಬೀದರ್-63.55%
ವಿಜಯಪುರ-64.71%
ಚಿಕ್ಕೋಡಿ-76.47%
ದಾವಣಗೆರೆ-76.23%
ಹಾವೇರಿ- 74.75%
ಕೊಪ್ಪಳ -69.87%
ರಾಯಚೂರು-61.81%
ಧಾರವಾಡ-72.12%
ಗುಲ್ಬರ್ಗಾ-61.73%
ಶಿವಮೊಗ್ಗ- 76.05%
ಉತ್ತರ ಕನ್ನಡ-73.52%
ಕಲಬುರಗಿ-61.73%

ಉತ್ತರಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಈ ನಡುವೆಯೂ ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿಯೇ ಉತ್ತರ ಕರ್ನಾಟಕದಲ್ಲಿ ಮತದಾನ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸುರಿದ ಆಲಿಕಲ್ಲು ಮಳೆ.. ತಂಪು ತಂಪು ಕೂಲ್​ ಕೂಲ್​ ಆದ ಕಾಫಿನಾಡು, ತುಮಕೂರು, ಹಾಸನ

ಒಟ್ಟಾರೆ, ಕರ್ನಾಟಕದ ಲೋಕ ಕದನದ 2ನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಎಲ್ಲ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಮಾಸ್ಟರಿಂಗ್​ ಕೇಂದ್ರವನ್ನು ತಲುಪಿವೆ. ಇದೀಗ ಅಖಾಡದಲ್ಲಿದ್ದ ಲೋಕಸಭಾ ಸೇನಾನಿಗಳ ಭವಿಷ್ಯವನ್ನ ಮತದಾರ ನಿರ್ಧಾರ ಮಾಡಾಗಿದೆ. ಹೀಗಾಗಿ ಅಭ್ಯರ್ಥಿಗಳಲ್ಲಿ ಎದೆಬಡಿತ ಜೋರಾಗಿದ್ದು, ಜೂನ್‌ 4ಕ್ಕೆ ಎಲ್ಲರ ಹಣೆಬರಹ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ.. ಚಿಕ್ಕೋಡಿ ಅತಿ ಹೆಚ್ಚು! ಹಾಗಿದ್ರೆ ಅತಿ ಕಡಿಮೆ ಮತದಾನ ಮಾಡಿದ ಕ್ಷೇತ್ರ ಯಾವುದು?

https://newsfirstlive.com/wp-content/uploads/2024/05/Election-2024-Hubli.jpg

Load More