newsfirstkannada.com

ನೂಡಲ್ಸ್‌ನಲ್ಲಿ ಕೋಟಿ, ಕೋಟಿ ಬೆಲೆ ಬಾಳುವ ಡೈಮಂಡ್ ಸಾಗಾಟ; ತಗ್ಲಾಕೊಂಡಿದ್ದೇ ರೋಚಕ!

Share :

Published April 23, 2024 at 6:12pm

Update April 23, 2024 at 6:13pm

    ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿಯಿಂದ ಡೈಮಂಡ್‌ ಸ್ಮಗ್ಲಿಂಗ್‌ ಯತ್ನ

    ಖಾಸಗಿ ಭಾಗದಲ್ಲಿ 4.44 ಕೋಟಿ ಬೆಲೆ ಬಾಳುವ 6.8 ಕೆಜಿ ಚಿನ್ನ ಸಾಗಾಟ

    ನೂಡಲ್ಸ್ ಪ್ಯಾಕೆಟ್‌ನಲ್ಲಿ ಇದ್ದ ಡೈಮಂಡ್‌ ಬೆಲೆ ಎಷ್ಟು ಕೋಟಿ ಗೊತ್ತಾ?

ಮುಂಬೈ: ಕಳ್ಳರು, ಖದೀಮರು ಮಾಡೋ ಐಡಿಯಾ ಒಂದೆರಡಲ್ಲ. ಎಷ್ಟೋ ಸಾರಿ ಅವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಾರೆ. ಆದರೆ, ಒಂದಲ್ಲ ಒಂದು ದಿನ ತಗ್ಲಾಕೊಳ್ಳೋದು ಪಕ್ಕಾ. ಮುಂಬೈ ಏರ್‌ಪೋರ್ಟ್‌ನಲ್ಲೂ ಖತರ್ನಾಕ್ ಖದೀಮರನ್ನ ಬಂಧಿಸಲಾಗಿದೆ. ಇವರು ಮಾಡಿರೋ ಮಾಸ್ಟರ್‌ ಪ್ಲಾನ್‌ಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಮುಂಬೈ ಏರ್‌ಪೋರ್ಟ್‌ನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಡೈಮಂಡ್‌ ಹಾಗೂ ಚಿನ್ನ ಕಳ್ಳ ಸಾಗಾಟ ಮಾಡಲು ಯತ್ನಿಸಲಾಗಿದೆ. ಕಸ್ಟಮ್ಸ್ ಅಧಿಕಾರಿ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 4.44 ಕೋಟಿ ಬೆಲೆ ಬಾಳುವ 6.8 ಕೆಜಿ ಚಿನ್ನ ಮತ್ತು 2.2 ಕೋಟಿ ಮೌಲ್ಯದ ಡೈಮಂಡ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಮಂಚದ ಮೇಲೆ ಮಲಗಿದ್ದ ಆಂಟಿಯ ಕತ್ತು ಹಿಸುಕಿದ.. ಕೊಡಿಗೇಹಳ್ಳಿ ಕೊಲೆಗಾರ ಸಿಕ್ಕಿದ್ದೇ ರೋಚಕ!

ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ಡೈಮಂಡ್‌ಗಳನ್ನು ನೂಡಲ್ಸ್ ಪ್ಯಾಕೆಟ್‌ ಸಾಗಿಸುತ್ತಿದ್ದ. ನೂಡಲ್ಸ್‌ ಪರಿಶೀಲಿಸಿದಾಗ ಡೈಮಂಡ್ ಸ್ಮಗ್ಲಿಂಗ್ ಮಾಡುತ್ತಿದ್ದ ರೋಚಕ ವಿಷಯ ಬಯಲಾಗಿದೆ. ಕಸ್ಟಮ್ಸ್‌ ಅಧಿಕಾರಿಗಳು ನೂಡಲ್ಸ್ ಪ್ಯಾಕೆಟ್‌ ಅನ್ನು ಪರಿಶೀಲನೆ ಮಾಡಿ 2.2 ಕೋಟಿ ಮೌಲ್ಯದ ಡೈಮಂಡ್‌ ಅನ್ನು ವಶ ಪಡಿಸಿಕೊಂಡಿದ್ದಾರೆ.

ನೂಡಲ್ಸ್‌ನಲ್ಲಿ ಡೈಮಂಡ್ ಬಚ್ಚಿಟ್ಟಿದ್ದ ವ್ಯಕ್ತಿ ತನ್ನ ಖಾಸಗಿ ಭಾಗದಲ್ಲಿ 4.44 ಕೋಟಿ ಬೆಲೆ ಬಾಳುವ 6.8 ಕೆಜಿ ಚಿನ್ನವನ್ನು ಸಾಗಿಸಲು ಯತ್ನಿಸಿದ್ದಾರೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಒಟ್ಟು 6.46 ಕೋಟಿ ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಈ ಕಳ್ಳ ಸಾಗಾಟದ ಆರೋಪದ ಮೇಲೆ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ.

ಸ್ಮಗ್ಲಿಂಗ್ ಮಾಡುತ್ತಿದ್ದವರು ಭಾರತೀಯ ಪ್ರಜೆಗಳಾಗಿದ್ದು ಮುಂಬೈನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದರು. ಟ್ರಾಲಿ ಲಗೇಜ್ ಬ್ಯಾಗ್‌ನಲ್ಲಿ ನೂಡಲ್ಸ್ ಪ್ಯಾಕೆಟ್ ಚೆಕ್ ಮಾಡಿದಾಗ ಡೈಮಂಡ್‌ಗಳು ಇರೋದು ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂಡಲ್ಸ್‌ನಲ್ಲಿ ಕೋಟಿ, ಕೋಟಿ ಬೆಲೆ ಬಾಳುವ ಡೈಮಂಡ್ ಸಾಗಾಟ; ತಗ್ಲಾಕೊಂಡಿದ್ದೇ ರೋಚಕ!

https://newsfirstlive.com/wp-content/uploads/2024/04/Mumbai-Airport.jpg

Load More