ಭಾರತೀಯರ ಡಯಟ್ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ICMR
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಗೈಡ್ಲೈನ್ಸ್ನಲ್ಲಿ ಏನಿದೆ
ಭಾರತೀಯರು ನಿತ್ಯ ಸೇವಿಸಬೇಕಾದ ಆಹಾರ ಪದ್ಧತಿ ಹೇಗಿರಬೇಕು ಗೊತ್ತಾ?
ನವದೆಹಲಿ: ಆಹಾರ ಪದ್ಧತಿ, ಆಯಾ ಆಯಾ ದೇಶದ ಹವಾಮಾನ, ವಾತವಾರಣದ ಮೇಲೆ ಅವಲಂಬನೆಯಾಗುತ್ತದೆ. ಆದ್ರೆ ಜನರು ಯಾವುದ್ಯಾವುದೋ ಆಹಾರವನ್ನು ಸೇವಿಸಿ ಇಲ್ಲದ ಆರೋಗ್ಯದ ಸಮಸ್ಯೆಗಳಿಗೆ ಈಡಾಗುತ್ತಾರೆ. ಹಾಗಿದ್ರೆ ಭಾರತೀಯರಾದ ನಾವು ಏನು ತಿನ್ನಬೇಕು ಗೊತ್ತಾ.ಅದಕ್ಕೆ ಅಂತ ಕೆಲವು ಆಹಾರಗಳು ಮೀಸಲಿವೆ. ಅದು ಇಂತಿಷ್ಟು ಪ್ರಮಾಣ ಸೇವಿಸಬೇಕು ಅಂತಲೇ ಒಂದು ಮಾರ್ಗಸೂಚಿ ಬಿಡುಗಡೆಯಾಗಿದೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ICMR) ಈ ಬಗ್ಗೆ ಒಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು. ಭಾರತೀಯರ ಡಯಟ್ ಹೇಗಿರಬೇಕು ಎಂಬುದನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ ಚಿಹ್ನೆ ಆಗಿರಬಹುದು.. ಈಗಲೇ ಎಚ್ಚೆತ್ತುಕೊಳ್ಳಿ..!
ನಮ್ಮ ದೇಶದಲ್ಲಿ ಫಿಜ್ಜಾ ಬರ್ಗರ್ಗಳ ಹಾವಳಿ, ಮೊಮೊಸ್ನಂತಹ ಆಹಾರಕ್ಕೆ ಮೊರೆಹೋಗುವುದು ಜಾಸ್ತಿ. ಆದರೆ ನಮಗೆ ನಮ್ಮದೇ ಆದ ಒಂದು ಆಹಾರ ಪದ್ಧತಿಯಿದೆ. ಈ ದೇಶದ ಹವಾಮಾನಗುಣಕ್ಕನುಗಣವಾಗಿ ನಾವು ಏನನ್ನು ಸೇವನೆ ಮಾಡಬೇಕು, ಪ್ರತಿನಿತ್ಯ ಯಾವುದು, ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಬೇಕು ಅಂತ ICMR ಒಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ ಅದರಲ್ಲಿ ಉಲ್ಲೇಖವಾಗಿರುವ ಆಹಾರಗಳ ಸವಿವರವಾಗಿ ನಾವು ನಿಮಗೆ ಹೇಳುತ್ತೇವೆ.
ಹಣ್ಣುಗಳು ಮತ್ತು ಹಾಲು
ಹಣ್ಣುಗಳು ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಣ್ಣುಗಳಲ್ಲಿ ಇದೇ ಹಣ್ಣು ತಿನ್ನಬೇಕು ಎಂಬುದೇನು ಇಲ್ಲ. ಹಾಗಂತ ಅವುಗಳನ್ನು ಅತಿಯಾಗಿಯೂ ತಿನ್ನಬಾರದು ಕೂಡ. ನಮ್ಮ ದೇಹದ ಆರೋಗ್ಯ ಸದೃಢವಾಡಲು ದಿನಕ್ಕೆ 100 ಗ್ರಾಂನಷ್ಟು ಹಣ್ಣುಗಳು ನಮ್ಮ ದೇಹ ಸೇರಬೇಕು ಎಂದು ಐಸಿಎಂಆರ್ ಗೈಡ್ಲೈನ್ಸ್ನಲ್ಲಿ ಉಲ್ಲೇಖವಾಗಿದೆ.ಇನ್ನು ದಿನಕ್ಕೆ 300 ಮಿಲಿ ಲೀಟರ್ನಷ್ಟು ಹಾಲು ಇಲ್ಲವೇ ಮೊಸರು ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ
ಕಾಳುಗಳು, ಮೊಟ್ಟೆ ಮತ್ತು ಮಾಂಸಾಹಾರ
ಕಾಳುಗಳಲ್ಲಿ ಹಾಗೂ ಮೊಟ್ಟೆಯಲ್ಲಿ ಹೆಚ್ಚು ಪೌಷ್ಠಿಕಾಂಶಗಳು ಇರುತ್ತವೆ. ಮಾಂಸಾಹಾರವೂ ಕೂಡ ದೇಹಕ್ಕೆ ಇತಿಮಿತಿಯಲ್ಲಿ ಸೇವಿಸಿದರೆ ಒಳ್ಳೆಯರು ಐಸಿಎಂಆರ್ ಹೇಳುವ ಪ್ರಕಾರ, ಪ್ರತಿನಿತ್ಯವು ನಮ್ಮ ದೇಹಕ್ಕೆ 85 ಗ್ರಾಂನಷ್ಟು ಮೊಟ್ಟೆ, ಕಾಳುಗಳು ಅಥವಾ ಮಾಂಸಾಹಾರ ಸೇವನೆ ಒಳ್ಳೆಯದು ಎಂದು ಐಸಿಎಂಆರ್ ಹೇಳಿದೆ.
ಧಾನ್ಯಗಳು ಹಾಗೂ ಪೌಷ್ಠಿಕಾಂಶಗಳು
ಧಾನ್ಯಗಳು ಹಾಗೂ ಪೌಷ್ಠಿಕಾಂಶವನ್ನೊಳಗೊಂಡ ಆಹಾರ. ಇವುಗಳನ್ನು ನಿತ್ಯ 250 ಗ್ರಾಂ ನಾವು ಸೇವಿಸಬೇಕು ಎಂದು ಐಸಿಎಂಆರ್ ಮಾರ್ಗಸೂಚಿಯಲ್ಲಿದೆ. ಜೋಳ, ಅಕ್ಕಿ. ಮೆಕ್ಕೆಜೋಳ, ರಾಗಿಯಂತಹ ಧಾನ್ಯಗಳಿಂದ ಸಿದ್ಧಗೊಳಿಸಿದ ಆಹಾರ ನಿತ್ಯ ಕನಿಷ್ಠವೆಂದರೂ ಕಾಲುಕೆಜಿಯಷ್ಟು ನಮ್ಮ ದೇಹ ಸೇರಿದರೆ ಒಳ್ಳೆಯದು.
ಇದನ್ನೂ ಓದಿ: ನೀವು ತೂಕ ಇಳಿಸಬೇಕಾ ಸೌತೆಕಾಯಿ ಹೆಚ್ಚು ತಿನ್ನಿ; Cucumberನಿಂದ ಆರೋಗ್ಯಕ್ಕೆ 5 ಲಾಭ; ಯಾವುವು?
ತರಕಾರಿಗಳು
ವಿಶ್ವದಲ್ಲಿ ಚೀನಾ ಬಿಟ್ಟರೆ ಅತಿಹೆಚ್ಚು ತರಕಾರಿ ಬೆಳೆಯುವ ದೇಶ ಅಂದ್ರೆ ಅದು ಭಾರತ. ಇಲ್ಲಿ ಅನೇಕ ರೀತಿಯ ಆರೋಗ್ಯಕರ ತರಕಾರಿಗಳನ್ನು ಬೆಳೆಯಲಾಗುತ್ತದೆ. ಇಂತಹ ತರಕಾರಿಗಳನ್ನು ನಿತ್ಯ ತಿನ್ನಬೇಕು ಎನ್ನುತ್ತದೆ ಐಸಿಎಂಆರ್ ಗೈಡ್ಲೈನ್ಸ್. ನಿತ್ಯ 400 ಗ್ರಾಂನಷ್ಟು ತರಕಾರಿ ದೇಹಕ್ಕೆ ಸೇರುವುದರಿಂದ ಸದೃಢ, ಆರೋಗ್ಯಕರ ದೇಹ ನಮ್ಮದಾಗುತ್ತದೆ ಎಂದು ಐಸಿಎಂಆರ್ ಹೇಳಿದೆ.
ಇದು ಭಾರತೀಯರೆ ಪಾಲಿಸಬೇಕಾದ ಆಹಾರ ಪದ್ಧತಿ. ನಿತ್ಯ ರೀತಿಯ ಆಹಾರವನ್ನು ಸೇವಿಸಿ ಆರೋಗ್ಯಕರ ದೇಹವನ್ನು ನಿಮ್ಮದಾಗಿಸಿಕೊಳ್ಳಿ. ಫಾಸ್ಟ್ಫುಡ್, ಚೀಸ್ಯುಕ್ತ ಆಹಾರಗಳು, ನಮ್ಮ ದೇಹಕ್ಕೆ ಒಗ್ಗದಂತ ಆಹಾರಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ, ಈ ರೀತಿಯ ಆಹಾರ ಪದ್ಧತಿ ನಿಮ್ಮದಾಗಿಸಿಕೊಂಡಲ್ಲಿ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ