newsfirstkannada.com

RCBಗಿಂತ LSG ಭಿನ್ನ!! ಗೆಲುವಿನ ಹುಡುಕಾಟದಲ್ಲಿರೋ ಬೆಂಗಳೂರಿಗೆ ಈ ವಿಚಾರಗಳು ಗೊತ್ತಿರಲೇಬೇಕು!

Share :

Published April 2, 2024 at 12:26pm

Update April 2, 2024 at 1:02pm

    ಎಡಗೈ ಬ್ಯಾಟ್ಸ್​​​​ಮನ್​ಗಳೇ ಲಕ್ನೋ ಸೂಪರ್​ ಜೈಂಟ್ಸ್​​ ತಂಡದ ‘ಲಕ್’​

    ಡಿಸ್ಟ್ರಕ್ಟಿವ್ ಕ್ವಿಂಟನ್ ಡಿ ಕಾಕ್ ಅಂಡ್ ಪವರ್​​ಫುಲ್​ ಆಗಿದ್ದಾರೆ ಪಡಿಕ್ಕಲ್

    ಗೇಮ್​​​​​​​​​​ ಚೇಂಜರ್ ನಿಕೋಲಸ್ ಪೂರನ್​ ಬಲ, ಕೆ.ಎಲ್​.ರಾಹುಲ್ ಕ್ಯಾಪ್ಟನ್ಸಿ

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಸೋತಿರುವ ಆರ್​ಸಿಬಿ, ಇದೀಗ ಗೆಲುವಿನ ಹುಡುಕಾಟ ನಡೆಸೋ ಯತ್ನದಲ್ಲಿದೆ. ಆದರೆ ಇದು ಸಾಧ್ಯವಾಗಬೇಕಾದ್ರೆ, ಲಕ್ನೋ ತಂಡದಲ್ಲಿನ ಆ ಶಕ್ತಿಯನ್ನ ಮೊದಲು ಮಟ್ಟ ಹಾಕಬೇಕು. ಬ್ಯಾಟರ್ ಹಾಗೂ ಬೌಲರ್​ಗಳ ನಡುವೆ ದಂಗಲ್​ ನಡೆದ್ರೆ ಮಾತ್ರ ಆ ಶಕ್ತಿಯನ್ನ ಮಟ್ಟ ಹಾಕೋಕೆ ಸಾಧ್ಯ. ಇಲ್ಲದಿದ್ರೆ ಸೋಲು ಕಟ್ಟಿಟ್ಟ ಬುತ್ತಿ.

ಹೊಸ ಚಾಲೆಂಜ್​ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಸೋತ ಅಂಗಳದಲ್ಲೇ ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದು, ಲಕ್ನೋ ಸೂಪರ್​ ಜೈಂಟ್ಸ್​ ಎದುರು ಸೂಪರ್ ಪರ್ಫಾಮೆನ್ಸ್​ ನೀಡೋ ಲೆಕ್ಕಾಚಾರದಲ್ಲಿದೆ. ಆದ್ರೂ, ಲಕ್ನೋ ತಂಡದ ಬಲ, ಆರ್​ಸಿಬಿ ಪಾಳಯದಲ್ಲಿ ಟೆನ್ಶನ್​ ಹೆಚ್ಚಿಸಿದೆ.

ಎಡಗೈ ಬ್ಯಾಟ್ಸ್​​​​ಮನ್​ಗಳೇ ಲಕ್ನೋ ತಂಡದ ‘ಲಕ್​​’​..!
ಲಕ್ನೋ ಸೂಪರ್​ ಜೈಂಟ್ಸ್​ ತಂಡ ಸ್ಟ್ರಾಂಗ್ ಬ್ಯಾಟಿಂಗ್ ಲೈನ್​ ಆಪ್ ಹೊಂದಿದೆ. ಓಪನರ್​ಗಳಿಂದ ಹಿಡಿದು ಲೋವರ್ ಆರ್ಡರ್​ ತನಕ ಅದ್ಬುತ ಬ್ಯಾಟರ್ಸ್​ ಇದ್ದಾರೆ. ಅದ್ರಲ್ಲೂ ಲೆಫ್ಟಿ ಬ್ಯಾಟರ್ಸ್​, ತಂಡದ ಲಕ್ಕಿ ಹ್ಯಾಂಡ್ಸ್ ಆಗಿದ್ದಾರೆ. ನಿಜ ಹೇಳಬೇಕಂದ್ರೆ ಇವರೇ ಲಕ್ನೋ ತಂಡದ ಗೇಮ್ ಚೇಂಜರ್ಸ್ ಆ್ಯಂಡ್ ಮ್ಯಾಚ್ ವಿನ್ನರ್ಸ್​. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ತಂಡದ ಲೆಫ್ಟಿ ಬ್ಯಾಟರ್​​​​ಗಳ ಸವಾಲನ್ನು ಆರ್​ಸಿಬಿ ಬೌಲರ್ಸ್ ಮೆಟ್ಟಿ ನಿಲ್ಲಬೇಕಿದೆ.

ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡೆಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್​

ಡಿಸ್ಟ್ರಕ್ಟಿವ್ ಕ್ವಿಂಟನ್ ಡಿ ಕಾಕ್ ಅಂಡ್ ಪಡಿಕ್ಕಲ್..!
ಆರ್​ಸಿಬಿ ಬೌಲರ್​ಗಳ ಮೊದಲ ಸವಾಲೇ ಸೌತ್ ಆಫ್ರಿಕನ್ ಸೂಪರ್ ಸ್ಟಾರ್​ ಕ್ವಿಂಟನ್​ ಡಿಕಾಕ್, ವಿಕೆಟ್ ಬೇಟೆಯಾಡುವುದಾಗಿದೆ. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಕೈಹಾಕುವ ಡಿಕಾಕ್, ಕ್ರೀಸ್​ನಲ್ಲಿ ಇರುವಷ್ಟು ಹೊತ್ತು ಅಪಾಯ ತಪ್ಪಿದಿಲ್ಲ. ಡಿ ಕಾಕ್​ ಜೊತೆ ಕರ್ನಾಟಕದ ಸ್ಟಾರ್ ದೇವದತ್ ಪಡಿಕ್ಕಲ್ ಕೂಡ ಮ್ಯಾಚ್ ವಿನ್ನರ್ ಪ್ಲೇಯರ್. ನಿಧಾನಗತಿಯಲ್ಲಿ ಇನ್ನಿಂಗ್ಸ್​ ಕಟ್ಟೋ ಪಡಿಕ್ಕಲ್, ಯಾವುದೇ ಕ್ಷಣದಲ್ಲಾದರು ಸಿಡಿದೇಳಬಲ್ಲರು.

ಗೇಮ್​​​​​​​​​​ ಚೇಂಜರ್ ನಿಕೋಲಸ್ ಪೂರನ್​..!
ನಿಕೋಲಸ್ ಪೂರನ್.. ಲಕ್ನೋ ತಂಡದ ಮೋಸ್ಟ್​ ಡೇಂಜರಸ್ ಆ್ಯಂಡ್ ಡೆಡ್ಲಿ ಬ್ಯಾಟ್ಸ್​ಮನ್. ಕ್ಷಣಾರ್ಧದಲ್ಲಿ ಪಂದ್ಯದ ಗತಿ ಬದಲಿಸುವ ತಾಕತ್ತಿದೆ. ಬೌಲರ್​​ಗಳ ಎದುರು ಎದೆಯೊಡ್ಡಿ ನಿಂತರೆ ಮಾರಣಹೋಮ ಗ್ಯಾರಂಟಿ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಕಳೆದ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲೇ ನಡೆದ ಪಂದ್ಯ. ಆ ಪಂದ್ಯದಲ್ಲಿ ಜಸ್ಟ್​ 19 ಎಸೆತಗಳಲ್ಲೇ 62 ರನ್ ಸಿಡಿಸಿದ್ದ ಈತ, ಪಂದ್ಯದ ಚಿತ್ರಣವನ್ನೇ ಬದಲಿಸಿದ್ದ. ಹೀಗಾಗಿ ಲಕ್ನೋ ತಂಡದ ಈ ಮಷಿನ್ ಗನ್​​​​​​​​​​​​​​​​​​​​​​​​​​ಗೆ ಬ್ರೇಕ್​ ಹಾಕಬೇಕಿದೆ.

ಡೆತ್​ ಓವರ್​ನಲ್ಲಿ ಕೃನಾಲ್ ಪವರ್ ಹಿಟ್ಟಿಂಗ್..!
ಕೃನಾಲ್​ ಪಾಂಡ್ಯ.. ಅಂತಿಮ ಕ್ಷಣದಲ್ಲಿ ಪಂದ್ಯಕ್ಕೆ ಟ್ವಿಸ್ಟ್​ ನೀಡಬಲ್ಲ ಬ್ಯಾಟರ್. ಸ್ಲಾಗ್ ಓವರ್​ಗಳಲ್ಲಿ ಸಿಡಿಗುಂಡಿನ ಬ್ಯಾಟಿಂಗ್ ನಡೆಸಬಲ್ಲ ಚಾಣಾಕ್ಷ. ಸದ್ಯ ಸಾಲಿಡ್ ಫಾರ್ಮ್​ನಲ್ಲಿರುವ ಕೃನಾಲ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್​ಗಳ ಪಾಲಿನ ದುಸ್ವಪ್ನವಾಗಿ ಕಾಡಬಲ್ಲರು.

ಎಷ್ಟು ಬೇಗ ಸಾಧ್ಯವಾಗುತ್ತೋ ಅಷ್ಟು ಬೇಗ ಲಕ್ನೋ ಪಡೆಯ ಈ ಲೆಫ್ಟಿ ಬ್ಯಾಟರ್​ಗಳ ವಿಕೆಟ್ ಬೇಟೆಯಾಡಿದ್ರೆ, ಆರ್​​ಸಿಬಿ ಗೆಲುವು ಪಕ್ಕಾ ಆಗಲಿದೆ. ಆದ್ರೆ, ವಿಕೆಟ್​ ಬೇಟೆಯಾಡೋದ್ಯಾರು ಅನ್ನೋದೆ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಇಂದಿನ ಪಂದ್ಯ ಲಕ್ನೋ ಲೆಫ್ಟಿ ಬ್ಯಾಟರ್ಸ್​ ವರ್ಸಸ್ ಆರ್​ಸಿಬಿ ಬೌಲರ್ಸ್ ನಡುವಿನ ಫೈಟ್ ಎಂಬಂತೆ ಬಿಂಬಿತವಾಗಿದ್ದು, ಈ ಮಹಾ ದಂಗಲ್​​ನಲ್ಲಿ ಯಾರ್ ಗೆಲ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCBಗಿಂತ LSG ಭಿನ್ನ!! ಗೆಲುವಿನ ಹುಡುಕಾಟದಲ್ಲಿರೋ ಬೆಂಗಳೂರಿಗೆ ಈ ವಿಚಾರಗಳು ಗೊತ್ತಿರಲೇಬೇಕು!

https://newsfirstlive.com/wp-content/uploads/2024/04/RCB-KOHLI.jpg

Load More