17 ಸೀಸನ್ಗಳಿಂದಲೂ ಕಪ್ ಗೆಲ್ಲಲೇಬೇಕು ಎಂದಿರೋ ಆರ್ಸಿಬಿ ಟೀಮ್
ಕಳೆದ 8 ವರ್ಷಗಳಿಂದಲೂ ಫೈನಲ್ಗೆ ಹೋಗದ ಆರ್ಸಿಬಿ ಕ್ರಿಕೆಟ್ ತಂಡ..!
ಮುಂದಿನ ಸೀಸನ್ಗೆ ಆರ್ಸಿಬಿ ತಂಡ ಮುನ್ನಡೆಸಲಿರೋ ವಿರಾಟ್ ಕೊಹ್ಲಿ
17 ಸೀಸನ್ಗಳಿಂದಲೂ ಕಪ್ ಗೆಲ್ಲಲೇಬೇಕು ಅನ್ನೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಮುಂದುವರಿದಿದೆ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಅನ್ನೋ ಆರ್ಸಿಬಿ ಫೈನಲ್ಗೆ ಹೋಗದೆ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್ನಲ್ಲೂ ಆರ್ಸಿಬಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಹಾಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡದ ನಾಯಕತ್ವ ಬದಲಾಗುವುದು ಬಹುತೇಕ ಖಚಿತವಾಗಿದೆ.
ಆರ್ಸಿಬಿ ತಂಡದ ಪ್ರಸ್ತುತ ನಾಯಕ ಫಾಫ್ ಡುಪ್ಲೆಸಿಸ್ಗೆ ಈಗ 40 ವರ್ಷ. ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಇತ್ತ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಮತ್ತೆ ನಾಯಕತ್ವದ ಚರ್ಚೆ ಶುರುವಾಗಿದೆ. ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಹೊರೆ ಕಾರಣಕ್ಕೆ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದ ಕೊಹ್ಲಿ ಈಗ ಸಂಪೂರ್ಣ ಫ್ರೀ ಆಗಿದ್ದಾರೆ. ಹಾಗಾಗಿ ಕೊಹ್ಲಿ ಆರ್ಸಿಬಿ ಪರ ಸಂಪೂರ್ಣ ತೊಡಗಿಸಿಕೊಳ್ಳಬಹುದು. ಮತ್ತೆ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇದರ ಮಧ್ಯೆ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರೋ ದಿನೇಶ್ ಕಾರ್ತಿಕ್ ಸ್ಫೋಟಕ ಸುಳಿವು ನೀಡಿದ್ದಾರೆ.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ನಿನ್ನೊಂದಿಗೆ ಕ್ರಿಕೆಟ್ ಆಡಿದ್ದು ಖುಷಿ ತಂದಿದೆ ಸ್ಕಿಪರ್ (ಕ್ಯಾಪ್ಟನ್). 16 ವರ್ಷಗಳಾದ್ರೂ ಇನ್ನೂ ಬೆಂಕಿ ಉರಿಯುತ್ತಲೇ ಇದೆ. ಕ್ರಿಕೆಟ್ನಲ್ಲಿ 16 ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು ಎಂದು ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಟ್ವೀಟ್ ಕೊಹ್ಲಿ ಮತ್ತೆ ಆರ್ಸಿಬಿ ಕ್ಯಾಪ್ಟನ್ ಆಗಬಹುದು ಅನ್ನೋ ಸುಳಿವು ಕೊಟ್ಟಿದೆ. ಹಾಗಾಗಿ ಆರ್ಸಿಬಿ ಫ್ಯಾನ್ಸ್ ಕೊಹ್ಲಿ ಮತ್ತೆ ಆರ್ಸಿಬಿ ಕ್ಯಾಪ್ಟನ್ ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ಕೊಹ್ಲಿ ಆರ್ಸಿಬಿ ಕ್ಯಾಪ್ಟನ್ಸಿ ರೆಕಾರ್ಡ್ ಏನು?
RCB ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿತ್ತು. ನಂತರ 3 ಬಾರಿ ಪ್ಲೇ ಆಫ್ಸ್ ಆಡಿತ್ತು. ಹೀಗಾಗಿ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: KL ರಾಹುಲ್ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು ಮುಂದಾದ RCB
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ