newsfirstkannada.com

KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB

Share :

Published August 20, 2024 at 10:55am

    KL ರಾಹುಲ್​ ಬಿಟ್ಟು ಪಾಂಡ್ಯ ಖರೀದಿಗೆ ಮುಂದಾಯ್ತಾ RCB?

    ಹಾರ್ದಿಕ್​ ಪಾಂಡ್ಯ ಟಾರ್ಗೆಟ್ ಹಿಂದಿದೆ ಹಲವು ಲೆಕ್ಕಾಚಾರ!

    ಕ್ಯಾಪ್ಟನ್ ಫಾಫ್​​ ಡುಪ್ಲೆಸಿಗೆ ಗೇಟ್ ಪಾಸ್ ನೀಡುತ್ತಾ RCB?

ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿನಾ ಅಥವಾ ಕಹಿ ಸುದ್ದಿನಾ ಅಂತಾ ಗೊತ್ತಾಗ್ತಿಲ್ಲ. ಮುಂದಿನ ಐಪಿಎಲ್​ಗೂ ಮುನ್ನ ಕನ್ನಡದ ಕುವರ ಕೆ.ಎಲ್.ರಾಹುಲ್​ನ ಬಿಟ್ಟು ಬೇರೋಬ್ಬ ಆಟಗಾರನ ಮೇಲೆ ಆರ್​​ಸಿಬಿ ಕಣ್ಣು ಬಿದ್ದಿದೆ. ಅಂದ್ಹಾಗೆ ಆತ ರಾಹುಲ್​ರ ಆಪ್ತ ಸ್ನೇಹಿತ, ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ. ರಾಹುಲ್​ ಬಿಟ್ಟು ಹಾರ್ದಿಕ್​ ಖರೀದಿಗೆ ಆರ್​​ಸಿಬಿ ಮುಂದಾಗಿರೋದ್ಯಾಕೆ.?

ಇದನ್ನೂ ಓದಿ: RCB ಮಾಜಿ ಪ್ಲೇಯರ್​ ಸ್ಫೋಟಕ ಬ್ಯಾಟಿಂಗ್​.. 48 ಎಸೆತದಲ್ಲಿ 9 ಸಿಕ್ಸರ್​, 124 ರನ್ಸ್​

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ತಯಾರಿ ಶುರುವಾಗಿದೆ. ವರ್ಷದ ಕೊನೆಯಲ್ಲಿ ನಡೆಯಲಿರೋ​ ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ತಂಡಗಳನ್ನ ಕಟ್ಟುವ ಲೆಕ್ಕಚಾರದಲ್ಲೇ ಎಲ್ಲ ಫ್ರಾಂಚೈಸಿಗಳು ಇವೆ. ಈ ವಿಚಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಹೊರತಾಗಿಲ್ಲ.

ಇದನ್ನೂ ಓದಿ: ಸಮೋಸ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ಕ್ಯಾಪ್ಟನ್ ಫಾಫ್​​ ಡುಪ್ಲೆಸಿಗೆ ಗೇಟ್ ಪಾಸ್ ನೀಡೋ ಲೆಕ್ಕಾಚಾರದಲ್ಲಿರುವ ಫ್ರಾಂಚೈಸಿ, ಈಗಾಗಲೇ ನ್ಯೂ ಕ್ಯಾಪ್ಟನ್​​ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಈ ಸ್ಥಾನಕ್ಕೆ ಕಪ್ ಗೆಲ್ಲಿಸಿಕೊಡಬಲ್ಲ ನಾಯಕನ ಕರೆತರುವ ಯತ್ನದಲ್ಲಿದೆ. ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ ಇದೀಗ ಆರ್​​ಸಿಬಿ ಕಣ್ಣು ಬಿದ್ದಿದೆ.

ಮೆಗಾ ಹರಾಜು ಹತ್ತಿರವಾಗ್ತಿದ್ದಂತೆ ದಿನಕ್ಕೊಂದು ಹೆಸರು ಆರ್​ಸಿಬಿ ಅಂಗಳದಲ್ಲಿ ಗಿರಗಿಟ್ಲೆ ಹೊಡೀತಿದೆ. ಮೊನ್ನೆ ತನಕ ಲಕ್ನೋ ತೊರೆಯೋ ಕೆ.ಎಲ್.ರಾಹುಲ್, ಆರ್​ಸಿಬಿ ಸೇರ್ತಾರೆ.. ಕ್ಯಾಪ್ಟನ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೀಗ ಕೆ.ಎಲ್.ರಾಹುಲ್​ ಬಿಟ್ಟು, ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ ಪಾಂಡ್ಯಗೆ ಮಣೆ ಹಾಕಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹದ್ದಿನ ಕಣ್ಣಿಟ್ಟಿದೆ ಎನ್ನಲಾಗ್ತಿದೆ.

ಪಾಂಡ್ಯ ಬಿಡ್​​ಗಾಗಿ 20ರಿಂದ 25 ಕೋಟಿ ​ಹಣ ಫಿಕ್ಸ್​..!

ಕಳೆದ ಎರಡು ಸೀಸನ್​ಗಳಲ್ಲಿ ಫಾಫ್ ಡುಪ್ಲೆಸಿ ನೇತೃತ್ವದ ಆರ್​ಸಿಬಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಇದೀಗ ಮೊದಲ ಯತ್ನದಲ್ಲೇ ಟ್ರೋಫಿ ಗೆದ್ದ ಹಾರ್ದಿಕ್ ಮೇಲೆ ಒಲವು ತೋರಿರುವ ಆರ್​ಸಿಬಿ ಮ್ಯಾನೇಜ್​ಮೆಂಟ್, ಶತಯಾ ಗತಯಾ ಆರ್​​​​ಸಿಬಿಗೆ ಸೇರಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಮುಂಬೈ ಕ್ಯಾಪ್ಟನ್​ಗಾಗಿ ಒಂದಲ್ಲ.. ಎರಡಲ್ಲ ಬರೋಬ್ಬರಿ 20ರಿಂದ 25 ಕೋಟಿ ಹಣ ಬಿಡ್ ಮಾಡುವ ಚಿಂತನೆ ನಡೆಸಿದ್ಯಂತೆ.

ಒಬ್ಬ ಪಾಂಡ್ಯನಿಂದ ಹಲವು ಪ್ರಶ್ನೆಗಳಿಗೆ ಉತ್ತರ..!

ಹಾರ್ದಿಕ್ ಪಾಂಡ್ಯಗಾಗಿ ಆರ್​ಸಿಬಿ ಇಷ್ಟು ಅಮೌಂಟ್ ಸ್ಪೆಂಡ್ ಮಾಡ್ಬೇಕಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿದ್ರೆ. ಈಗಲೇ ತೆಗೆದುಬಿಡಿ. ಯಾಕಂದ್ರೆ, ಬಿಡ್ಡಿಂಗ್​ನಲ್ಲಿ ಹಾರ್ದಿಕ್​ನ ಟಾರ್ಗೆಟ್ ಮಾಡಿರುವ ಹಿಂದೆ ಹಲವು ಲೆಕ್ಕಚಾರ ಇವೆ. ಒಂದು ಮಾತಲ್ಲಿ ಹೇಳೋದಾದ್ರೆ, ಆ ಒಬ್ಬ ಪಾಂಡ್ಯ, ಆರ್​ಸಿಬಿಗೆ ಕಾಡ್ತಿರುವ 3 ಸಮಸ್ಯೆಗಳಿಗೆ ಉತ್ತರವಾಬಲ್ಲರು.

ಇದನ್ನೂ ಓದಿ: ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ 

ಹಾರ್ದಿಕ್ ಮೇಲ್ಯಾಕೆ RCB ಕಣ್ಣು..?

  • ಓರ್ವ ಅದ್ಭುತ ನಾಯಕ ಹಾರ್ದಿಕ್ ಪಾಂಡ್ಯ
  • ಗೇಮ್ ಫಿನಿಷರ್ ರೋಲ್​ಗೆ ಹಾರ್ದಿಕ್​ ಪರ್ಫೆಕ್ಟ್​
  • ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಸಾಮರ್ಥ್ಯ
  • ವಿಕೆಟ್ ಟೇಕರ್ ಬೌಲರ್ ಆಗಿ ನೆರವಾಗಬಲ್ಲ ಪಾಂಡ್ಯ​​​​​
  • ಚಿನ್ನಸ್ವಾಮಿಯಂತ ಚಿಕ್ಕ ಗ್ರೌಂಡ್​ನಲ್ಲಿ ಮತ್ತಷ್ಟು ಎಫೆಕ್ಟೀವ್
  • ವಿರಾಟ್​ ಕೊಹ್ಲಿಯಂತೆ ಸವಾಲುಗಳನ್ನ ಸ್ವೀಕರಿಸುವ ಗುಣ

ಆರ್​ಸಿಬಿ ಕನಸಿಗೆ ನೀರು ಎರೆಯುತ್ತಾ ಮುಂಬೈ..?

ಆರ್​ಸಿಬಿ ಏನೋ ಬಿಡ್ ಮಾಡೋಕೆ ರೆಡಿ ಇದೆ ಒಕೆ. ಆದ್ರೆ, ಮುಂಬೈ ಇಂಡಿಯನ್ಸ್​ ರಿಲೀಸ್ ಮಾಡುತ್ತಾ ಅನ್ನೋದೇ ಯಕ್ಷಪ್ರಶ್ನೆ. ಸದ್ಯ ಮುಂಬೈ ತಂಡ ಸೂರ್ಯಕುಮಾರ್​ಗೆ ಪಟ್ಟ ಕಟ್ಟೋ ಲೆಕ್ಕಾಚಾರದಲ್ಲಿದೆ. ಇದರ ಹಿಂದೆ ರೋಹಿತ್​ನ ಉಳಿಸಿಕೊಳ್ಳುವ ಲೆಕ್ಕಚಾರವಿದೆ. ಹಾಗಾದ್ರೆ, ಹಾರ್ದಿಕ್​ನ ರಿಲೀಸ್​ ಮಾಡೋದು ಪಕ್ಕಾ. ಒಂದು ವೇಳೆ ಮುಂಬೈ ರಿಲೀಸ್​ ಮಾಡದಿದ್ರೆ, ಆರ್​​ಸಿಬಿ ಖರೀದಿ ಬೆಂಗಳೂರು ಪಾಲಿಗೆ ಕನಸಿನ ಮಾತಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB

https://newsfirstlive.com/wp-content/uploads/2024/08/KOHLI_PANDYA_KL.jpg

Load More