newsfirstkannada.com

RCB ಮಾಜಿ ಪ್ಲೇಯರ್​ ಸ್ಫೋಟಕ ಬ್ಯಾಟಿಂಗ್​.. 48 ಎಸೆತದಲ್ಲಿ 9 ಸಿಕ್ಸರ್​, 124 ರನ್ಸ್​

Share :

Published August 20, 2024 at 9:42am

    ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವು

    ತಂಡವನ್ನ ಸೇಫ್ ಮಾಡಿದ RCB ಮಾಜಿ ಪ್ಲೇಯರ್ ಬ್ಯಾಟಿಂಗ್

    ಸಿಡಿಲಬ್ಬರದ ಬ್ಯಾಟಿಂಗ್​ಗೆ ಎದುರಾಳಿ ತಂಡದಲ್ಲಿ ಫುಲ್ ನಡುಕ

ಆರ್​ಸಿಬಿಯ ಮಾಜಿ ಪ್ಲೇಯರ್​, 2024ರ ಆಕ್ಷನ್​ನಲ್ಲಿ ಅನ್​ಸೋಲ್ಡ್​ ಆಗಿದ್ದ ಕರುಣ್ ನಾಯರ್ ಮಿಂಚಿನ ಬ್ಯಾಟಿಂಗ್ ಮಾಡಿದ್ದಾರೆ. ಮಹಾರಾಜ ​ಟ್ರೋಫಿಯ ಟಿ20 ಪಂದ್ಯದಲ್ಲಿ ಕೇವಲ 48 ಎಸೆತದಲ್ಲಿ ಅಮೋಘವಾದ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಸಮೋಸ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟೂರ್ನಿಯಲ್ಲಿ ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ಟೀಮ್​, ಮೈಸೂರು ವಾರಿಯರ್ಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಮಾಡಲು ಆಗಮಿಸಿದ ಮೈಸೂರು ವಾರಿಯರ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ಸ್​ ವಿಫಲ ಬ್ಯಾಟಿಂಗ್ ಮಾಡಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಆಗಮಿಸಿದ ಕ್ಯಾಪ್ಟನ್​ ಕರುಣ್ ನಾಯರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನ ಸೇಫ್ ಮಾಡಿದರು.

ಇದನ್ನೂ ಓದಿ: ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ 

ಕ್ರೀಸ್​ಗೆ ಬರುತ್ತಿದ್ದಂತೆ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯರ್ ಕೇವಲ 27 ಎಸೆತದಲ್ಲಿ ಹಾಫ್​ಸೆಂಚುರಿ ಬಾರಿಸಿದರು. ಮಂಗಳೂರು ಬೌಲರ್​ಗಳನ್ನ ಬೇಟೆಯಾಡಿದ ನಾಯರ್ ಮುಂದಿನ 16 ಎಸೆತದಲ್ಲಿ ಸೆಂಚುರಿ ಸಿಡಿಸಿದರು. ಒಟ್ಟು 48 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್, 9 ಆಕಾಶದೆತ್ತರ ಸಿಕ್ಸರ್ಸ್​, 13 ಬೌಂಡರಿ ಸಮೇತ 124 ರನ್​ ಚಚ್ಚಿ ಅಜೇಯರಾಗಿ ಉಳಿದರು. ಈ ಮೂಲಕ ಮೈಸೂರು ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ್ದ ಮಂಗಳೂರು ತಂಡ ಬ್ಯಾಟಿಂಗ್ ಮಾಡುವಾಗ ಮಳೆ ಬಂದಿದ್ದರಿಂದ 14 ಓವರ್​ಗಳಲ್ಲಿ 166 ರನ್​ಗಳ ಗುರಿ ನೀಡಲಾಗಿತ್ತು. ಆದರೆ ಮಂಗಳೂರು ಡ್ರಾಗನ್ಸ್ ಟೀಮ್ 138 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತು. ಈ ಮೂಲಕ ಮೈಸೂರು ವಾರಿಯರ್ಸ್ ತಂಡ 27 ರನ್​ಗಳ ಭರ್ಜರಿ ಜಯ ಸಾಧಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಮಾಜಿ ಪ್ಲೇಯರ್​ ಸ್ಫೋಟಕ ಬ್ಯಾಟಿಂಗ್​.. 48 ಎಸೆತದಲ್ಲಿ 9 ಸಿಕ್ಸರ್​, 124 ರನ್ಸ್​

https://newsfirstlive.com/wp-content/uploads/2024/08/karun_nair.jpg

Load More