newsfirstkannada.com

RCBಯಲ್ಲಿ ದಿನೇಶ್ ಕಾರ್ತಿಕ್​ ಬ್ಯಾಟಿಂಗ್ ಅಬ್ಬರ.. T20 ವರ್ಲ್ಡ್​ಕಪ್​ ಆಡುವ ಬಗ್ಗೆ ರೋಹಿತ್ ಏನ್ ಅಂತಾರೆ?

Share :

Published April 22, 2024 at 12:49pm

  T20 ವಿಶ್ವಕಪ್ ಬಗ್ಗೆ ಆರ್​ಸಿಬಿಯ ದಿನೇಶ್ ಕಾರ್ತಿಕ್ ಹೇಳುವುದು ಏನು?

  ರೋಹಿತ್​​ರ ಆ ಎರಡು ಮಾತುಗಳು ಡಿಕೆ ಟಿ20 ವಿಶ್ವಕಪ್ ಕನಸಿಗೆ ಸ್ಫೂರ್ತಿ

  ಅಜಿತ್​ ಅಗರ್ಕರ್, ರೋಹಿತ್ ಹಾಗೂ ರಾಹುಲ್ ಒಳ್ಳೆಯ ತಂಡ ಕಟ್ತಾರಾ?

ಐಪಿಎಲ್​​​ನಲ್ಲಿ ಡಿಕೆ ಬಾಸ್​​​ ಆರ್ಭಟ ಜೋರಾಗಿದೆ. ಆನ್​ಫೀಲ್ಡ್​​​ ಘರ್ಜನೆ ನಡುವೆ ಆರ್​​ಸಿಬಿ ಫಿನಿಶರ್​ ಒಂದು ಶಪಥ ಮಾಡಿದ್ದಾರೆ. ಏನಾದರೂ ಸೈ, ನಾನು ಅದನ್ನ ಮಾಡಿಯೇ ತೀರುತ್ತೆನೆ ಎಂದಿದ್ದಾರೆ. ಅಷ್ಟಕ್ಕೂ ಡಿಕೆ ಮಾಡಿರುವ ಆ ಶಪಥ ಏನು?.

100% ರೆಡಿ.. ರೋಹಿತ್​​​- ದ್ರಾವಿಡ್​ಗೆ ಸ್ಟ್ರಾಂಗ್ ಮೆಸೆಜ್​

ಟಿ20 ವಿಶ್ವಕಪ್​ ತಂಡ ಅನೌನ್ಸ್​​ಮೆಂಟ್​​ಗೆ ಕೌಂಟ್​ಡೌನ್​​ ಶುರುವಾಗಿದೆ. ಇದೇ ವಾರದಲ್ಲಿ ಬಿಸಿಸಿಐ, ಟೀಮ್ ಇಂಡಿಯಾವನ್ನ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ಆ್ಯಂಡ್​​ ಟೀಮ್​ ಐಪಿಎಲ್​​​​​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಯಾರೆಲ್ಲ ಆಯ್ಕೆ ಆಗ್ತಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ಟೈಮ್ ​​​ಅಲ್ಲಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಧೂಳೆಬ್ಬಿಸಿರೋ ದಿನೇಶ್ ಕಾರ್ತಿಕ್​ ಟಿ20 ವಿಶ್ವಕಪ್ ಆಡಲು ಶಪಥಗೈದಿದ್ದಾರೆ.

ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ

T20 ವಿಶ್ವಕಪ್​ ಆಡಲು ಸಿದ್ಧನಿದ್ದೇನೆ

ಈ ವಯಸ್ಸಿನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಲು ನಿಜಕ್ಕೂ ಹೆಮ್ಮೆ ಅನ್ನಿಸುತ್ತೆ. ಟಿ20 ವಿಶ್ವಕಪ್ ಆಡುವುದಕ್ಕಿಂತ ದೊಡ್ಡದು ಯಾವುದು ಇಲ್ಲ. ಉತ್ತಮ ತಂಡವನ್ನ ಕಟ್ಟಲು ರೋಹಿತ್​ ಶರ್ಮಾ, ರಾಹುಲ್ ದ್ರಾವಿಡ್ ಹಾಗೂ ಅಜಿತ್​ ಅಗರ್ಕರ್​ ಸಮರ್ಥರಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಜೊತೆಗಿದ್ದೇನೆ. ಆದರೆ ನಾನು ಒಂದು ಮಾತನ್ನ ಹೇಳುತ್ತೇನೆ, ಅದೇನಂದ್ರೆ ನಾನು 100% ಸಿದ್ಧ. ವಿಶ್ವಕಪ್​​​​​​​ ಫ್ಲೈಟ್​ ಏರಲು ಏನು ಬೇಕಾದರೂ ಮಾಡಬಲ್ಲೆ.

ದಿನೇಶ್ ಕಾರ್ತಿಕ್​​, ಟೀಮ್ ಇಂಡಿಯಾ ಆಟಗಾರ

ಡಿಕೆಗೆ T20 ವಿಶ್ವಕಪ್​ ಆಸೆ ಚಿಗುರಿಸಿದ ಕ್ಯಾಪ್ಟನ್ ರೋಹಿತ್​​​..!

ಸದ್ಯ ಐಪಿಎಲ್​​​ನಲ್ಲಿ ಧೂಳೆಬ್ಬಿಸಿರೋ ಡಿಕೆಗೆ ಟಿ20 ವಿಶ್ವಕಪ್​ನಲ್ಲಿ ದೇಶ ಪರ ಆಡುವ ಕನಸು ಚಿಗುರಿದೆ. ನಿವೃತ್ತಿ ಸಂಧ್ಯಾಕಾಲದಲ್ಲಿರೋ ಫಿನಿಶರ್ ಡಿಕೆಗೆ ವಿಶ್ವಕಪ್​​ ಕನಸು ಹುಟ್ಟಲು ಕಾರಣನೇ ಕ್ಯಾಪ್ಟನ್ ರೋಹಿತ್​ ಶರ್ಮಾ. ಹಿಟ್​ಮ್ಯಾನ್​ರ ಆ 2 ಮಾತು ಡಿಕೆ ಮನದಲ್ಲಿ ವಿಶ್ವಕಪ್ ಆಡೋ ಆಸೆಯನ್ನ ಚಿಗುರೊಡೆಯುವಂತೆ ಮಾಡಿದೆ.

ಅದ್ಭುತ ಡಿಕೆ. ಟಿ20 ವಿಶ್ವಕಪ್ ಆಯ್ಕೆಗಾಗಿ ಒತ್ತಾಯಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಟಿ20 ವಿಶ್ವಕಪ್ ಇದೆ. ನೀವು ವಿಶ್ವಕಪ್ ಆಡಬೇಕು.

ರೋಹಿತ್​​ ಶರ್ಮಾ, ಭಾರತ ತಂಡದ ಕ್ಯಾಪ್ಟನ್

ರೋಹಿತ್​​​ ಒಮ್ಮೆ ಹೀಗೆ ಹೇಳಿ ಸುಮ್ಮನಾಗಿದ್ರೆ ಡಿಕೆ ವಿಶ್ವಕಪ್ ಆಯ್ಕೆ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಒಂದು ವಾರದಲ್ಲಿ ಗ್ಯಾಪ್​ಅಲ್ಲಿ ಮತ್ತೊಮ್ಮೆ ಹಿಟ್​ಮ್ಯಾನ್,​ ಡಿಕೆ ಪರ ಬ್ಯಾಟ್ ಬೀಸಿದ್ರು. ನಾನು ಮನವೊಲಿಸಿದ್ರೆ ದಿನೇಶ್​ ಕಾರ್ತಿಕ್ ವಿಶ್ವಕಪ್ ಆಡಬಹುದು ಹೇಳಿದ್ರು.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಸ್ಯಾಂಡಲ್​ವುಡ್​ ಸ್ಟಾರ್ ಶ್ರೀಮುರುಳಿ.. ಬಘೀರನಿಗೆ ಆಗಿದ್ದೇನು?

ಇದನ್ನೂ ಓದಿ: ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು

ಕ್ಯಾಪ್ಟನ್ ರೋಹಿತ್​ ಶರ್ಮಾ ಎರಡೆರಡು ಬಾರಿ ಹೀಗೆ ಹೇಳಿದ್ದೇ ತಡ, ಡಿಕೆ ಟಿ20 ವಿಶ್ವಕಪ್​​ ಆಡಲೇಕೆಂದು ಮೆಂಟಲಿ ಫಿಕ್ಸ್ ಆಗಿದ್ದಾರೆ. ಐಪಿಎಲ್​ನಲ್ಲಿ ಅಬ್ಬರವೂ ಜೋರಾಗಿದೆ. ಮುಂಬರೋ ಚುಟುಕು ದಂಗಲ್​ನಲ್ಲಿ ಆಡಬೇಕೆಂದು ಪಣತೊಟ್ಟಿದ್ದು, ಟಿ20 ವಿಶ್ವಕಪ್​ಗಾಗಿ ಏನು ಬೇಕಾದರೂ ಮಾಡಲು ರೆಡಿ ಎನ್ನುವ ಮೂಲಕ ಟೀಮ್ ಮ್ಯಾನೇಜ್​​ಮೆಂಟ್ ಹಾಗೂ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ.

17ನೇ ಐಪಿಎಲ್​ನಲ್ಲಿ ಡಿಕೆ ನೆಕ್ಸ್ಟ್​ ಲೆವೆಲ್​​​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. 7 ಪಂದ್ಯದಿಂದ 226 ರನ್​.. ಇಂಪ್ರೆಸ್ಸಿವ್​ 205.45ರ ಸ್ಟ್ರೈಕ್​ರೇಟ್​​​. ಈ ಆಟಕ್ಕೆ ಕ್ರಿಕೆಟ್ ಎಕ್ಸ್​​ಪರ್ಟ್ಸ್ ಹಾಗೂ ಮಾಜಿ ಕ್ರಿಕೆಟಿಗರು ಫಿದಾ ಆಗಿದ್ದಾರೆ. ಆದರೆ ಬಿಸಿಸಿಐ ಆಯ್ಕೆಗಾರರು ಡಿಕೆಗೆ ಆಯ್ಕೆಗೆ ಒಕೆ ಅನ್ತಾರಾ.? ಕ್ಯಾಪ್ಟನ್ ರೋಹಿತ್​​ ಶರ್ಮಾ ಆರ್​ಸಿಬಿ ಫಿನಿಶರ್​​ಗೆ ಮಣೆ ಹಾಕ್ತಾರಾ ಎನ್ನುವುದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಯಲ್ಲಿ ದಿನೇಶ್ ಕಾರ್ತಿಕ್​ ಬ್ಯಾಟಿಂಗ್ ಅಬ್ಬರ.. T20 ವರ್ಲ್ಡ್​ಕಪ್​ ಆಡುವ ಬಗ್ಗೆ ರೋಹಿತ್ ಏನ್ ಅಂತಾರೆ?

https://newsfirstlive.com/wp-content/uploads/2024/04/ROHIT_KARTHIK.jpg

Load More