newsfirstkannada.com

ಕಾರ್ತಿಕ್​​ಗಿರೋ ಹಸಿವು, ಹಂಬಲಕ್ಕೆ ಸಲಾಂ ಹೇಳಲೇಬೇಕು; ಅವರ ತಂದೆ ಬಿಚ್ಚಿಟ್ರು DK ಸಕ್ಸಸ್ ಹಿಂದಿನ ಸತ್ಯ

Share :

Published March 29, 2024 at 10:27am

    ಕಮ್​​​​ಬ್ಯಾಕ್​ಗೆ ಇನ್ನೊಂದು ಹೆಸರೇ ದಿನೇಶ್​ ಕಾರ್ತಿಕ್.​​.!

    ಫುಲ್​ ಟೈಮ್​ ಕಾಮೆಂಟೇಟರ್, IPL​ ವೇಳೆ ಫಿನಿಷರ್​..!

    ಡಿ.ಕೆ.ಕಮ್​ಬ್ಯಾಕ್​ ಹಿಂದಿನ ಸೀಕ್ರೆಟ್​ ಏನು ಗೊತ್ತಾ..?

ಚಾನ್ಸ್​​ ಸಿಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದ ಆಟಗಾರರು ಅವಕಾಶ ಸಿಗ್ಲಿಲ್ಲ ಅಂದ ತಕ್ಷಣ, ಎಲ್ಲಾ ಮುಗೀದೆ ಹೋಯ್ತು ಅನ್ನೋ ತಿರ್ಮಾನ ಮಾಡಿ ಬಿಡ್ತಾರೆ. ಅಂತವರಿಗೆಲ್ಲಾ ದಿನೇಶ್​​ ಕಾರ್ತಿಕ್​ ಕಥೆ ಸ್ಫೂರ್ತಿಯ ಕಥನ. 38 ವರ್ಷದ ಕಾರ್ತಿಕ್​​ಗಿರೋ ಹಸಿವು, ಹಂಬಲ ಯಂಗ್​​ಸ್ಟರ್​​ಗಳಲ್ಲೂ ಇಲ್ಲ ಅಂದ್ರೆ ತಪ್ಪಾಗಲ್ಲ. ಕಮ್​​ಬ್ಯಾಕ್​ಗಾಗಿ ಹೋರಾಡೋ ರೀತಿಗೆ ಸಲಾಂ ಹೇಳಲೇಬೇಕು.

ಕೊಹ್ಲಿ ಔಟಾಗಿದ್ದೇ ಔಟಾಗಿದ್ದು, ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ಸೋತೆ ಬಿಡ್ತು ಎಂದು ಎಲ್ರೂ ನಿರ್ಧಾರ ಮಾಡಿಯಾಗಿತ್ತು. ಎಲ್ಲರ ನಿರೀಕ್ಷೆ ಕೆಲವೇ ನಿಮಿಷಗಳಲ್ಲಿ ಬದಲಾಯ್ತು. ಸೋಲೋ ಹಂತದಲ್ಲಿದ್ದ ಟೀಮ್​ ಇಂಡಿಯಾ ಭರ್ಜರಿ ಜಯಭೇರಿ ಬಾರಿಸ್ತು. ಈ ಗೆಲುವಿನ ರೂವಾರಿ ದಿನೇಶ್​ ಕಾರ್ತಿಕ್​.

ನಿಜ ಹೇಳಬೇಕಂದ್ರೆ ಕೆಲ ವರ್ಷಗಳ ಹಿಂದೆಯೇ ದಿನೇಶ್ ಕಾರ್ತಿಕ್​​ ಕ್ರಿಕೆಟ್​ ಕರಿಯರ್​ ಮುಗಿದೇ ಹೋಯ್ತು ಎಂದು ಬಹುತೇಕರು ತೀರ್ಮಾನಿಸಿದ್ರು. ಆದರೆ ನಿರೀಕ್ಷೆಯೂ ಮಾಡದ ರೀತಿಯಲ್ಲಿ ದಿನೇಶ್​ ಕಾರ್ತಿಕ್​ ಕಮ್​ಬ್ಯಾಕ್​ ಮಾಡಿದ್ದರು. ಐಪಿಎಲ್​ನಲ್ಲಿ ಆರ್​​ಸಿಬಿ ಟೀಮ್​ನಲ್ಲಿ ಘರ್ಜಿಸಿ, ಟೀಮ್​ ಇಂಡಿಯಾಗೂ ರೋಚಕ ರೀತಿಯಲ್ಲಿ ಕಮ್​​ಬ್ಯಾಕ್​​ ಮಾಡಿದರು. ವಿಶ್ವಕಪ್​ ಟೂರ್ನಿಯನ್ನೂ ಆಡಿದರು.
ಕಮ್​ಬ್ಯಾಕ್​ ಮಾಡಿದ್ದ ದಿನೇಶ್​ ಕಾರ್ತಿಕ್​ ಲಾಸ್ಟ್​ ಸೀಸನ್​ ಐಪಿಎಲ್​ನಲ್ಲಿ ಮತ್ತೆ ನಿರೀಕ್ಷೆಯನ್ನು ಹುಸಿಗೊಳಿಸಿದರು. ಆಗ ದಿನೇಶ್​ ಕಾರ್ತಿಕ್​ಗೆ ಶಾಪ ಹಾಕಿದ ಫ್ಯಾನ್ಸ್​​ಗಳೆಷ್ಟೋ. ಆದ್ರೆ ಈ ಸೀಸನ್​ನಲ್ಲಿ ಡಿ.ಕೆ.ಬಾಸ್​​ ಮತ್ತೆ ರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಘರ್ಜಿಸಿದ ರೀತಿಗೆ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ಫುಲ್​ ಟೈಮ್​ ಕಾಮೆಂಟೇಟರ್, IPL​ ವೇಳೆ ಫಿನಿಷರ್

ಟೀಮ್​ ಇಂಡಿಯಾ ದೂರ ಉಳಿದಿರೋ ಕಾರ್ತಿಕ್​ ಸದ್ಯ ಕಾಮೆಂಟೇಟರ್​​ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಫುಲ್​ ಟೈಮ್​ನಲ್ಲಿ ಕಾಮೆಂಟೇಟರ್​ ಆಗಿರೋ ಕಾರ್ತಿಕ್,​ ಐಪಿಎಲ್​ ಟೈಮ್​ನಲ್ಲಿ ಫಿನಿಷರ್​ ಅವತಾರ ಎತ್ತಾರೆ. ಫುಲ್​ ಟೈಮ್​ ಕ್ರಿಕೆಟರ್​ಗಳೇ ವೈಫಲ್ಯ ಅನುಭವಿಸುವಾಗ ಕಾರ್ತಿಕ್​​ ಸಕ್ಸಸ್​ ಕಾಣ್ತಾರೆ ಇದ್ರ ಹಿಂದಿನ ಸೀಕ್ರೆಟ್​​ ಹಾರ್ಡ್​ವರ್ಕ್​.

ಡಿಕೆಯ ಬಲ ಏನು ಅಂದ್ರೆ, ತಲೆಯಲ್ಲಿ ಒಂದು ವಿಚಾರವನ್ನಿಟ್ಟುಕೊಂಡು. ಕ್ರಿಕೆಟ್​ ಫೀಲ್ಡ್​ ಅಥವಾ ವೈಯಕ್ತಿಕ ಜೀವನದಲ್ಲಿ ಯಾವುದನ್ನಾದ್ರೂ ಬೇಕು ಎಂದುಕೊಂಡರೆ ಅದನ್ನ ಪಡೆದುಕೊಂಡೆ ತೀರುತ್ತಾರೆ. ಅದಕ್ಕಾಗಿ ಏನನ್ನೂ ಬೇಕಾದ್ರೂ ಮಾಡ್ತಾರೆ-ಮನೋಲನ್​ ರಂಗರಾಜನ್​, ಆರ್​​ಸಿಬಿ ಫೀಲ್ಡಿಂಗ್​ ಕೋಚ್​

ಇಷ್ಟೇ ಅಲ್ಲ, ಕಮ್​​ಬ್ಯಾಕ್​ಗಾಗಿ ಸಾಕಷ್ಟು ಹಾರ್ಡ್​ವರ್ಕ್​ ಮಾಡೋ ಕಾರ್ತಿಕ್​, ತಮ್ಮ ಕಷ್ಟಗಳನ್ನು ಕುಟುಂಬದ ಮುಂದೆ ತೋರಿಸಿಕೊಳ್ಳಲ್ವಂತೆ. ಸದಾ ಪಾಸಿಟಿವ್​ ಆಗಿ ಯೋಚಿಸೋ ಕಾರ್ತಿಕ್​, ಕಮ್​ಬ್ಯಾಕ್​ ಮಾಡೇ ಮಾಡ್ತಿನಿ ಅನ್ನೋ ಛಲದ ಮಾತಾಡ್ತಾರಂತೆ.

ಕಾರ್ತಿಕ್​ ಯಾವಾಗಲೂ ಕಮ್​ಬ್ಯಾಕ್ ಬಗ್ಗೆ ಯೋಚನೆ ಮಾಡ್ತಾನೆ. ಏನನ್ನ ಮಾಡಬೇಕು ಅಂತಾ ಯೋಚಿಸ್ತಾನೆ. ನನಗೆ ಯಾವಾಗ್ಲೂ ಆತ ಹೇಳೋದೊಂದೆ. ನಾನು ಕಮ್​​ಬ್ಯಾಕ್​ ಮಾಡ್ತೀನಿ ಅಪ್ಪಾ ಅಂತಾ. ನನಗೆ ಗೊತ್ತಿರುತ್ತೆ ಆತನ ತಲೆಯಲ್ಲಿ ತುಂಬಾ ವಿಚಾರಗಳಿವೆ ಅನ್ನೋದು. ನಾನು ಮತ್ತು ನನ್ನ ಪತ್ನಿಗೆ ಇದ್ರಿಂದ ತೊಂದರೆಯಾಗಬಾರದು ಅಂತಾ ಆತ ಯೋಚಿಸ್ತಾನೆ. ನೀವು ಇದ್ರ ಬಗ್ಗೆ ಚಿಂತಿಸಬೇಡಿ ಅಂತಾನೆ-ಕೃಷ್ಣಕುಮಾರ್​​​, ದಿನೇಶ್​ ಕಾರ್ತಿಕ್​ ತಂದೆ

ಇದನ್ನೂ ಓದಿಬ್ರಾವೋಗೆ ಚಮಕ್​ ಕೊಟ್ಟ ಧೋನಿ.. ವಿಡಿಯೋ​ ಫುಲ್ ಟ್ರೋಲ್​..!

ಈ ವರ್ಷಪೂರ್ತಿ ಕಾಮೆಂಟೇಟರಿಯಲ್ಲಿ ಬ್ಯುಸಿಯಾಗಿದ್ದ ಕಾರ್ತಿಕ್​, ಈ ಐಪಿಎಲ್​ಗೂ ಮುನ್ನ ಡಿವೈ ಪಾಟೀಲ್​ ಟೂರ್ನಮೆಂಟ್​ ಆಡಿದ್ರು. ಅದ್ರ ಜೊತೆಗೆ ಹಲವು ಡೊಮೆಸ್ಟಿಕ್​ ಲೀಗ್​ಗಳಲ್ಲಿ ಬ್ಯಾಟಿಂಗ್​ ನಡೆಸಿದ್ರು. ಕಠಿಣ ಅಭ್ಯಾಸ, ಹಾರ್ಡ್​​ ವರ್ಕ್​ ಫಲವೇ ಇದೀಗ ಐಪಿಎಲ್​ ಅಂಗಳದಲ್ಲಿ ಧೂಳೆಬ್ಬಿಸ್ತಿದ್ದಾರೆ. ಈಗಾಗಲೇ ಇದೇ ನನ್ನ ಕೊನೆಯ ಐಪಿಎಲ್​ ಎಂಬ ಹಿಂಟ್​ ಕೊಟ್ಟಿರುವ ಡಿಕೆ ಬಾಸ್​ ಕಪ್​ ಗೆಲ್ಲೋ ಕನಸು ಕಾಣ್ತಿದ್ದಾರೆ. ಆ ಕನಸು ನನಸಾಗಲಿ ಅನ್ನೋದು ಎಲ್ಲರ ಅಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಾರ್ತಿಕ್​​ಗಿರೋ ಹಸಿವು, ಹಂಬಲಕ್ಕೆ ಸಲಾಂ ಹೇಳಲೇಬೇಕು; ಅವರ ತಂದೆ ಬಿಚ್ಚಿಟ್ರು DK ಸಕ್ಸಸ್ ಹಿಂದಿನ ಸತ್ಯ

https://newsfirstlive.com/wp-content/uploads/2024/03/DINESH-KARTHIK-2.jpg

Load More