newsfirstkannada.com

HOD ಬೈದಿದ್ದಕ್ಕೆ ಡಿಪ್ಲೋಮಾ ವಿದ್ಯಾರ್ಥಿ ಆತ್ಮಹತ್ಯೆ? ಪ್ರತಿಷ್ಠಿತ ಕಾಲೇಜಿನ ವಿರುದ್ಧ ತೀವ್ರ ಆಕ್ರೋಶ

Share :

Published February 28, 2024 at 6:45pm

Update February 28, 2024 at 6:39pm

    ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್‌ HOD ಕಿರುಕುಳ ಆರೋಪ

    ಫೈನಲ್ ಇಯರ್ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ವಿದ್ಯಾರ್ಥಿ

    HOD ಬೈದಿದ್ದಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿ ಸಾವು

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ HOD ಕಿರುಕುಳಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರೋ ಗಂಭೀರ ಆರೋಪ ಕೇಳಿ ಬಂದಿದೆ. ಫೈನಲ್ ಇಯರ್ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ NTTF NEC ಕಾಲೇಜು ವಿದ್ಯಾರ್ಥಿ ಋಷ್ಯಂತ್ (18) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಋಷ್ಯಂತ್ ಫೈನಲ್ ಇಯರ್ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಓದುತ್ತಿದ್ದ. ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್‌ HOD ಶಿಜುರಿಂದ ಕಿರುಕುಳ ನೀಡಿದ ಆರೋಪ ಮಾಡದಲಾಗಿದೆ. HOD ಶಿಜು ಅವರು ಪ್ರಾಜೆಕ್ಟ್ ವರ್ಕ್‌ಗೆ ಸಂಬಂಧಪಟ್ಟಂತೆ ಋಷ್ಯಂತ್‌ಗೆ ಬೈದಿದ್ದರಂತೆ. ನೀನು ನೋಡದಕ್ಕೆ ಶವದ ರೀತಿ ಇದೀಯಾ. ನಿನ್ನ ಪ್ರಾಜೆಕ್ಟ್ ವರ್ಕ್ ಕೂಡ ಹಾಗೆ ಇದೆ ಎಂದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಟ, ಮಾಜಿ IAS ಅಧಿಕಾರಿ ಕೆ. ಶಿವರಾಮ್ ಸ್ಥಿತಿ ಚಿಂತಾಜನಕ; ಚಿಕಿತ್ಸೆಗೆ ನೆರವಾಗಲು ಅಭಿಮಾನಿಗಳ ಒತ್ತಾಯ

ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು ಅಂತ ಕುಟುಂಬಸ್ಥರು ಆಗ್ರಹ ಪಡಿಸಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಋಷ್ಯಂತ್ ಸ್ನೇಹಿತರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HOD ಬೈದಿದ್ದಕ್ಕೆ ಡಿಪ್ಲೋಮಾ ವಿದ್ಯಾರ್ಥಿ ಆತ್ಮಹತ್ಯೆ? ಪ್ರತಿಷ್ಠಿತ ಕಾಲೇಜಿನ ವಿರುದ್ಧ ತೀವ್ರ ಆಕ್ರೋಶ

https://newsfirstlive.com/wp-content/uploads/2024/02/Student-Death-1.jpg

Load More