newsfirstkannada.com

KGF ಚಾಪ್ಟರ್​ 3 ಬರೋದು ಪಕ್ಕಾ.. ನರಾಚಿಯಿಂದ ಬಂತು ದೊಡ್ಡ ಸುಳಿವು; ಪ್ರಶಾಂತ್ ನೀಲ್ ಹೇಳಿದ್ದೇನು?

Share :

Published May 8, 2024 at 4:38pm

    ಚಾಪ್ಟರ್ 2 ಬೆನ್ನಲ್ಲೇ KGF ಚಾಪ್ಟರ್ 3 ಬಗ್ಗೆ ಗುಟ್ಟು ರಟ್ಟು ಮಾಡಿದ ಪ್ರಶಾಂತ್ ನೀಲ್

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಯಶ್​ ಕೆಜಿಎಫ್: ಚಾಪ್ಟರ್ 2

    ಇಡೀ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ ಸ್ಟಾರ್​ ನಿರ್ದೇಶಕ ಪ್ರಶಾಂತ್ ನೀಲ್

KGF ಡೈರೆಕ್ಟರ್ ಪ್ರಶಾಂತ್ ನೀಲ್ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ರಾಕಿಂಗ್​ ಸ್ಟಾರ್​ ಯಶ್​​ ಅಭಿನಯದ ಕೆಜಿಎಫ್​​ ಸಿನಿಮಾದ ಮೂಲಕ ಇಡೀ ದೇಶಕ್ಕೆ ಫೇಮಸ್ ಆಗಿದ್ದಾರೆ. ಸ್ಯಾಂಡಲ್​ವುಡ್​ ಖ್ಯಾತ ನಟ ಯಶ್ ಜೊತೆ ಕೆಜಿಎಫ್ ಸಿನಿಮಾ ಮಾಡಿದ ಪ್ರಶಾಂತ್ ನೀಲ್ ಅವರು ಒಬ್ಬ ಡೈರೆಕ್ಟರ್ ಆಗಿ ಪ್ರೇಕ್ಷಕನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಪ್ರಶಾಂತ್ ನೀಲ್ ಈಗ ಅಭಿಮಾನಿಗಳಿಗೆ ಗುಡ್​​ನ್ಯೂಸ್​ವೊಂದನ್ನು ಹೊತ್ತು ತಂದಿದ್ದಾರೆ.

ಇದನ್ನೂ ಓದಿ: ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ನನಗೇನು ಸಿಕ್ಕಿಲ್ಲ; ಫಾಹದ್ ಫಾಸಿಲ್ ಹೀಗ್ಯಾಕಂದ್ರು?

ಹೌದು, ನಟ ಯಶ್ ಅಭಿನಯದ ಕೆಜಿಎಫ್ 1 ಮತ್ತು ಚಾಪ್ಟರ್​​ 2 ನೋಡಿದ ಅಭಿಮಾನಿಗಳು ಚಾಪ್ಟರ್​ 3ಗಾಗಿ ಕಾದು ಕುಳಿತಿದ್ದರು. ಇದೀಗ ಕೆಜಿಎಫ್ ಚಾಪ್ಟರ್​ 3 ಬರೋದು ಕನ್ಫರ್ಮ್ ಆಗಿದೆ. ಈ ಬಗ್ಗೆ ಖುದ್ದು ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್ ಅವರು ಸಣ್ಣ ಸುಳಿವೊಂದನ್ನು ನೀಡಿದ್ದಾರೆ. ಸದ್ಯ, ಸಲಾರ್ ಯಶಸ್ಸಿನ ಖುಷಿಯಲ್ಲಿರುವ ಪ್ರಶಾಂತ್ ನೀಲ್ ಕೆಲ ದಿನಗಳ ವಿಶ್ರಾಂತಿ ಬಳಿಕ ಸಲಾರ್ 2 ಶೂಟಿಂಗ್ ಹೊರಡುವ ಪ್ಲಾನ್​ನಲ್ಲಿ ಇದ್ದಾರಂತೆ. 2022 ಏಪ್ರಿಲ್ 14 ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್‌: ಚಾಪ್ಟರ್ 2 ಸಿನಿಮಾವು ವಿಶ್ವಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ತೆರೆಗೆ ಬಂದಿತ್ತು. ಆ ವೇಳೆ ರಾಕಿಂಗ್​​ ಸ್ಟಾರ್​ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಕೂಡ ಶೇಕ್ ಆಗಿತ್ತು. ಕನ್ನಡ ಚಿತ್ರರಂಗದಲ್ಲೇ ಯಾವ ಸಿನಿಮಾ ಮಾಡಿರದಂತಹ ದಾಖಲೆಗಳನ್ನು ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್‌: ಚಾಪ್ಟರ್ 2’ ಮಾಡಿತ್ತು.

ಇದೀಗ ಕೆಜಿಎಪ್​ ಚಾಪ್ಟರ್​ 3 ಬರುವ ಮುನ್ಸೂಚನೆ ಕೊಟ್ಟಿದ್ದಾರೆ ನಿದೇರ್ಶಕ ಪ್ರಶಾಂತ್​ ನೀಲ್​. ಕೆಜಿಎಫ್ 3 ಬಗ್ಗೆ ಮಾತಾಡಿದ ಪ್ರಶಾಂತ್​ ನೀಲ್ ಅವರು, ಕೆಜಿಎಫ್ 3 ಕಥೆ ಕಂಪ್ಲೀಟ್ ಸಿದ್ಧವಿದೆ. ಕೆಜಿಎಫ್ 3 ಕಥೆ ಸಿದ್ಧವಿರುವ ಕಾರಣದಿಂದಲೇ ಚಾಪ್ಟರ್ 2 ಕೊನೆಯಲ್ಲಿ ಮುಂದಿನ ಭಾಗದ ಪ್ರಸ್ತಾಪ ಮಾಡಿದ್ದೇವೆ. ಸದ್ಯ ಯಶ್ ಟಾಕ್ಸಿಕ್ ಬ್ಯುಸಿಯಲ್ಲಿದ್ದಾರೆ. ವಿಜಯ್ ಕಿರಗಂದೂರು ಕೂಡ ಒಂದಷ್ಟು ಕಮಿಟ್ಮೆಂಟ್​ನಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲರ ಶೆಡ್ಯೂಲ್ ಹೊಂದಾಣಿಕೆ ಆಗುತ್ತಿದ್ದಂತೆ ಕೆಜಿಎಫ್ 3 ಬರಲಿದೆ ಅಂತಾ ತಿಳಿಸಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KGF ಚಾಪ್ಟರ್​ 3 ಬರೋದು ಪಕ್ಕಾ.. ನರಾಚಿಯಿಂದ ಬಂತು ದೊಡ್ಡ ಸುಳಿವು; ಪ್ರಶಾಂತ್ ನೀಲ್ ಹೇಳಿದ್ದೇನು?

https://newsfirstlive.com/wp-content/uploads/2024/05/prashath-neel.jpg

Load More