Advertisment

ಭಾವಿ ಪತಿ ಜೊತೆ ಮಿರಮಿರ ಮಿಂಚಿದ ಬಿಗ್​ಬಾಸ್​ ಬೆಡಗಿ; ದಿವ್ಯಾ ಉರುಡುಗ ಫುಲ್​ ಖುಷ್​

author-image
Veena Gangani
Updated On
ಭಾವಿ ಪತಿ ಜೊತೆ ಮಿರಮಿರ ಮಿಂಚಿದ ಬಿಗ್​ಬಾಸ್​ ಬೆಡಗಿ; ದಿವ್ಯಾ ಉರುಡುಗ ಫುಲ್​ ಖುಷ್​
Advertisment
  • ದಿವ್ಯಾ ಉರುಡುಗ, ಅರವಿಂದ್ ಸಖತ್​ ಕಲರ್​ಫುಲ್ ಲುಕ್​ಗೆ ಫ್ಯಾನ್ಸ್​ ಫಿದಾ
  • ಬಿಗ್​ಬಾಸ್​ ಸೀಸನ್ 8ರಲ್ಲಿ ಸ್ಪರ್ಧಿಗಳಾಗಿದ್ದ ದಿವ್ಯಾ ಉರುಡುಗ, ಅರವಿಂದ್ ಕೆಪಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಕ್ಯೂಟ್​ ಜೋಡಿಯ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಒಂದಲ್ಲ ಒಂದು ಸುದ್ದಿಯಲ್ಲಿರೋ ಕ್ಯೂಟ್​ ಜೋಡಿ. ಬಿಗ್​ಬಾಸ್​ ಸೀಸನ್ 8ರಲ್ಲಿ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಬಿಗ್​​ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು.

Advertisment

ಇದನ್ನೂ ಓದಿ:ಸಿನಿಮಾವನ್ನೇ ಮೀರಿಸುತ್ತೆ ಈ ಸೀರಿಯಲ್​​.. ದಿವ್ಯಾ ಉರುಡುಗ ನಟನೆಗೆ ಕನ್ನಡಿಗರು ಕೊಟ್ರು ಫುಲ್​ ಮಾರ್ಕ್ಸ್​​!

publive-image

ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಇಬ್ಬರ ನಡುವಿನ ಈ ಅನುಬಂಧ ಮುಂದುವರೆದಿತ್ತು. ಈ ಇಬ್ಬರು ಬಿಗ್​​​​​ಬಾಸ್​​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಅವರ ಮಾತು, ಟ್ಯಾಲೆಂಟ್​ಗೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ. ಇದೀಗ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಅವರು ಸಖತ್​ ಕಲರ್​ಫುಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಆಗಾಗ ಈ ಜೋಡಿ ಮಸ್ತ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಲೈಟ್​ ಪರ್ಪಲ್ ಕಲರ್ ಉಡುಪುಗಳನ್ನು ಧರಿಸಿಕೊಂಡು ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋವನ್ನು ದಿವ್ಯಾ ಉರುಡುಗ ಅವರು ತಮ್ಮ ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಜೊತೆಗೆ ಆದಷ್ಟೂ ಬೇಗನೇ ಮದುವೆ ಆಗಿ ಅಂತ ಹಾರೈಸಿದ್ದಾರೆ. ದಿವ್ಯಾ ಉರುಡುಗ ಅವರು ನಿನಗಾಗಿ ಸೀರಿಯಲ್​​ನಲ್ಲಿ ಲೀಡ್​ ರೋಲ್​ನಲ್ಲಿ ನಟಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment