newsfirstkannada.com

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ತೀವ್ರ.. ಸ್ಫೋಟಕ ಇಟ್ಟು ಪರಾರಿಯಾಗಿದ್ದವನ ಗುರುತು ಪತ್ತೆ?

Share :

Published March 2, 2024 at 7:58am

    ಬಸ್​ನಲ್ಲಿ ಬಂದು ಇಡ್ಲಿ ತಿಂದು, ಸ್ಫೋಟಕ ಇರೋ ಬ್ಯಾಗ್​ ಇಟ್ಟು ಎಸ್ಕೇಪ್​

    ಪರಿಶೀಲನೆ ನಡೆಸಿದರೂ ಸ್ಫೋಟದ ಹಿಂದಿನ ಅನುಮಾನ ಬಗೆಹರಿದಿಲ್ಲ

    3 ಸೂಟ್ ಕೇಸ್​ಗಳಲ್ಲಿ ಸಾಕ್ಷ್ಯಗಳನ್ನ ಸಂಗ್ರಹಿಸಿದ ಎಫ್‌ಎಸ್‌ಎಲ್ ತಂಡ

ರಾಮೇಶ್ವರಂ ಕೆಫೆಯಲ್ಲಿ ನಡೆಯಬಾರದ ಘಟನೆ ನಡೆದಿದೆ. ಬೆಂಗಳೂರಿನ ಶಾಂತಿಗೆ ಭಂಗತರುವ ದುರಂತ ಸಂಭವಿಸಿದೆ. ಒಂದರ ಹಿಂದೆ ಒಂದರಂತೆ 2 ಬಾರಿ ಸ್ಫೋಟ ಸಂಭವಿಸಿದ್ದು, ಸಿಲಿಕಾನ್ ಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿದೆ. ಇದೀಗ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆಗಂತುಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಿನ್ನೆ ಮಧ್ಯಾಹ್ನ ರಾಮೇಶ್ವರಂ ಕೆಫೆ ಬಳಿ ಭೀಕರ ಬಾಂಬ್ ಸ್ಫೋಟವಾಗಿದೆ. ಕೇವಲ 10 ಸೆಕೆಂಡ್​ಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ 2 ಬಾರಿ ಸ್ಫೋಟ ಸಂಭವಿಸಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಫೋಟದ ತೀವ್ರತೆಗೆ ಹೋಟಲ್​​ಗೆ ಬಂದಿದ್ದ ಗ್ರಾಹಕರ ಬಟ್ಟೆ ಛಿದ್ರ ಛಿದ್ರವಾಗಿದೆ. ಇದೀಗ ಬಾಂಬ್ ಇಟ್ಟು ಎಸ್ಕೇಪ್‌ ಆಗಿದ್ದ ದುಷ್ಕರ್ಮಿ ಬಂಧನಕ್ಕೆ ಖೆಡ್ಡಾ ತೋಡಲಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಹೋದವನ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈಗಾಗಲೇ ದುಷ್ಕರ್ಮಿಯ ಸುಳಿವು ಸಿಕ್ಕಿದೆ ಅಂತ ರಾಜ್ಯ ಸರ್ಕಾರ ತಿಳಿಸಿದೆ. ಬಸ್​ನಲ್ಲಿ ಬಂದು ವ್ಯಕ್ತಿ ಇಡ್ಲಿ ತಿಂದು ಬಾಂಬ್​ ಇಟ್ಟು ಹೋಗಿದ್ದಾನೆ ಎನ್ನಲಾಗಿದೆ. 35 ವರ್ಷದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದ್ದು, ಕೆಲ ಗಂಟೆಗಳಲ್ಲೇ ಬಂಧಿಸೋದಾಗಿ ಗೃಹ ಸಚಿವ ಪರಮೇಶ್ವರ್, ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

‘ಓರ್ವ ವ್ಯಕ್ತಿ ಗುರುತು ಪತ್ತೆ’

ಬಸ್​​ನಲ್ಲಿ ಬಂದಿದ್ದ ಎಂಬುದರ ಬಗ್ಗೆ ಮಾಹಿತಿ ಇದೆ. ಬಿಎಂಟಿಸಿ ಬಸ್​ನಲ್ಲಿ ಬಂದಿದ್ದರೇ ಬಸ್​ನ ಕ್ಯಾಮೆರಾಗಳನ್ನ ಪರಿಶೀಲಿಸಿ ಫೋಟೆಜ್​ ತೆಗೆದುಕೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರು ನಮ್ಮ ಜೊತೆ ಸಹಕರಿಸಬೇಕು.

ಡಾ.ಜಿ. ಪರಮೇಶ್ವರ್, ಗೃಹ ಸಚಿವ

ಪೂರ್ಣ ತನಿಖೆಯನ್ನು ಸಿಸಿಬಿ ಪೊಲೀಸರು ಬೇರೆ ಬೇರೆ ತಂಡಗಳಿಂದ ತನಿಖೆ ಮಾಡುತ್ತಿದ್ದಾರೆ. 7-8 ಟೀಮ್​ಗಳನ್ನ ರೆಡಿ ಮಾಡಿ ಕಳುಹಿಸಿಕೊಡಲಾಗಿದೆ.

ಡಿ.ಕೆ. ಶಿವಕುಮಾರ್‌, ಡಿಸಿಎಂ

ರಾಮೇಶ್ವರಂ ಕೆಫೆಗೆ ಬಂದಿದ್ದ ಆರೋಪಿ ಬೆನ್ನಿಗೆ ಕಪ್ಪು ಬ್ಯಾಗ್ ಹಾಕಿಕೊಂಡು ಬಂದಿದ್ದ. ಬಳಿಕ ಹೊರಗೆ ಹೋಗುವಾಗ ಆ ಬ್ಯಾಗ್‌ನ ಕೆಫೆಯಲ್ಲೇ ಬಿಟ್ಟು ಹೋಗಿದ್ದಾರೆ. ಇನ್ನೂ ಸಿಸಿಟಿವಿಯಲ್ಲಿ ಆರೋಪಿಯ ಪ್ರತಿಯೊಂದು ಚಲನವಲನ ಸೆರೆಯಾಗಿದೆ. ಇದೀಗ ಎಫ್‌ಎಸ್‌ಎಲ್ ತಂಡ ಬರೋಬ್ಬರಿ 3 ಸೂಟ್ ಕೇಸ್​ಗಳಲ್ಲಿ ಸಾಕ್ಷ್ಯಗಳನ್ನ ಸಂಗ್ರಹಿಸಿದ್ದಾರೆ.

ತನಿಖೆಯಲ್ಲಿ ಏನೆಲ್ಲ ಸಂಗ್ರಹ?

1. ಸ್ಫೋಟಕ ಇಟ್ಟಿದ್ದ ಬ್ಯಾಗ್ ವಶಕ್ಕೆ ಪಡೆದ FSL ತಂಡ
2. ಸ್ಫೋಟದ ತೀವ್ರತೆಯಿಂದಾದ ಛಿದ್ರ ವಸ್ತುಗಳ ಸ್ಯಾಂಪಲ್
3. ಸ್ಫೋಟದ ಬಳಿಕ ಧೂಳಿನಲ್ಲಿ ಓಡಾಡಿರುವ ಫುಟ್ ಪ್ರಿಂಟ್
4. ಫಿಂಗರ್ ಫ್ರಿಂಟ್ ಸೇರಿ ಒಟ್ಟು 20ಕ್ಕೂ ಹೆಚ್ಚು ಸ್ಯಾಂಪಲ್

ಇದನ್ನು ಓದಿ: ರಾಮೇಶ್ವರಂ ಕೆಫೆ ಸ್ಫೋಟದಲ್ಲಿ 9 ಮಂದಿಗೆ ಗಾಯ.. ಗಾಯಾಳುಗಳ ಸ್ಥಿತಿ ಹೇಗಿದೆ? ವೈದ್ಯರು ಏನಂದ್ರು..?

ಎಲ್ಲಾ ರೀತಿ ಪರಿಶೀಲನೆ ನಡೆಸಿದ್ರೂ ಸ್ಫೋಟದ ಹಿಂದಿನ ಅನುಮಾನ ಬಗೆಹರಿದಿಲ್ಲ. ಹೀಗಾಗಿ ಇದು ನಿಗೂಢ ಸ್ಫೋಟದ ಕುರಿತ ಅನುಮಾನಗಳನ್ನ ಮತ್ತಷ್ಟು ಹೆಚ್ಚಿಸಿದೆ. ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ತೀವ್ರ.. ಸ್ಫೋಟಕ ಇಟ್ಟು ಪರಾರಿಯಾಗಿದ್ದವನ ಗುರುತು ಪತ್ತೆ?

https://newsfirstlive.com/wp-content/uploads/2024/03/BNG-BLAST.jpg

Load More