'ಇಂಡಿಯಾ' ಬದಲು ಭಾರತ ಎಂದು ಮರುನಾಮಕರಣ
ಪ್ರಧಾನಿ ಮೋದಿ ನಿರ್ಧಾರಕ್ಕೆ ಡಿಸಿಎಂ ಡಿಕೆಶಿ ವಿರೋಧ..!
ನಾನು ಇದನ್ನು ಖಂಡಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್
ರಾಮನಗರ: ದೇಶದ ಹೆಸರು ‘ಇಂಡಿಯಾ’ ಬದಲು ಭಾರತ ಎಂದು ಮರುನಾಮಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್ ಮಾತಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಮುಂದಿನ ದಿನಗಳಲ್ಲಿ ನಿಮ್ಮ ಹೆಸರು ಬದಲಾವಣೆ ಮಾಡುತ್ತಾರೆ. ಇದು ರಿಪಬ್ಲಿಕ್ ಆಪ್ ಇಂಡಿಯಾ. ನೋಟ್ನಲ್ಲೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿದೆ ಎಂದರು ಡಿ.ಕೆ ಶಿವಕುಮಾರ್.
ಬಿಜೆಪಿಗೆ ಭಯ ಶುರುವಾಗಿದೆ ಎಂದ ಡಿಕೆಶಿ
ಕಾಂಗ್ರೆಸ್ ನೇತೃತ್ವದ ಇಂಡಿಯಾ ಅನ್ನೋ ಒಕ್ಕೂಟದಿಂದ ಬಿಜೆಪಿಗೆ ಭಯ ಶುರುವಾಗಿದೆ. ನಮ್ಮ ಹೆಸರು ಬಹಳ ಎಫೆಕ್ಟಿವ್ ಆಗಿದೆ. ಹೀಗಾಗಿ ಹೆಸರು ಬದಲಿಸೋ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಸೋಲನ್ನು ನೋಡುತ್ತಿದ್ದಾರೆ. ಎಲ್ಲದರ ಹೆಸರು ಬದಲಾವಣೆ ಮಾಡಿ ಅವರ ಮಾತಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಕೆಲವು ವಿಚಾರಗಳನ್ನು ಕೇಳಿದ್ರೆ ಶಾಕ್ ಆಗ್ತೀರಾ ಎಂದರು.
ಅಸೆಟ್ ಡೀಮಾನಿಟೈಸ್ ಮಾಡಲು ಮುಂದಾಗಿದ್ದಾರೆ. ನಾವು ಭಾರತೀಯರೇ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಜೆಪಿಯವ್ರು ಮಾಡ್ತಿರೋದು ಸರಿಯಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇದನ್ನ ಖಂಡಿಸ್ತೀನಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ