newsfirstkannada.com

ಕಾಂಗ್ರೆಸ್​ ಶಾಸಕನ ಖಾಸಗಿ ವಿಡಿಯೋ ಲೀಕ್​​.. ಪಕ್ಷದ ನಾಯಕರಿಗೆ ಡಿಕೆಶಿ ಖಡಕ್​ ಎಚ್ಚರಿಕೆ!

Share :

Published May 3, 2024 at 5:56am

    ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖಾಸಗಿ ವಿಡಿಯೋ ಕೂಡ ವೈರಲ್

    ಸಚಿವರು, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರ ಡಿಕೆ ಶಿವಕುಮಾರ್​ ಕೊಟ್ಟ ಸಂದೇಶ

    ಕಾರ್ಯಕರ್ತರು ಮತ್ತು ಜನರ ಜೊತೆ ಪೋಟೋ ತೆಗೆಸಿಕೊಳ್ಳುವಾಗ ಎಚ್ಚರ

ರಾಜ್ಯ ರಾಜಕಾರಣದಲ್ಲಿ ಹಾಸನ ಅಶ್ಲೀಲ ವಿಡಿಯೋ ಹರಿದಾಟ ಹಲ್​​ಚಲ್ ಎಬ್ಬಿಸಿದೆ. ಇದೇ ವಿಚಾರವನ್ನೇ ಅಸ್ತ್ರವಾಗಿಸಿ ಕಾಂಗ್ರೆಸ್​ ನಾಯಕರು ಎನ್​ಡಿಎ ನಾಯಕರ ಮೇಲೆ ಮುಗಿಬೀಳ್ತಿದ್ದಾರೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್​ರದ್ದು ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್ ಆಗಿದೆ. ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡುವ ಸಾಧ್ಯತೆ ಇದ್ದು ಎಚ್ಚರಿಕೆ ವಹಿಸವಂತೆ ಸಚಿವರು, ಶಾಸಕರಿಗೆ ಸೂಚಿಸಿದೆ.

ಇದನ್ನೂ ಓದಿ: ಕೋವಿಶೀಲ್ಡ್ ಭಯ.. ನಿಜಕ್ಕೂ ಮಾರಣಾಂತಿಕ ಸೈಡ್ ಎಫೆಕ್ಟ್‌ ಇದೆಯಾ? ತಜ್ಞ ವೈದ್ಯರು ಹೇಳೋದೇನು?

ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಇಡೀ ರಾಜ್ಯದಲ್ಲೇ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಎಲ್ಲಿ ನೋಡಿದ್ರೂ ಅಶ್ಲೀಲ ವಿಡಿಯೋದ್ದೇ ಮಾತು ಕೇಳಿಬರ್ತಿದೆ. ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್​ಐಟಿ ರಚಿಸಿ ತನಿಖೆ ನಡೆಸ್ತಿರೋ ಕಾಂಗ್ರೆಸ್ ಸರ್ಕಾರ ಪ್ರಕರಣದ ಬೆನ್ನಲ್ಲೇ ಅಲರ್ಟ್​ ಆಗಿದೆ. ಚುನಾವಣೆ ಹೊತ್ತಲ್ಲಿ ಎದುರಾಳಿಗಳು ತಮ್ಮ ಪಕ್ಷದ ಸಚಿವರು, ಶಾಸಕರನ್ನೂ ಟಾರ್ಗೆಟ್ ಮಾಡುವ ಸಾಧ್ಯತೆ ಇದ್ದು ಅಲರ್ಟ್ ಆಗಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಮೊಬೈಲ್​ ಹಾಗೂ ಜಾಲತಾಣಗಳನ್ನು ಬಳಸುವ ಮುನ್ನ ಎಚ್ಚರದಿಂದ ಇರುವಂತೆ ಖಡಕ್ ಆಗಿ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ಕಟ್ಟೆಚ್ಚರ!

ಲೋಕಸಭಾ ಚುನಾವಣೆ ಹೊತ್ತಲ್ಲಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ಪಕ್ಷವನ್ನು ಟಾರ್ಗೆಟ್ ಮಾಡಬಹುದು, ಹೀಗಾಗಿ ಎಲ್ಲಾ ನಾಯಕರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಅಂತ ಕೆಪಿಸಿಸಿ ಸೂಚಿಸಿದೆ. ಎಲ್ಲಾ ನಾಯಕರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಜೊತೆಗೆ ಫೋನ್ ಕರೆಗಳಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಿ, ವಿಡಿಯೋ ಕರೆಗಳನ್ನ ಸ್ವೀಕರಿಸುವಾಗ ಹಾಗೂ ಮಾತನಾಡುವಾಗ ಜಾಗೃತರಾಗಿರಿ, ಇನ್ನು ವಿಡಿಯೋ ಕಾಲ್ ಮೂಲಕ ಸಂಕಷ್ಟಕ್ಕೆ ಸಿಲುಕಿಸುವ ಯತ್ನ ನಡೆಯುತ್ತಿದೆ. ಈ ಬಗ್ಗೆ ನಿಗಾ ವಹಿಸಿ, ಪ್ರಚಾರದ ವೇಳೆ ಕಾರ್ಯಕರ್ತರು ಹಾಗೂ ಜನರ ಜೊತೆ ಪೋಟೋ ತೆಗೆಸಿಕೊಳ್ಳುವಾಗ ಎಚ್ಚರ ತಪ್ಪದಿರಿ, ವೈಯಕ್ತಿಕ ವಿಚಾರಗಳನ್ನೇ ಟಾರ್ಗೆಟ್ ಮಾಡಿ ನಿಮ್ಮನ್ನು ಸಿಲುಕಿಸುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮಗಳ ಬೇಜವಾಬ್ದಾರಿಯಿಂದ ಪಕ್ಷಕ್ಕೆ ಮುಜುಗರ ಉಂಟುಮಾಡಬೇಡಿ ಅಂತ ಕೆಪಿಸಿಸಿ ಸೂಚಿಸಿದೆ.

ರಾಮನಗರ ಶಾಸಕ ಇಕ್ಬಾಲ್ ಎನ್ನಲಾದ ವಿಡಿಯೋ ವೈರಲ್

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಕೂಡ ವೈರಲ್ ಆಗಿದ್ದು ರಾಮನಗರ ಜಿಲ್ಲಾ ಯುವ ಕಾಂಗ್ರೆಸ್​​​ ಅಧ್ಯಕ್ಷ ಅನಿಲ್ ಜೋಗೇಂದರ್ ದೂರು ದಾಖಲಿಸಿದ್ದಾರೆ. ನಕಲಿ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡಿ ತೇಜೋವಧೆಗೆ ಯತ್ನಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ, ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಾಯಕರು ವಿವಾದಕ್ಕೆ ಸಿಲುಕುವುದು ಮುಜುಗರದ ಜೊತೆಗೆ ಪಕ್ಷಕ್ಕೆ ಹಿನ್ನಡೆ ಆಗಲಿದೆ. ವಿಪಕ್ಷಗಳ ಬಾಯಿಗೂ ಆಹಾರ ಆಗಬೇಕಾಗುತ್ತೆ. ಹೀಗಾಗಿ​ ಪಕ್ಷದ ನಾಯಕರಿಗೆ ರಾಜ್ಯ ಕಾಂಗ್ರೆಸ್ ಎಚ್ಚರಿಕೆಯ ಸಂದೇಶ ರವಾನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಶಾಸಕನ ಖಾಸಗಿ ವಿಡಿಯೋ ಲೀಕ್​​.. ಪಕ್ಷದ ನಾಯಕರಿಗೆ ಡಿಕೆಶಿ ಖಡಕ್​ ಎಚ್ಚರಿಕೆ!

https://newsfirstlive.com/wp-content/uploads/2023/07/DK_Shivkumar-2.jpg

Load More