newsfirstkannada.com

ಹಳೆ ಮೈಸೂರು ‘ಕೈ’ ವಶಕ್ಕೆ ಸರ್ಕಸ್​​.. ಒಕ್ಕಲಿಗರ ಮತ ಸೆಳೆಯಲು ಡಿಕೆಶಿ ಹೊಸ ಪ್ಲಾನ್​​; ಏನದು?

Share :

Published April 21, 2024 at 6:53am

Update April 21, 2024 at 6:32am

  ಪಕ್ಷದ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕೆ ಶಿವಕುಮಾರ್​ ಪ್ರಯತ್ನ

  ದಳದ ಸಾಮ್ರಾಜ್ಯವನ್ನೇ ಟಾರ್ಗೆಟ್ ಮಾಡಿ ಟಕ್ಕರ್ ಕೊಡಲು ಮುಂದಾದ ಕೈ

  ಸಚಿವ ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿಯಿಂದಲೂ ಸಮುದಾಯದ ಸಭೆ

ಮೈಸೂರು: ಹಳೇ ಮೈಸೂರು ಭಾಗ. ಒಕ್ಕಲಿಗರ ಕೋಟೆ. ಜೆಡಿಎಸ್‌ನ ಭದ್ರವಾದ ವೋಟ್‌ ಬ್ಯಾಂಕ್‌. ಇದೀಗ ದಳದ ಸಾಮ್ರಾಜ್ಯವನ್ನೇ ಟಾರ್ಗೆಟ್ ಮಾಡಿ ಟಕ್ಕರ್ ಕೊಡಲು ಕಾಂಗ್ರೆಸ್ ಪಾಳಯ ಸಜ್ಜಾಗಿದೆ. ದಳಪತಿ ಸ್ಪರ್ಧಿಸಿರೋ ಮಂಡ್ಯ ಸೇರಿದಂತೆ ಒಕ್ಕಲಿಗ ಬೆಲ್ಟ್‌ ಜಿಲ್ಲೆಗಳ ವಶಕ್ಕೆ ಕೈ ನಾಯಕರು ಸಭೆ ಮೇಲೆ ಸಭೆ ಮಾಡಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುವೆವು ಅಂತ ರಣತಂತ್ರ ರೂಪಿಸಿ ಲೋಕ ಗೆಲ್ಲಲು ಶತಪ್ರಯತ್ನ ಮಾಡುತ್ತಿದ್ದಾರೆ.

ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಇದೀಗ ಹೆಚ್‌ಡಿಕೆ ಪ್ರಾಬಲ್ಯಕ್ಕೆ ಮತ್ತಷ್ಟು ಬಲ ಬಂದಿದೆ. ದೋಸ್ತಿಯ ಶಕ್ತಿಯೊಂದಿಗೆ ದಳಪತಿಯ ಯುಕ್ತಿ ಸೇರಿ ಕೈಗೆ ಪೆಟ್ಟು ಕೊಡಲು ಸಿದ್ಧವಾಗ್ತಿದ್ದಾರೆ. ಹೀಗಾಗಿ ಸ್ನೇಹಲೋಕದ ಸಮರಕ್ಕೆ ಕೌಂಟರ್ ಅಟ್ಯಾಕ್ ಮಾಡಲು ಕನಕಾಧಿಪತಿ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಜೆಡಿಎಸ್ ನಾಯಕರ ಬೆನ್ನಿಗೆ ಇರುವ ಒಕ್ಕಲಿಗ ಮತಗಳನ್ನ ಸೆಳೆಯಲು ‘ಕೈ’ ಅಧಿಪತಿ ರಣತಂತ್ರ ಹೆಣೆಯುತ್ತಿದ್ದಾರೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಡಿಸಿಎಂ ಡಿಕೆಶಿವಕುಮಾರ್ ಸಭೆ ಮಾಡುವ ಮುಖೇನ ತಮ್ಮ ಸಮುದಾಯದ ವೋಟ್‌ಗಳನ್ನ ಭದ್ರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: VIDEO: ಮೋದಿಗೆ ಚೊಂಬು ತೋರಿಸಲು ಮುಂದಾದ ನಲಪಾಡ್​​.. ಎತ್ತಾಕಂಡು ಹೋದ ಪೊಲೀಸ್ರು!

ಲೋಕಸಭಾ ಚುನಾಚಣೆಯಲ್ಲಿ ಜೆಡಿಎಸ್​ ಸೋಲಿಗೆ ‘ಕೈ’ ಅಧ್ಯಕ್ಷ ಪಣ ತೊಟ್ಟಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಈಗಾಗಲೇ ಡಿಸಿಎಂ ಸಭೆಗಳನ್ನ ನಡೆಸಿದ್ದಾರೆ. ಅಲ್ಲದೇ ತಮ್ಮ ಸಮುದಾಯದ ಮತಗಳನ್ನ ಸೆಳೆಯಲು ಡಿ.ಕೆ. ಶಿವಕುಮಾರ್ ಪದೇ ಪದೆ ಸಭೆ ನಡೆಸ್ತಿದ್ದಾರೆ. ಇದೀಗ ಬೆಂಗಳೂರು, ಮೈಸೂರಿನಲ್ಲಿ ರಹಸ್ಯ ಸಭೆಗಳನ್ನೂ ನಡೆಸುತ್ತಿದ್ದಾರೆ. ಈಗಾಗಲೇ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಅವಕಾಶ ಸಿಕ್ಕಿದೆ. ಮುಂದೆ ಮುಖ್ಯಮಂತ್ರಿ ಗಾದಿಯೂ ಒಲಿಯಲಿದೆ ಅಂತ ಪ್ರಚಾರ ಮಾಡ್ತಿದ್ದಾರೆ. ಈ ಮೂಲಕ ತಮ್ಮ ಪಕ್ಷದ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಸಿಎಂ ಪ್ರಯತ್ನ ನಡೆಸ್ತಿದ್ದಾರೆ. ಡಿಸಿಎಂ ಅಷ್ಟೇ ಅಲ್ಲ. ಮಂಡ್ಯ ಮತ್ತು ಬೆಂಗಳೂರು ಭಾಗದ ಒಕ್ಕಲಿಗ ನಾಯಕರೂ ಕೂಡಾ ದೋಸ್ತಿಗೆ ಮಣ್ಣು ಮುಕ್ಕಿಸಲು ಮಸಲತ್ತು ಮಾಡ್ತಿದ್ದಾರೆ. ಸಚಿವರಾದ ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ ನೇತೃತ್ವದಲ್ಲಿ ದಳದ ಮತಗಳನ್ನ ಮೊಟಕುಗೊಳಿಸಿ ಕೈ ಕಡೆ ತಿರುಗಿಸಲು ರಣವ್ಯೂಹ ರಚಿಸಿದ್ದಾರೆ.

ಒಕ್ಕಲಿಗರ ಸೆಳೆಯಲು ‘ಕೈ’ ತಂತ್ರ

ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿಯಿಂದಲೂ ಸಮುದಾಯದ ಸಭೆ
ಅಭ್ಯರ್ಥಿಗಳ ಜೊತೆ ಆದಿಚುಂಚನಗಿರಿ ಶ್ರೀ ಭೇಟಿ ಮಾಡಿದ ನಾಯಕರು
ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ ಆದಿಯಾಗಿ ನಾಯಕರ ಭೇಟಿ
ಈ ಮೂಲಕ ಜೆಡಿಎಸ್​ನ ಬಹುಪಾಲು ಮತಗಳನ್ನ ಸೆಳೆಯುವ ಲೆಕ್ಕಾಚಾರ

ಸಚಿವರಾದ ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿಯೂ ತಮ್ಮ ಸಮುದಾಯದ ಸಭೆಗಳನ್ನ ನಡೆಸ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳನ್ನ ಭೇಟಿ ಮಾಡಿದ್ದಾರೆ. ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ ಆದಿಯಾಗಿ ಕೈ ನಾಯಕರೆಲ್ಲಾ ಶ್ರೀಗಳನ್ನ ಭೇಟಿಯಾಗಿ ಒಕ್ಕಲಿಗ ಮತ ಸೆಳೆಯುವ ಕಾರ್ಯತಂತ್ರ ಹೆಣೆದಿದ್ದಾರೆ. ಈ ಮೂಲಕ ಜೆಡಿಎಸ್​ನ ಬಹುಪಾಲು ಮತಗಳನ್ನ ಸೆಳೆಯುವ ಲೆಕ್ಕಾಚಾರ ಹಾಕಿದ್ದಾರೆ. ಒಟ್ಟಾರೆ, ಒಕ್ಕಲಿಗ ಕೋಟೆಗೆ ಲಗ್ಗೆ ಇಟ್ಟು ತಮ್ಮ ಪಾರುಪತ್ಯ ಮೆರೆಯಲು ಹಸ್ತ ಕಲಿಗಳು ಸಜ್ಜಾಗಿದ್ದಾರೆ. ಮಂಡ್ಯ ಅಭ್ಯರ್ಥಿ ಹೆಚ್‌.ಡಿ. ಕುಮಾರಸ್ವಾಮಿ ಜೊತೆಗೆ ಬಿಜೆಪಿ ಅಭ್ಯರ್ಥಿಗಳನ್ನ ಪರಾಭವಗೊಳಿಸಲು ರಣವ್ಯೂಹ ರಚಿಸಿದ್ದಾರೆ. ಇದೀಗ ಡಿಕೆಶಿ ಪ್ಲಾನ್‌ ವರ್ಕೌಟ್‌ ಆಗುತ್ತಾ? ಅನ್ನೋದು ಜೂನ್ 04ಕ್ಕೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೆ ಮೈಸೂರು ‘ಕೈ’ ವಶಕ್ಕೆ ಸರ್ಕಸ್​​.. ಒಕ್ಕಲಿಗರ ಮತ ಸೆಳೆಯಲು ಡಿಕೆಶಿ ಹೊಸ ಪ್ಲಾನ್​​; ಏನದು?

https://newsfirstlive.com/wp-content/uploads/2023/12/DKSHIVAKUMAR-4.jpg

Load More