newsfirstkannada.com

ಅಣ್ಣ-ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಡಿ.ಕೆ.ಸುರೇಶ್..! ವಿಡಿಯೋ

Share :

Published March 28, 2024 at 11:29am

Update March 28, 2024 at 11:30am

  ನಾಮಪತ್ರ ಸಲ್ಲಿಕೆಗೂ ಮುನ್ನ ಹಿರಿಯರ ಆಶೀರ್ವಾದ ಪಡೆದ ಡಿಕೆಸು

  ಏಪ್ರಿಲ್ 26 ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮತದಾನ

  ಈ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಕೆ ಮಾಡಿರುವ ಸುರೇಶ್

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವ ಆರ್ಭಟ ಇವತ್ತಿನಿಂದ ಅಧಿಕೃತವಾಗಿ ಶುರುವಾಗ್ತಿದೆ. ಅದರಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಡಿ.ಕೆ.ಸುರೇಶ್ ಇವತ್ತು ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್, ಗುರು-ಹಿರಿಯರ, ಮನೆದೇವರ ಆಶೀರ್ವಾದ ಪಡೆದಿದ್ದಾರೆ. ಅದರಂತೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿ ಒಳ್ಳೆಯದಾಗುವಂತೆ ಸಂಕಲ್ಪ ಮಾಡಿಕೊಂಡರು. ನಂತರ ಸಹೋದರ ಡಿ.ಕೆ.ಶಿವಕುಮಾರ್, ಅತ್ತಿಗೆ ಉಷಾ ಶಿವಕುಮಾರ್​ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಇದನ್ನೂ ಓದಿ: ಸಮಂತಾ-ನಾಗ ಚೈತನ್ಯ ವಿಚ್ಛೇದನ.. ಇದಕ್ಕೆಲ್ಲಾ ಫೋನ್​ ಟ್ಯಾಪಿಂಗ್​ ಕಾರಣ?

ಅಣ್ಣ ಶಿವಕುಮಾರ್​ಗೆ ಬಿ-ಫಾರಂ ನೀಡಿ ಚುನಾವಣೆಯಲ್ಲಿ ಗೆದ್ದು ಬರುವಂತೆ ಹಾರೈಸುವಂತೆ ಕೋರಿಕೊಂಡರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ನಡೆಯುವ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟ ಆಗಲಿದೆ. ಶಿವಕುಮಾರ್​ಗೆ ಎದುರಾಳಿಯಾಗಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಅವರು ಕಣದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಣ್ಣ-ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಡಿ.ಕೆ.ಸುರೇಶ್..! ವಿಡಿಯೋ

https://newsfirstlive.com/wp-content/uploads/2024/03/DK-SURESH-1-1.jpg

Load More