newsfirstkannada.com

ಸಮಂತಾ-ನಾಗ ಚೈತನ್ಯ ವಿಚ್ಛೇದನ.. ಇದಕ್ಕೆಲ್ಲಾ ಫೋನ್​ ಟ್ಯಾಪಿಂಗ್​ ಕಾರಣ?

Share :

Published March 28, 2024 at 11:23am

  ಪತಿಯ ಫೋನ್​ ಕದ್ದಾಲಿಕೆ ಮಾಡಿದ್ರಾ ಖ್ಯಾತ ನಟಿ

  ಗಂಡನ ಮೇಲಿನ ಅನುಮಾನದಿಂದ ವಿಚ್ಛೇದನ ಪಡೆದರೇ?

  ತಾರಾ ಜೋಡಿ ವಿಚ್ಛೇದನಕ್ಕೆ ಫೋನ್​ ಕದ್ದಾಲಿಕೆ ಕಾರಣವಾಯ್ತಾ?

ಇತ್ತೀಚೆಗೆ ತೆಲಂಗಾಣದಲ್ಲಿ ಮುನ್ನೆಲೆಗೆ ಬಂದ ಟೆಲಿಫೋನ್ ಕದ್ದಾಳಿಕೆ​ ಪ್ರಕರಣ ಅಗೆದಷ್ಟು ಬಯಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಖ್ಯಾತ ನಟ-ನಟಿಯರ ಫೋನ್​ ಕದ್ದಾಲಿಕೆ ಮಾಡಿರುವ ಸಂಗತಿ ಹೊರಬರುತ್ತಿದೆ. ಅಚ್ಚರಿ ಸಂಗತಿ ಎಂದರೆ ನಟಿ ಸಮಂತಾ ರುತ್​ ಪ್ರಭು ಹೆಸರು ಕೂಡ ಈ ಫೋನ್​ ಕದ್ದಾಳಿಕೆಯಲ್ಲಿ ಕೇಳಿಬಂದಿದೆ ಎನ್ನಲಾಗುತ್ತಿದ್ದು, ಇದರಿಂದಾಗಿ ಆಕೆ ಮತ್ತು ನಾಗ ಚೈತನ್ಯ ಇಬ್ಬರ ವಿಚ್ಛೇದನ ಇದು ಕಾರಣವಾಯಿತೇ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ.

ಟೆಲಿಫೋನ್​ ಕದ್ದಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಣೀತ್​ ರಾವ್ ಬಂಧನಕ್ಕೊಳಗಾಗಿದ್ದಾರೆ. ವಿಚಾರಣೆ ವೇಳೆ ಹಲವಾರು ಸಂಗತಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಪ್ರಣೀತ್​ ರಾವ್​ ತಂಡ ಉದ್ಯಮಿ, ಸಿನಿಮಾ, ರಾಜಕಾರಣಿ ಮತ್ತು ಸೆಲೆಬ್ರಿಟಿಗಳ ಫೋನ್​ ಟ್ಯಾಪಿಂಗ್​ನಲ್ಲಿ ಭಾಗಿಯಾಗಿತ್ತು. ಕೇವಲ ಕದ್ದಾಳಿಕೆ ಮಾತ್ರವಲ್ಲ, ಬೆದರಿಕೆ, ಸುಲಿಗೆ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬ ಸಂಗತಿ ಮುನ್ನೆಲೆಗೆ ಬಂದಿದೆ.

ದಕ್ಷಿಣ ಭಾರತದ ಪ್ರಖ್ಯಾತ ನಟಿಯೊಬ್ಬರು ಈ ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ಸಿಲುಕಿದ್ದು, ಅವರ ವೈಯಕ್ತಿಕ ಜೀವನದ ಗೌಪ್ಯತೆ ಇದರಲ್ಲಿ ಬಂದಿತ್ತು ಎಂಬ ಸಂಗತಿ ಹರಿದಾಡಿತ್ತು. ಇದೀಗ ನಟಿ ಸಮಂತಾ ಅವರು ಈ ಫೋನ್​ ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಾರಾ ಜೋಡಿ ವಿಚ್ಚೇಧನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪತ್ನಿ ಮತ್ತು ಮಗುವಿನ ಜೊತೆ ಲಂಡನ್​ ನೆನಪಿನ ಬುತ್ತಿ ತೆರೆದಿಟ್ಟ ಕೊಹ್ಲಿ.. ದೇವರಿಗೆ ಧನ್ಯವಾದ ಹೇಳಿದ್ದೇಕೆ ವಿರಾಟ್​​​​​​?

ತೆಲುಗಿನ ಕೆಲವು ಯ್ಯೂಟೂಬ್​ ಚಾನೆಲ್​ನಲ್ಲಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಫೋನ್​ ಟ್ಯಾಪಿಂಗ್​ ಕಾರಣ ಎಂದು ಬಿತ್ತರಿಸುತ್ತಿವೆ. ಮತ್ತೊಂದೆಡೆ ನಾಗ ಚೈತನ್ಯ ವರ್ತನೆ ಮೇಲೆ ಸಮಂತಾಗೆ ಅನುಮಾನವಿತ್ತು. ಈ ಕಾರಣಕ್ಕೆ ನಟಿ ಫೋನ್​ ಟ್ಯಾಪಿಂಗ್​ ಮಾಡಿಸಿದ್ದರು ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಂತಾ-ನಾಗ ಚೈತನ್ಯ ವಿಚ್ಛೇದನ.. ಇದಕ್ಕೆಲ್ಲಾ ಫೋನ್​ ಟ್ಯಾಪಿಂಗ್​ ಕಾರಣ?

https://newsfirstlive.com/wp-content/uploads/2024/03/samantha.jpg

Load More