newsfirstkannada.com

ಪತ್ನಿ ಮತ್ತು ಮಗುವಿನ ಜೊತೆ ಲಂಡನ್​ ನೆನಪಿನ ಬುತ್ತಿ ತೆರೆದಿಟ್ಟ ಕೊಹ್ಲಿ.. ದೇವರಿಗೆ ಧನ್ಯವಾದ ಹೇಳಿದ್ದೇಕೆ ವಿರಾಟ್​​​​​​?

Share :

Published March 28, 2024 at 10:16am

Update March 28, 2024 at 10:33am

  ಕೊಹ್ಲಿ 2 ತಿಂಗಳು ಕ್ರಿಕೆಟ್​​ ಬಿಟ್ಟು ಲಂಡನ್​ನಲ್ಲಿ ಉಳಿದುಕೊಂಡಿದ್ರು

  ಅಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕೊಹ್ಲಿ ಲಂಡನ್​ ಜೀವಿಸಿದ್ದರಂತೆ

  ಲಂಡನ್​ನಲ್ಲಿ ಕಳೆದ ಅನುಭವವನ್ನು ಬಿಚ್ಚಿಟ್ಟ ವಿರಾಟ್​​ ಕೊಹ್ಲಿ

ವಿರಾಟ್ ಕೊಹ್ಲಿ ರನ್​​​ಭೂಮಿಯ ಮಹಾರಾಜ. ಏಕಾಂಗಿಯಾಗಿ ಹೋರಾಡಿ ಕೆಚ್ಚದೆಯಿಂದ ಪಂದ್ಯ ಗೆಲ್ಲಿಸಿಕೊಡಬಲ್ಲ ರಿಯಲ್ ವಾರಿಯರ್​​​. ಇಂತಹ ಕ್ರಿಕೆಟ್ ಸೂಪರ್​ ಸ್ಟಾರ್ ಓರ್ವ ಪರ್ಫೆಕ್ಟ್​ ಫ್ಯಾಮಿಮ್ಯಾನ್​​ ಕೂಡ ಹೌದು. ಸಾಮಾನ್ಯರಂತೆ ಜೀವಿಸಲು ಕುಟುಂಬದ ಜೊತೆ ಅಜ್ಞಾತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ರು. ಹಾಗಾದ್ರೆ ಕೊಹ್ಲಿಯ 2 ತಿಂಗಳ ಫ್ಯಾಮಿಲಿ ಲಂಡನ್ ಟ್ರಿಪ್ ಹೇಗಿತ್ತು ? ಇಲ್ಲಿದೆ ಆನ್ಸರ್​​​.

ವಿರಾಟ್ ಕೊಹ್ಲಿ ಕಲರ್​ಫುಲ್ ಟೂರ್ನಿಯಲ್ಲಿ ದಮ್ದಾರ್​​ ಆಟದ ಮೂಲಕ ಧೂಳೆಬ್ಬಿಸಿದ್ದಾರೆ. ಕಿಂಗ್ ಕೊಹ್ಲಿ ಕೊಟ್ಟ ಛಡಿ ಏಟಿಗೆ ಪಂಜಾಬ್​​ ಧೂಳಿಪಟವಾಯ್ತು. ವಿರಾಟ್ ಪರಾಕ್ರಮಕ್ಕೆ ಆರ್​ಸಿಬಿ ಫ್ಯಾನ್ಸ್ ಉಘೇ ಉಘೇ ಅಂತಿದ್ದಾರೆ. ಐಪಿಎಲ್​ನಲ್ಲಿ ವಿದ್ವಂಸಕಾರಿ ಬ್ಯಾಟಿಂಗ್ ನಡೆಸುತ್ತಿರುವ ಹೊತ್ತಲ್ಲೆ ಕೊಹ್ಲಿ ಎರಡು ತಿಂಗಳ ಲಂಡನ್​​​​​​​​ ಫ್ಯಾಮಿಲಿ ಟ್ರಿಪ್​​​ ಅನ್ನ ಮೆಲುಕು ಹಾಕಿದ್ದಾರೆ.

ಅಜ್ಞಾತ ವಾಸದ ನೆನಪಿನ ಬುತ್ತಿ ತೆರೆದಿಟ್ಟ ಕಿಂಗ್ ಕೊಹ್ಲಿ

ಕ್ರಿಕೆಟ್​​ನಷ್ಟೆ ಫ್ಯಾಮಿಲಿಗೆ ಪ್ರಾಶಸ್ತ್ಯ ನೀಡುವ ಕೊಹ್ಲಿ ಐಪಿಎಲ್​ಗೂ ಮುನ್ನ ಲಂಡನ್​ನಲ್ಲಿ ಬೀಡು ಬಿಟ್ಟಿದ್ರು. ಸುದೀರ್ಘ 2 ತಿಂಗಳು ಕಾಲ ಅಲ್ಲೆ ಮೊಕ್ಕಾಂ ಹೂಡಿದ್ರು. ಪತ್ನಿ ಅನುಷ್ಕಾ ಶರ್ಮಾ ಮಗ ಅಕಾಯ್​ಗೆ ಜನ್ಮ ನೀಡಿದ ಬಳಿಕವೇ ವಿರಾಟ್​​ ತವರಿಗೆ ವಾಪಾಸಾಗಿದ್ರು. ಇದೀಗ ಪರ್ಫೆಕ್ಟ್​ ಫ್ಯಾಮಿಲಿಮ್ಯಾನ್ ಕೊಹ್ಲಿ, ಲಂಡನ್​​​ನ ಅಜ್ಞಾತ ವಾಸದ ಸವಿನೆನಪಿನ ಬುತ್ತಿಯನ್ನ ತೆರೆದಿಟ್ಟಿದ್ದಾರೆ.

ನಾವು ಆ ಸಮಯದಲ್ಲಿ ಭಾರತದಲ್ಲಿ ಇರಲಿಲ್ಲ. ಜನರು ನಮ್ಮನ್ನು ಗುರುತಿಸದ ಸ್ಥಳದಲ್ಲಿದ್ದೆವು. ಎರಡು ತಿಂಗಳು ಒಂದು ಕುಟುಂಬವಾಗಿ ಒಟ್ಟಿಗೆ ಸಮಯ ಕಳೆದೆವು ಮತ್ತು ಸಾಮಾನ್ಯ ವ್ಯಕ್ತಿಯಂತೆ ಜೀವಿಸಿದೆವು. ವಿದೇಶದಲ್ಲಿ ಯಾರು ನನ್ನ ಗುರುತಿಸದಿದ್ದದ್ದು ನಿಜಕ್ಕೂ ಒಂದು ಅದ್ಭುತ ಅನುಭವ. ಎರಡು ಮಕ್ಕಳನ್ನ ಹೊಂದಿರುವಾಗ ಎಲ್ಲ ವಿಷಯಗಳು ಸಂಪೂರ್ಣ ವಿಭಿನ್ನವಾಗಿರುತ್ತವೆ. ಹಿರಿಯ ಮಗುವಿನೊಂದಿಗಿನ ಸಂವಹನ ನಿಜಕ್ಕೂ ಅದ್ಭುತ. ಕುಟುಂಬದೊಂದಿಗೆ ಸಮಯ ಕಳೆಯಲು ಸಿಕ್ಕ ಅವಕಾಶಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಕ್ರಿಕೆಟಿಗ.

ಕಂಪ್ಲೀಟ್​ ತನ್ನನ್ನೆ ತಾನು ಮರೆತ ವಿರಾಟ್ ಕೊಹ್ಲಿ

ಕಿಂಗ್ ಕೊಹ್ಲಿ ಎರಡು ತಿಂಗಳ ಅವಧಿಯಲ್ಲಿ ಫ್ಯಾಮಿಲಿ ಜೊತೆ ಕಂಪ್ಲೀಟ್ ಮುಳುಗಿ ಹೋಗಿದ್ರು. ಆ ಮೂಡ್​ನಿಂದ ಹೊರಬರಲು ವಿರಾಟ್​​ಗೆ ಕೆಲ ಸಮಯ ಬೇಕಾಯ್ತು. ಆ ಅದ್ಭುತ ಅನುಭವವನ್ನ ಕೊಹ್ಲಿ ಹಂಚಿಕೊಳ್ತಾರೆ ಕೇಳಿ.

ನಾನು ಸಹ ಆಟಗಾರರಿಗೆ ಹೇಳಿದೆ, ಎರಡು ತಿಂಗಳ ಸಮಯ ಎಲ್ಲೂ ನನ್ನ ಹೆಸರು ಕೇಳಲಿಲ್ಲ. ಭಾರತಕ್ಕೆ ಮರಳಿದಾಗ ನನ್ನ ಹೆಸರು ಹಿಂದಿನಕ್ಕಿಂತ ಜೋರಾಗಿ ಕೇಳಿದ ಅನುಭವ ಆಯ್ತು. ಸಮಯ ಕಳೆದಂತೆ ಸಹಜ ಸ್ಥಿತಿಗೆ ಮರಳಿದೆ. ನಿಜಕ್ಕೂ ಎರಡು ತಿಂಗಳ ಸಮಯ ಸುಂದರವಾಗಿತ್ತು. ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡುವುದು ಹಾಗೂ ಸಾಮಾನ್ಯರಂತೆ ಜೀವನ ನಡೆಸುವುದು ಅದ್ಭುತ ಅನುಭವ.
-ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಕ್ರಿಕೆಟಿಗ

ಪತ್ನಿಗೆ ವಿಡಿಯೋ ಕಾಲ್​​..ಮಗನ ಜೊತೆ ಮುದ್ದಾಟ..!

ಕಿಂಗ್ ಕೊಹ್ಲಿ ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಇದ್ದು, ಫ್ಯಾಮಿಲಿಯನ್ನ ತುಂಬಾನೇ ಮಿಸ್ ಮಾಡಿಕೊಳ್ತಿದ್ದಾರೆ. ಹೀಗಾಗಿ ಪಂಜಾಬ್​ ಕಿಂಗ್ಸ್ ಎದುರಿನ ಪಂದ್ಯ ಮುಗಿದಿದ್ದೆ ತಡ. ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಬಿಟ್ರು. ಆ ಕ್ಷಣ ಮುಗ್ಧ ಮಗುವಿನಂತಾದ್ರು. ಮಗ ಅಕಾಯ್​​ ಜೊತೆ ಮಾತನಾಡುತ್ತಾ ತನ್ನದೇ ಲೋಕದಲ್ಲಿ ಮುಳುಗಿ ಹೋದ್ರು.

ಇದನ್ನೂ ಓದಿ: ಊಟ ಕೇಳಿದ್ದೇ ತಪ್ಪಾ? ಅಜ್ಜಿ ಮೇಲೆ ಮನಬಂದಂತೆ ಥಳಿಸಿದ ಗಂಡ-ಹೆಂಡತಿ

ಕ್ರಿಕೆಟರ್ಸ್​ಗೆ ವೃತ್ತಿಪರತೆ ಎಷ್ಟು ಮುಖ್ಯನೋ, ಫ್ಯಾಮಿಲಿಯು ಅಷ್ಟೇ ಮುಖ್ಯ. ಕಿಂಗ್ ಕೊಹ್ಲಿ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿರೋದ್ರಿಂದಲೆ ಪರ್ಫೆಕ್ಟ್​ ಫ್ಯಾಮಿಲಿಮ್ಯಾನ್ ಅನ್ನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿ ಮತ್ತು ಮಗುವಿನ ಜೊತೆ ಲಂಡನ್​ ನೆನಪಿನ ಬುತ್ತಿ ತೆರೆದಿಟ್ಟ ಕೊಹ್ಲಿ.. ದೇವರಿಗೆ ಧನ್ಯವಾದ ಹೇಳಿದ್ದೇಕೆ ವಿರಾಟ್​​​​​​?

https://newsfirstlive.com/wp-content/uploads/2024/02/Virat-kohli-2.jpg

Load More