newsfirstkannada.com

ಊಟ ಕೇಳಿದ್ದೇ ತಪ್ಪಾ? ಅಜ್ಜಿ ಮೇಲೆ ಮನಬಂದಂತೆ ಥಳಿಸಿದ ಗಂಡ-ಹೆಂಡತಿ

Share :

Published March 28, 2024 at 9:10am

Update March 28, 2024 at 9:12am

    87 ವರ್ಷ ವಯಸ್ಸಿನ ಅಜ್ಜಿ ಮೇಲೆ ಮನಬಂದತೆ ಥಳಿಸಿದ ಗಂಡ-ಹೆಂಡತಿ

    ಪಕ್ಕದ ಮನೆಯವರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಇಬ್ಬರ ಕರಾಳ ಮುಖ

    ಅಜ್ಜಿ ಬೊಬ್ಬೆ ಹೊಡೆಯದಂತೆ ಬಾಯಿ ಮುಚ್ಚಿಸಿ ಕೋಲಿನಿಂದ ಹೊಡೆದ ಪತಿ ಮತ್ತು ಪತ್ನಿ

ಗಂಡ ಮತ್ತು ಹೆಂಡತಿ ಸೇರಿಕೊಂಡು 87 ವರ್ಷ ವಯಸ್ಸಿನ ಅಜ್ಜಿಗೆ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಬೋಫಾಲ್​ನಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ವೈರಲ್​ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ದೀಪಕ್​ ಸೇನ್​ ಮತ್ತು ಆತನ ಪತ್ನಿ ಪೂಜಾ ಸೇನ್​ ಅಜ್ಜಿಯೊಬ್ಬಳಿಗೆ ಚಿತ್ರಹಿಂಸೆ ನೀಡಿದ್ದಾರೆ. ಆಕೆಯ ಬಾಯಿ ಮುಚ್ಚಿ ಕೋಲಿನಿಂದ ಸರಿಯಾಗಿ ಥಳಿಸಿದ್ದಾರೆ. ಈ ದೃಶ್ಯವನ್ನು ಪಕ್ಕದ ಮನೆಯವರೊಬ್ಬರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಕದ್ದು ಸೆರೆಹಿಡಿದಿದ್ದಾರೆ.

ಅಂದಹಾಗೆಯೇ ದೀಪಕ್​ ಸೇನ್​ ಬೋಫಾಲ್​ನ ಬರ್ಖೇಡಿ ಪ್ರದೇಶದಲ್ಲಿ ಸಲೂನ್​ ನಡೆಸುತ್ತಿದ್ದಾರೆ. ಗಂಡ-ಹೆಂಡತಿ ಕೃತ್ಯ ಹೊರಬಿದ್ದಂತೆ ಮನೆಯಿಂದ ಝಾನ್ಸಿ ಕಡೆಗೆ ಓಡಿಹೋಗಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಮಾರ್ಗ ಮಧ್ಯೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.

ಅಜ್ಜಿ ಮೇಲೆ ಹಲ್ಲೆ ನಡೆಸಿದ್ಯಾಕೆ?

ಅಜ್ಜಿ ತಮ್ಮ ಮಕ್ಕಳೊಂದಿಗೆ ನಗರದ ಜಹಾಂಗೀರಾಬಾದ್​ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಜ್ಜಿ ತನ್ನ ಮಗ ಮತ್ತು ಸೊಸೆ ಬಳಿ ಆಗಾಗ ಆಹಾರ ಕೇಳುತ್ತಿದ್ದರು. ಇದರಿಂದ ಕೋಪಗೊಂಡು ಆಕೆಗೆ ಕೋಲಿನಿಂದ ಥಳಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇಂದು ಚಿನ್ನದ ಬೆಲೆ ಎಷ್ಟಿದೆ​? 1Kg ಬೆಳ್ಳಿ ರೇಟ್​ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಗಂಡ-ಹೆಂಡತಿ ಗದರಿದಾಗಲೆಲ್ಲಾ ಅಜ್ಜಿ ಜೋರು ಮಾಡುತ್ತಿದ್ದರು. ಇದರಿಂದ ಕೆರಳಿದ ದಂಪತಿ ಅಜ್ಜಿಯ ಬಾಯಿ ಮುಚ್ಚಿಸಿ ಸರಿಯಾಗಿ ಥಳಿಸಿದ್ದಾರೆ. ಸದ್ಯ ಈ ದೃಶ್ಯ ವೈರಲ್​ ಆಗಿದ್ದು, ತಪ್ಪಿತಸ್ಥ ಗಂಡ-ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟ ಕೇಳಿದ್ದೇ ತಪ್ಪಾ? ಅಜ್ಜಿ ಮೇಲೆ ಮನಬಂದಂತೆ ಥಳಿಸಿದ ಗಂಡ-ಹೆಂಡತಿ

https://newsfirstlive.com/wp-content/uploads/2024/03/grand-Mother.jpg

Load More