Advertisment

ಮಹಾಲಕ್ಷ್ಮಿಯನ್ನು ಪೀಸ್‌, ಪೀಸ್ ಮಾಡಿದ ಹಂತ*ಕ ಮೊಬೈಲ್‌ನ್ನು ಎಲ್ಲಿ ಇಟ್ಟು ಹೋಗಿದ್ದ ಗೊತ್ತಾ?

author-image
admin
Updated On
ಮಹಾಲಕ್ಷ್ಮಿಯನ್ನ ಪೀಸ್, ಪೀಸ್ ಮಾಡಿದ್ಯಾಕೆ? ಸೈಕೋ ಕಿಲ್ಲರ್ ಎಲ್ಲಿ ಅಡಗಿದ್ದ? ಇಂಚಿಂಚು ಮಾಹಿತಿ ಬಹಿರಂಗ!
Advertisment
  • ಹಂತಕ ಮಹಾಲಕ್ಷ್ಮಿಯನ್ನು ಮನೆಯಲ್ಲೇ ಕೊ*ಲೆ ಮಾಡಿ ಎಸ್ಕೇಪ್‌?
  • ಮಹಾಲಕ್ಷ್ಮಿಯನ್ನು ಪೀಸ್, ಪೀಸ್ ಮಾಡಿದ ಮೇಲೆ ಏನಾಯ್ತು?
  • ಪೊಲೀಸರ ತನಿಖೆಯಲ್ಲಿ ಮೈಜುಮ್ಮೆನ್ನಿಸುವ ಸತ್ಯಗಳು ಬಹಿರಂಗ

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಸಾವಿನ ಪ್ರಕರಣದ ತನಿಖೆ ಮುಂದುವರಿದಿದೆ. ಮಹಾಲಕ್ಷ್ಮಿಯನ್ನು ಪೀಸ್, ಪೀಸ್ ಮಾಡಿದ ಮಹಾಪಾಪಿ ಹೆದರಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಆದರೆ ಆ ಕ್ರೂರಿಯ ಕ್ರೈಂ ಡೈರಿಯ ಒಂದೊಂದು ಪುಟಗಳು ಮೈಜುಮ್ಮೆನ್ನಿಸುವಂತಿದೆ. ಪೊಲೀಸರ ತನಿಖೆಯಲ್ಲಿ ಮಹಾಲಕ್ಷ್ಮಿ ಸಾವಿನ ಪ್ರಕರಣದ ಕರಾಳ ಸತ್ಯಗಳು ಬಯಲಾಗುತ್ತಿದೆ.

Advertisment

ಮಹಾಲಕ್ಷ್ಮಿಯನ್ನು ನಿರ್ದಯವಾಗಿ ಹ*ತ್ಯೆ ಮಾಡಿದ ಕಿರಾತಕ ಬೆಂಗಳೂರು ಬಿಟ್ಟು ಹೋಗಿ ಎಷ್ಟೋ ದಿನಗಳು ಕಳೆದಿತ್ತು. ಮಹಾಲಕ್ಷ್ಮಿಯನ್ನು ಮುಚ್ಚಿಟ್ಟಿದ್ದ ಫ್ರಿಡ್ಜ್ ಬಾಗಿಲು ಓಪನ್ ಆದ ಮೇಲೆ ನರರಾಕ್ಷಸನ ರಕ್ತಚರಿತ್ರೆ ಬಯಲಾಗುತ್ತಿದೆ. ಮಹಾಲಕ್ಷ್ಮಿಯನ್ನು ಪೀಸ್, ಪೀಸ್ ಮಾಡಿ ಬೆಂಗಳೂರು ಬಿಟ್ಟು ಹೋಗಿದ್ದವನು ಮಾಡಿದ್ದೇನು? ಕೊ*ಲೆಯಾದ ಮೇಲೆ ಸೈಕೋ ಕಿಲ್ಲರ್ ಮಾಡಿದ್ದೇನು ಅನ್ನೋ ಇಂಚಿಂಚೂ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕೊಂ*ದು 1,405km ಸಂಚರಿಸಿದ.. ಸ್ಮಶಾನದ ಬಳಿಯೇ ನೇಣಿಗೆ ಶರಣಾದ ಕಿಲ್ಲ*ರ್ 

ಕೊ*ಲೆಗಾರನಿಗಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಶೋಧ ನಡೆಸುತ್ತಿದ್ದ ಬೆಂಗಳೂರು ಪೊಲೀಸರಿಗೆ ಕೊನೆಗೂ ಹಂತ*ಕನ ಸುಳಿವಲ್ಲ ಡೆಡ್‌ ಬಾಡಿಯೇ ಸಿಕ್ಕಿದೆ. ಈತನ ಸಾವಿನ ಬಳಿಕ ತನಿಖೆ ಮುಂದುವರಿದಿದ್ದು ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿದೆ.

Advertisment

publive-image

ಮಹಾಲಕ್ಷ್ಮಿ ಮೊಬೈಲ್ ಎಲ್ಲಿತ್ತು?
ಮಹಾಲಕ್ಷ್ಮಿಯನ್ನು ಹ*ತ್ಯೆ ಮಾಡಿದ ನಂತರ ಮುಕ್ತಿ ರಂಜನ್ ಸ್ವಲ್ಪವೂ ಅನುಮಾನ ಬಾರದಂತೆ ಪೀಸ್, ಪೀಸ್ ಮಾಡಿದ್ದಾನೆ. ಫ್ರಿಡ್ಜ್‌ನಲ್ಲಿ ಆ ಪೀಸ್, ಪೀಸ್ ಅನ್ನು ಸೇಫ್ ಆಗಿಟ್ಟು ಲಾಕ್ ಮಾಡಿದ್ದಾನೆ. ಇದರ ಜೊತೆಗೆ ಮಹಾಲಕ್ಷ್ಮಿ ಮೊಬೈಲ್ ಅನ್ನು ಅದೇ ಫ್ರಿಡ್ಜ್‌ನಲ್ಲೇ ಇಟ್ಟು ಎಸ್ಕೇಪ್ ಆಗಿದ್ದಾನೆ.

ಫ್ರಿಡ್ಜ್‌ನಿಂದ ಮೃತ ದೇಹದ ಬಿಡಿ, ಬಿಡಿ ಭಾಗಗಳನ್ನು ಹೊರ ತೆಗೆದ ಪೊಲೀಸರು ಮಹಾಲಕ್ಷ್ಮಿ ಮೊಬೈಲ್ ಫೋನ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಸಹ ಎಫ್.ಎಸ್.ಎಲ್‌ಗೆ ರವಾನೆ ಮಾಡಲಾಗಿದೆ. ಮಹಾಲಕ್ಷ್ಮಿಯ ಮೊಬೈಲ್ ರಿಟ್ರೀವ್ ಆದ ನಂತರ ಮತ್ತಷ್ಟು ಸ್ಪೋಟಕ ವಿಚಾರ ಹೊರಬೀಳುವ ಸಾಧ್ಯತೆ ಇದೆ. ಮಹಾಲಕ್ಷ್ಮಿ ಯಾರ್ ಯಾರ ಜೊತೆ ಹೆಚ್ಚು ಸಂಪರ್ಕದಲ್ಲಿದ್ದಳು. ಮಹಾಲಕ್ಷ್ಮಿಯನ್ನು ಮನೆಯಲ್ಲೇ ಕೊ*ಲೆ ಮಾಡಲಾಗಿತ್ತಾ? ಅಥವಾ ಹೊರಗೆ ಕೊ*ಲೆ ಮಾಡಿ ಬಂದು ಮನೆಯಲ್ಲಿ ಪೀಸ್, ಪೀಸ್ ಮಾಡಲಾಗಿತ್ತಾ ಅನ್ನೋ ಅನುಮಾನಕ್ಕೆ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment