Advertisment

ಪ್ರಜ್ವಲ್​ಗೆ ಜರ್ಮನಿಯಲ್ಲಿ ಸಹಾಯ ಮಾಡಿದ್ದು ಯಾರು ಗೊತ್ತಾ? ಮೊಬೈಲ್​ ವಶಕ್ಕೆ ಪಡೆದ ಮೇಲೆ ಏನಾಯ್ತು?

author-image
AS Harshith
Updated On
ಪ್ರಜ್ವಲ್​ಗೆ ಜರ್ಮನಿಯಲ್ಲಿ ಸಹಾಯ ಮಾಡಿದ್ದು ಯಾರು ಗೊತ್ತಾ? ಮೊಬೈಲ್​ ವಶಕ್ಕೆ ಪಡೆದ ಮೇಲೆ ಏನಾಯ್ತು?
Advertisment
  • ಪ್ರಜ್ವಲ್​ ರೇವಣ್ಣ ಮೊಬೈಲ್​ ವಶಕ್ಕೆ ಪಡೆದ ಎಸ್​ಐಟಿ ಅಧಿಕಾರಿಗಳು
  • ಪ್ರಜ್ವಲ್​ ಯಾರ ಜೊತೆಗೆ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ತನಿಖೆ
  • ಪ್ರಜ್ವಲ್​ಗೆ ಹಣಕಾಸಿನ ಸಹಾಯ ಮಾಡಿದವರು ಯಾರು ಗೊತ್ತಾ?

SIT ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅರೆಸ್ಟ್​ ಬೆನ್ನಲ್ಲೇ ಅವರು ಬಳಸುತ್ತಿರುವ ಮೊಬೈಲನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮೊಬೈಲನ್ನು ಎಫ್ ಎಸ್ ಎಲ್ ಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

Advertisment

ಪ್ರಜ್ವಲ್​ ರೇವಣ್ಣ ಬಳಸಿರುವ ಗೂಗಲ್ ಅಕೌಂಟ್ ಹಾಗೂ ಐ ಕ್ಲೌಡ್ ನಲ್ಲಿ ಏನಾದ್ರೂ ಸಿಗುತ್ತಾ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈಗ ಇರುವ ಮೊಬೈಲ್​ಗೂ ಹಳೆ ಇ-ಮೇಲ್ ಅಟ್ಯಾಚ್ ಮಾಡಿದ್ರೆ ಪೊಟೋ, ವಿಡಿಯೋ ಸೇವ್ ಆಗಿರುತ್ತೆ ಎಂಬ ಆಧಾರದ ಮೇಲೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರಕರಣ ದಾಖಲಾಗಿನಿಂದ ಇವರು ಯಾರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ​ ತನಿಖೆ ಹೇಗೆ ನಡೆಯಲಿದೆ? ಮದರ್​ ಡಿವೈಸ್ ಸಾಕ್ಷಿ ನಾಶ ಮಾಡಿದ್ರೆ ಏನಾಗುತ್ತೆ? 

ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ವಿಕ್ಟಿಮ್ ಗಳಿಗೆ ಬೆದರಿಕೆ ಹಾಕುವ ಅಥವಾ ಅವರಿಗೆ ಕರೆ ಮಾಡಿದ್ದಾರಾ? ಎಂಬ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಜರ್ಮನಿಯಲ್ಲಿ ಇವರಿಗೆ ಸಹಾಯ ಮಾಡಿದ್ದು ಯಾರು?. ಪ್ರಜ್ವಲ್ ರೇವಣ್ಣಗೆ ಹಣಕಾಸಿನ ಸಹಾಯ ಮಾಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗಾಗಿ ಈಗ ಇರುವ ಮೊಬೈಲ್ ವಶಕ್ಕೆ ಪಡೆದು ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ.

Advertisment

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಅವರ ಇಂದಿನ ರಾಶಿ ಭವಿಷ್ಯ ಹೇಗಿದೆ? 

ಪ್ರಜ್ವಲ್​ ರೇವಣ್ಣ ಅರೆಸ್ಟ್​ ಬಳಿಕ ಎಸ್​ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಬಹುಮುಖ್ಯವಾಗಿ ಮದರ್ ಡಿವೈಸ್ ಯಾರ ಬಳಿ ಇದೆ ಎಂಬ ತನಿಖೆ ನಡೆಯಲಿದೆ. ಯಾವ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ್ದೀರಾ?. ಆ ಮೊಬೈಲ್ ಎಲ್ಲಿದೆ ಅನ್ನೋದರ ಬಗ್ಗೆಯೂ ತನಿಖೆ ನಡೆಯಲಿದೆ. ಒಂದು ವೇಳೆ ಮದರ್ ಡಿವೈಸ್ ಡೆಸ್ಟ್ರಾಯ್ ಮಾಡಿದ್ರೆ ಪ್ರಜ್ವಲ್​ಗೆ ಸಂಕಷ್ಟ ಫಿಕ್ಸ್ ಆಗುವ ಸಾಧ್ಯತೆ ಇದೆ. ಸಾಕ್ಷಿ ನಾಶದ ಅಡಿ ಪ್ರಜ್ವಲ್ ವಿರುದ್ಧ ಕೇಸ್ ದಾಖಲಾಗುವ ಸಾಧ್ಯತೆ ಹೆಚ್ಚು ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment