newsfirstkannada.com

ನಾಳೆಯಿಂದ ಹೊಸ ಅಧ್ಯಾಯ.. ಜನಾರ್ದನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆ ಯಾಕೆ ಗೊತ್ತಾ?

Share :

Published March 24, 2024 at 5:57pm

Update March 24, 2024 at 5:58pm

  ಬಿಜೆಪಿ ಪಕ್ಷ ಬಿಟ್ಟ ಮೇಲೆ ಆಗಿರುವ ಎಲ್ಲಾ ಘಟನೆಗಳು ನನಗೆ ಗೊತ್ತಿದೆ

  ಬಿ.ಎಸ್ ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ನೀಡುತ್ತೇನೆ

  ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ - ಜನಾರ್ದನ ರೆಡ್ಡಿ

ಬೆಂಗಳೂರು: ಬಳ್ಳಾರಿ ಗಣಿಧಣಿ ಖ್ಯಾತಿಯ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ರಿಟರ್ನ್‌ ಆಗೋದು ಪಕ್ಕಾ ಆಗಿದೆ. ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಅಲ್ಲದೇ ನಾಳೆ ಬೆಳಗ್ಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ತಾಯಿ ಸಮನವಾದ ಪಕ್ಷಕ್ಕೆ ಮರಳಲು ಮನಸ್ಸು ಮಾಡಿದ್ದೇನೆ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ನಾನು ಚಿಕ್ಕ ವಯಸ್ಸಿನಿಂದ ನಂಟು ಹೊಂದಿದ್ದೇನೆ. ಎಲ್‌.ಕೆ ಅಡ್ವಾಣಿ ಅವರ ಜೊತೆ ರಥಯಾತ್ರೆಯಲ್ಲೂ ಭಾಗವಹಿಸಿದ್ದೆ. ಪಕ್ಷ ಬಿಟ್ಟ ಮೇಲೆ ಆಗಿರುವ ಎಲ್ಲಾ ಘಟನೆ ಗೊತ್ತಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರನಾಗಿ ಬಿಜೆಪಿಗೆ ಮರಳುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಲು ಜನಾರ್ದನ ರೆಡ್ಡಿಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​​.. ಇಂದು KRPP ಪಕ್ಷದ ಸಭೆ ಕರೆದ ಗಂಗಾವತಿ ಶಾಸಕ

ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಕೊಪ್ಪಳ ಜಿಲ್ಲೆಯ ನನ್ನ ಬೆಂಬಲಿಗರು ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದರು. ಇಂದು ಆ ಎಲ್ಲಾ ಕಾರ್ಯಕರ್ತರು, ಮುಖಂಡರ ಜೊತೆಗೆ ಚರ್ಚೆ ಮಾಡಿದ್ದೇನೆ. ಎಲ್ಲರೂ ಮುಕ್ತ ಕಂಠದಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲಲು ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ಕಾರ್ಯಕರ್ತರ ಅಭಿಪ್ರಾಯ ಮುಖ್ಯ ಹೀಗಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ನಾನು ಬಳ್ಳಾರಿಯಿಂದ ದೂರ ಉಳಿದಿದಕ್ಕೆ ಸಾಕಷ್ಟು ಚರ್ಚೆ ಆಯಿತು. ಬಿ.ಎಸ್ ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೇ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಬೇಧ ಭಾವ ಇರಲ್ಲ. ಎಲ್ಲರೂ ಒಟ್ಟಾಗಿ ಮೋದಿ ಪ್ರಧಾನಿ ಆಗಲು ಶ್ರಮ ಪಡುತ್ತೇನೆ. ಸತತ ಮೂರನೇ ಬಾರಿ ಮೋದಿ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಅಭಿಪ್ರಾಯ ಆಗಿದೆ. ಆ ವಿಚಾರದಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದೇನೆ. ಜನರು ಮೋದಿ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ರೆಡ್ಡಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆಯಿಂದ ಹೊಸ ಅಧ್ಯಾಯ.. ಜನಾರ್ದನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆ ಯಾಕೆ ಗೊತ್ತಾ?

https://newsfirstlive.com/wp-content/uploads/2024/03/Janardhan-Reddy-Bjp-Join.jpg

Load More