newsfirstkannada.com

ಬಿಜೆಪಿ ಸೇರಲು ಜನಾರ್ದನ ರೆಡ್ಡಿಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​​.. ಇಂದು KRPP ಪಕ್ಷದ ಸಭೆ ಕರೆದ ಗಂಗಾವತಿ ಶಾಸಕ

Share :

Published March 24, 2024 at 12:50pm

Update March 24, 2024 at 12:55pm

  ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷ ಪರ್ಯಟನೆ

  ಬಿಜೆಪಿ ಸೇರಲು ಜನಾರ್ದನ ರೆಡ್ಡಿಗೆ ಬಿಜೆಪಿಯಿಂದ ಗ್ರೀನ್​ ಸಿಗ್ನಲ್​

  ಇಂದು ಬೆಂಗಳೂರಿನಲ್ಲಿ KRPP ಪಕ್ಷದ ಸಭೆ ಕರೆದ ಗಾಲಿ ಜನಾರ್ದನ ರೆಡ್ಡಿ

ಬಳ್ಳಾರಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಅನೇಕ ನಾಯಕರು ಪಕ್ಷ ಪರ್ಯಟನೆ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ನಡುವೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಕೂಡ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರೋದಕ್ಕೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಳೆ ಗಾಲಿ ರೆಡ್ಡಿ ಬಿಜೆಪಿ ಸೆರ್ಪಡೆ ಬಹುತೇಕ ಫಿಕ್ಸ್ ಅನ್ನೋ ಮಾತುಗಳು ಕೇಳಿಬಂದಿವೆ. ಅತ್ತ ಜನಾರ್ದನ ರೆಡ್ಡಿ ಕೂಡ ಬಿಜೆಪಿಗೆ ಸೇರಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: VIDEO: ಯುವತಿಗೆ 8 ಬಾರಿ ಚಾಕುವಿನಿಂದ ಚುಚ್ಚಿದ ಯುವಕ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ?

ಜನಾರ್ದನ ರೆಡ್ಡಿ ಇತ್ತೀಚೆಗಷ್ಟೇ ದೆಹಲಿ ಭೇಟಿ ನೀಡಿದ್ದರು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನ ಮೀಟ್ ಮಾಡಿದ್ದರು. ಅಮಿತ್ ಶಾ ಭೇಟಿ ಬಳಿಕ ಒಂದಷ್ಟು ಮಾತುಕತೆಯಾಗಿ ರೆಡ್ಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗುತ್ತಿದೆ. ಬಳಿಕ ರಾಜ್ಯ ಬಿಜೆಪಿ ನಾಯಕರು ಹಾಗೂ ಶ್ರೀರಾಮುಲು ಜೊತೆ ರಹಸ್ಯ ಸಭೆ ನಡೆಸಿ ಸೆರ್ಪಡೆಗೆ ಸಮ್ಮತಿ ಸಿಕ್ಕಿದೆ ಎಂಬ ಮಾತುಗಳು ಕೇಳಿಬಂದಿವೆ.

ಇಂದು ಮಧ್ಯಾಹ್ನ ಮೀಟಿಂಗ್

ಇಂದು ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್​ನಲ್ಲಿ KRPP ಪಕ್ಷದ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 1:30 ಕ್ಕೆ ಸಭೆ ಕರೆದಿದ್ದು, ಸಭೆಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರ ಬೆಂಬಲರೊಂದಿಗೆ ರೆಡ್ಡಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಬಗ್ಗೆ ಸಭೆ ಕರೆಯಲಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ಬೆಂಬಲಿಸುವ ಬಗ್ಗೆ ಸಭೆ ನಡೆಸಲಿದ್ದಾರೆ. ಮುನಿಸು ಮರೆತು ಗೆಳೆಯ ಶ್ರೀರಾಮುಲುಗೆ ಬೆಂಬಲ ನೀಡಲು ರೆಡ್ಡಿ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಸೇರಲು ಜನಾರ್ದನ ರೆಡ್ಡಿಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​​.. ಇಂದು KRPP ಪಕ್ಷದ ಸಭೆ ಕರೆದ ಗಂಗಾವತಿ ಶಾಸಕ

https://newsfirstlive.com/wp-content/uploads/2024/03/janardhan-reddy.jpg

Load More