newsfirstkannada.com

VIDEO: ಯುವತಿಗೆ 8 ಬಾರಿ ಚಾಕುವಿನಿಂದ ಚುಚ್ಚಿದ ಯುವಕ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ?

Share :

Published March 24, 2024 at 11:58am

    ಹಾಡುಹಗಲೇ ಯುವತಿಯ ಮೇಲೆ ಚಾಕು ಇರಿದ ಯುವಕ

    ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಚಾಕು ಚುಚ್ಚಿದ ನಿರುದ್ಯೋಗಿ

    ನಿರುದ್ಯೋಗಿ ಕೋಪಕ್ಕೆ ಕಾರಣವಾದ ಯುವತಿ.. ಅಷ್ಟಕ್ಕೂ ಆಗಿದ್ದೇನು?

ಯುವಕನೋರ್ವ ಹಾಡುಹಗಲೇ ಯುವತಿ ಮೇಲೆ ಚಾಕು ಇರಿದ ಘಟನೆ ದೆಹಲಿಯ ಮುಖರ್ಜಿ ನಗರದಲ್ಲಿ ಬೆಳಕಿಗೆ ಬಂದಿದೆ. ನಡು ರಸ್ತೆಯಲ್ಲೇ ಸನಾ ಎಂಬಾಕೆ ಮೇಲೆ ದಾಳಿಗೆ ಮುಂದಾದ ಯುವಕ 7ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿದ್ದಾನೆ.

22 ವರ್ಷದ ಅಮನ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಸನಾಳನ್ನು ಅಟ್ಟಾಡಿಸಿಕೊಂಡು ಚಾಕುವಿನಿಂದ ದಾಳಿ ಮಾಡಿದ್ದಾನೆ. ಆತ ಚಾಕುವಿನಿಂದ ಚುಚ್ಚುತ್ತಿದ್ದಂತೆಯೇ ದಾರಿಹೋಕರು ಮಧ್ಯ ಪ್ರವೇಶಿಸಿ ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆತ ಅವರ ಮೇಲೂ ದಾಳಿ ಮಾಡಲು ಮುಂದಾಗಿದ್ದು, ಬಳಿಕ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಸನಾ ಮೇಲೆ ದಾಳಿ ಮಾಡಲು ಕಾರಣ?

ಆರೋಪಿ ಅಮನ್​ ನಿರುದ್ಯೋಗಿಯಾಗಿದ್ದು, ಸನಾ ಸರ್ಕಾರಿ ಪರೀಕ್ಷೆಗೆ ತಯಾರಿ ನಡೆಸಲು ಗ್ರಂಥಾಲಯಕ್ಕೆ ಹೋಗುತ್ತಿದ್ದಳು. ಈ ವೇಳೆ ಆತನನ್ನು ಕಂಡು ಕಾಮೆಂಟ್​ ಮಾಡಿದ್ದಾಳೆ. ಇದಕ್ಕೆ ಕೋಪಗೊಂಡ ಅಮನ್​ ಆಕೆಯ ಜೊತೆಗೆ ಜಗಳಿಕ್ಕಿಳಿದ್ದಿದ್ದಾನೆ. ಬಳಿಕ ಇಬ್ಬರ ಜಗಳ ವಿಕೋಪಕ್ಕೆ ತಿರುಗಿದೆ. ಅಲ್ಲೇ ತರಕಾರಿ ಅಂಗಡಿಯಲ್ಲಿದ್ದ ಚಾಕು ತೆಗೆದುಕೊಂಡು ಆಕೆಗೆ ಚುಚ್ಚಿದ್ದಾನೆ. ಸುಮಾರು 8 ಬಾರಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ.

ಇದನ್ನೂ ಓದಿ: ನಾನು ಎಸ್​ಪಿ.. 30 ಗ್ರಾಂ ಚಿನ್ನ, 2 ಸಾವಿರ ರೂಪಾಯಿ ಪಡೆದು ವಂಚಿಸಿದ ಮಹಿಳೆ; ನಕಲಿ ನಿವೇದಿತಾಳ ಮುಖವಾಡ ಬಯಲು

ಇನ್ನು ಘಟನೆಯಲ್ಲಿ ಯುವತಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಯುವಕ ಚಾಕು ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯುವತಿಗೆ 8 ಬಾರಿ ಚಾಕುವಿನಿಂದ ಚುಚ್ಚಿದ ಯುವಕ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ?

https://newsfirstlive.com/wp-content/uploads/2023/07/Crime-News_1.jpg

Load More