newsfirstkannada.com

ವೈದ್ಯರ ಮಹಾ ಯಡವಟ್ಟು.. ಕೈಬೆರಳಿಗೆ ಆಪರೇಷನ್ ಮಾಡಬೇಕಿದ್ದ ಬಾಲಕಿಯ ನಾಲಿಗೆಗೆ ಕತ್ತರಿ..!

Share :

Published May 17, 2024 at 10:58am

  ಆಸ್ಪತ್ರೆಯ ಯಡವಟ್ಟಿಗೆ ರೊಚ್ಚಿಗೆದ್ದ ಬಾಲಕಿಯ ಪೋಷಕರು

  ಭಾರೀ ವಿವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ

  ವೈದ್ಯರು ಕರ್ತವ್ಯದಿಂದ ಅಮಾನತು, ಆಸ್ಪತ್ರೆ ವಿರುದ್ಧ ತನಿಖೆ

ಕೇರಳದ ಕೋಝಿಕೊಡೆ ಮೆಡಿಕಲ್ ಕಾಲೇಜು ವೈದ್ಯರು ದೊಡ್ಡ ಯಡವಟ್ಟು ಮಾಡಿದ್ದು, ಮಗುವಿನ ಕೈಬೆರಳು ಆಪರೇಷನ್ ಮಾಡುವ ಬದಲಾಗಿ ನಾಲಿಗೆ ಮಾಡಿದ್ದಾರೆ. ಇದು ದೊಡ್ಡ ವಿವಾದ ಆಗುತ್ತಿದ್ದಂತೆಯೇ ವೈದ್ಯರನ್ನು ಅಮಾನತು ಮಾಡಲಾಗಿದೆ.

ಬಾಲಕಿ ಹುಟ್ಟಿದಾಗ ಒಂದು ಕೈಯಲ್ಲಿ 6 ಬೆರಳುಗಳು ಇದ್ದವು. ಒಂದು ಬೆರಳನ್ನು ರಿಮೂವ್ ಮಾಡಲು ಆಸ್ಪತ್ರೆಗೆ ದಾಖಲಾಗಿದ್ದಳು. ಆಪರೇಷನ್​ಗೆ ಕರೆದುಕೊಂಡು ಹೋದ ಆಸ್ಪತ್ರೆ ಸಿಬ್ಬಂದಿ ನಾಲಿಗೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮಗಳು ಆಪರೇಷನ್ ಥಿಯೇಟರ್​ನಿಂದ ಹೊರ ಬರುತ್ತಿದ್ದಂತೆಯೇ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ:ಪ್ಲೇ ಆಫ್​ಗೆ ಎಂಟ್ರಿಕೊಟ್ಟ SRH; ಸಿಎಸ್​​ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಮಾತ್ರ ಆರ್​ಸಿಬಿಗೆ ಚಾನ್ಸ್​..!

ಆಕ್ರೋಶಗೊಂಡಿರುವ ಪೋಷಕರು ವೈದ್ಯರನ್ನು ಪ್ರಶ್ನೆ ಮಾಡಿದ್ದಾರೆ. ಬಾಯಿ ಒಳಗೆ cyst ಪತ್ತೆಯಾಗಿತ್ತು. ಹೀಗಾಗಿ ನಾಲಿಗೆಗೆ ಆಪರೇಷನ್ ಮಾಡಿದ್ದೇವೆ ಎಂದಿದ್ದಾರೆ. ಆದರೆ ಪೋಷಕರು ವೈದ್ಯರ ಮಾತನ್ನು ನಂಬಿಲ್ಲ. ವೈದ್ಯರು ಬಾಲಕಿಯ ನಾಲಿಗೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಪೋಷಕರು ನಿಮಗೆ ನಾಚಿಕೆ ಆಗಬೇಕು ಎಂದು ಜರಿದಿದ್ದಾರೆ.

ಇದನ್ನೂ ಓದಿ:ಟಿಕೆಟ್ ತೋರಿಸಿ ಎಂದಿದ್ಕೆ ಚಾಕು ಹಾಕೇ ಬಿಟ್ಟ.. ಚಾಲುಕ್ಯ ರೈಲಿನಲ್ಲಿ ನಡೀತು ಬರ್ಬರ ಕೊಲೆ

ನಂತರ ಒಂದೇ ದಿನ ಇಬ್ಬರು ಮಕ್ಕಳಿಗೆ ಬೇರೆ ಬೇರೆ ಶಸ್ತ್ರ ಚಿಕಿತ್ಸೆ ಇದ್ದಿದ್ದರಿಂದ ತಪ್ಪಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕೇರಳದಲ್ಲಿ ದೊಡ್ಡ ಸುದ್ದಿಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ, ವೈದ್ಯರನ್ನು ಅಮಾನತು ಮಾಡಿದೆ. ಡಾ. ಬಿಜೊನ್ ಜಾನ್ಸನ್ ಅವರನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್​ ಅಮಾನತು ಮಾಡಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ 10 ಬಾರಿ ಮುಖಾಮುಖಿ.. ಆರ್​ಸಿಬಿ ಅಭಿಮಾನಿಗಳಿಗೆ ಇಲ್ಲಿದೆ ಆತಂಕದ ವಿಚಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈದ್ಯರ ಮಹಾ ಯಡವಟ್ಟು.. ಕೈಬೆರಳಿಗೆ ಆಪರೇಷನ್ ಮಾಡಬೇಕಿದ್ದ ಬಾಲಕಿಯ ನಾಲಿಗೆಗೆ ಕತ್ತರಿ..!

https://newsfirstlive.com/wp-content/uploads/2024/05/DOCTOR.jpg

Load More