newsfirstkannada.com

ಬೆಳಗಾವಿಯಲ್ಲಿ TCಗೆ ಚಾಕು ಇರಿತ.. ಚಲಿಸುತ್ತಿದ್ದ ಟ್ರೈನ್​​ನಲ್ಲಿ ಅಟೆಂಡರ್​ನ ಬರ್ಬರ ಕೊಲೆ..

Share :

Published May 17, 2024 at 6:47am

Update May 17, 2024 at 8:08am

    ಚಾಲುಕ್ಯ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದೊಬ್ಬ ಆಗಂತುಕ

    ಚಲಿಸುತ್ತಿದ್ದ ರೈಲಿನಲ್ಲಿ ಲೈವ್ ಮರ್ಡರ್ ಕಂಡು ಪ್ರಯಾಣಿಕರು ಶಾಕ್

    ಗಾಯಳುಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ರೈಲ್ವೇ ನಿಲ್ದಾಣ ಹಾಗೂ ರೈಲುಗಳಲ್ಲಿ ನಿರಂತರವಾಗಿ ರೈಲ್ವೆ ಪೊಲೀಸರು ಗಸ್ತು ತಿರುಗುತ್ತಲೇ‌ ಇರ್ತಾರೆ. ಆದರೂ ಸಹ ಕೆಲವೊಂದು ಬಾರಿ ರೈಲುಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ದುರ್ಘಟನೆಗಳು ನಡೆಯುತ್ತಲೇ ಇರುತ್ತವೆ. ಸದ್ಯ ಚಲಿಸುತ್ತಿದ್ದ ಚಾಲುಕ್ಯ ಟ್ರೈನ್​ನಲ್ಲಿಯೇ ಒಂದು ಹತ್ಯೆ ಆಗಿದೆ.

ಪಾಂಡಿಚೇರಿಯಿಂದ ಮುಂಬೈಗೆ ಹೊರಟಿದ್ದ ರೈಲು ನಿನ್ನೆ ಸಂಜೆ 4 ಗಂಟೆಗೆ ಲೋಂಡಾ ನಿಲ್ದಾಣ ತಲುಪಿತ್ತು. ಅಲ್ಲಿಯವರೆಗೆ ಶಾಂತವಾಗಿಯೇ ಇದ್ದ ರೈಲಿನ ಎಸ್ 08 ಭೋಗಿಯಲ್ಲಿ ಮುಸುಕುದಾರಿಯೊಬ್ಬ ರೈಲು ಹತ್ತಿದ್ದ. ಎಂದಿನಂತೆ ಕರ್ತವ್ಯದ ಮೇಲಿದ್ದ ಆಶ್ರಪ್ ಅಲಿ ಕಿತ್ತೂರು ತಮ್ಮ ಟಿಕೆಟ್ ಕಲೆಕ್ಟಿಂಗ್ ಡ್ಯೂಟಿ ಪ್ರಾರಂಭ ಮಾಡಿದ್ರು. ಎಲ್ಲರ ಟಿಕೆಟ್ ಪರಿಶೀಲನೆ ನಡೆಸುತ್ತ ಮುಸುಕುದಾರಿಯತ್ತ ಟಿಕೆಟ್ ‌ಕಲೆಕ್ಟರ್ ಅಶ್ರಫ್ ಅಲಿ ಬರ್ತಿದ್ದಂತೆ ಮುಸುಕುದಾರಿಯನ್ನು ಟಿಕೆಟ್ ಎಲ್ಲಿ ಅಂತ ಕೇಳಿದ್ರಂತೆ. ಈ ವೇಳೆ ಮುಸುಕುದಾರಿ ಟಿಕೆಟ್ ಕಲೆಕ್ಟರ್ ಮೇಲೆ ಏಕಾಏಕಿ ಹಲ್ಲೆ ಮಾಡೋಕೆ ಶುರು ಮಾಡಿದ್ದಾನೆ. ಇದನ್ನು ತಡೆಯಲು ಹೋದ ರೈಲು ಅಟೆಂಡರ್ ದೇವಋಷಿ ವರ್ಮಾ ಎಂಬ ಯುವಕನ ಮೇಲೂ ಮುಸುಕುದಾರಿ ಹಲ್ಲೆ ಮಾಡಿದ ಪರಿಣಾಮ ಆತ ತೀವ್ರ ಹಲ್ಲೆಗೊಳಗಾಗಿ ರೈಲಿನ ಭೋಗಿಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?

ಘಟನೆ ನಡೆಯುತ್ತಿದ್ದಂತೆ ರೈಲಿನಲ್ಲಿಯೇ ಬೆಳಗಾವಿಯವರೆಗೂ ಬಂದ ಗಾಯಾಳುಗಳನ್ನು ಬೆಳಗಾವಿ ‌ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಚಲಿಸುತ್ತಿದ್ದ ರೈಲಿನಲ್ಲಿಯೇ ಟಿಕೆಟ್ ಕಲೆಕ್ಟರ್ ಹಾಗೂ ಅಟೆಂಡರ್​ಗಳ ಮೇಲೆ ನಡೆದ ಹಲ್ಲೆಯಿಂದ ರೈಲು ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ರೈಲುಗಳಲ್ಲಿ ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದರೂ ಈ ಘಟನೆ ನಡೆದಿದ್ದು ಪೊಲೀಸರ ಕಾರ್ಯವೈಖರಿ ಪ್ರಶ್ನಿಸುವಂತೆ ಮಾಡಿದೆ. ಆಸ್ಪತ್ರೆಗೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೆ ಟಿಕೆಟ್ ಕಲೆಕ್ಟರ್ ಆಶ್ರಫ್ ಕಿತ್ತೂರರಿಂದ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ:ಸಖತ್ ಹೀಟ್ ಆಗಿದೆ ರಿವೇಂಜ್ ಕಾವು.. ಬದಲಾಗಿದೆ RCB ನಸೀಬು.. ನೀವು ಅಂದ್ಕೊಂಡಂತೆ ಇಲ್ಲವೇ ಇಲ್ಲ..!

ಮೃತ ಅಟೆಂಡರ್
ಮೃತ ಅಟೆಂಡರ್

ಒಟ್ಟಿನಲ್ಲಿ ಚಲಿಸುತ್ತಿದ್ದ ರೈಲಿನಲ್ಕಿ ಡ್ಯೂಟಿ ಮೇಲಿದ್ದ ರೈಲು ಸಿಬ್ಬಂದಿಯ ಮೇಲೆ ಹಲ್ಲೆಯಾಗಿರೋದು ನಿಜಕ್ಕೂ ದುರ್ದೈವ ಸಂಗತಿ. ಚಲಿಸುತ್ತಿದ್ದ ರೈಲಿನಲ್ಲಿಯೇ ಹಲ್ಲೆ ಮಾಡಿ ಅಲ್ಲಿಂದಲೇ ಆರೋಪಿ ಪರಾರಿಯಾಗಿದ್ದು ಇಂತಹ ಘಟನೆಗಳನ್ನು ತಡೆಯಲು ರೈಲ್ವೆ ಪೊಲೀಸರು ಮತ್ತು ರೈಲ್ವೆ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ‌ ನಿಯಮಗಳನ್ನು ಜಾರಿಗೆ ತರಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳಗಾವಿಯಲ್ಲಿ TCಗೆ ಚಾಕು ಇರಿತ.. ಚಲಿಸುತ್ತಿದ್ದ ಟ್ರೈನ್​​ನಲ್ಲಿ ಅಟೆಂಡರ್​ನ ಬರ್ಬರ ಕೊಲೆ..

https://newsfirstlive.com/wp-content/uploads/2024/05/BGM-CHAAKU-2.jpg

Load More