newsfirstkannada.com

×

ಏಪ್ರಿಲ್‌ 26 ಚುನಾವಣೆ; ಮತದಾನದ ದಿನ ಯಾರಿಗೆಲ್ಲಾ ಕಡ್ಡಾಯ ರಜೆ ಇದೆ? ತಪ್ಪದೇ ಸ್ಟೋರಿ ಓದಿ!

Share :

Published April 24, 2024 at 8:11pm

    14 ಲೋಕಸಭಾ ಕ್ಷೇತ್ರಗಳಲ್ಲೂ ಸರ್ಕಾರಿ ಕಚೇರಿಗೆ ಕಡ್ಡಾಯ ರಜೆ

    ಬೆಂಗಳೂರು ನಗರದಲ್ಲಿ ಖಾಸಗಿ ಕಂಪನಿಗಳು ರಜೆ ಇರುತ್ತಾ? ಇಲ್ವಾ?

    ಈ ಬಾರಿ ಹೆಚ್ಚು, ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಮನವಿ

ಬೆಂಗಳೂರು: ವಿಶ್ವದ ಅತಿದೊಡ್ಡ ಎಲೆಕ್ಷನ್ ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಏಪ್ರಿಲ್ 26ರಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

2ನೇ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ. ಹೆಚ್ಚು, ಹೆಚ್ಚು ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಲು ಮನವಿ ಮಾಡಿಕೊಳ್ಳಲಾಗುತ್ತಿದೆ. ಏಪ್ರಿಲ್‌ 26ರಂದು ಅಂದ್ರೆ ಇದೇ ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ.

ಇದನ್ನೂ ಓದಿ: ವೋಟ್​ ಮಾಡಿ ಬಂದವರಿಗೆ ಈ ಹೋಟೆಲ್​ಗಳಲ್ಲಿ ಫ್ರೀ ಊಟ; ಹೈಕೋರ್ಟ್​​ ಗ್ರೀನ್​ ಸಿಗ್ನಲ್​

ಏಪ್ರಿಲ್ 26ರಂದು 14 ಲೋಕಸಭಾ ವ್ಯಾಪ್ತಿಯಲ್ಲೂ ಸರ್ಕಾರಿ ಕಚೇರಿಗೆ ಕಡ್ಡಾಯ ರಜೆ ಇರಲಿದೆ. ಖಾಸಗಿ ಕಂಪನಿಗಳು ರಜೆ ನೀಡಿ ಮತದಾನದ ಪ್ರಮಾಣ ಹೆಚ್ಚಿಸುವಂತೆ ಚುನಾವಣಾ ಆಯೋಗ ಹೇಳಿದೆ. ಬೆಂಗಳೂರು ನಗರದಲ್ಲಿ ಜಿಲ್ಲಾಧಿಕಾರಿಗಳು ಕಡ್ಡಾಯ ರಜೆ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಐಟಿ, ಬಿಟಿ ಕಂಪನಿಗಳು ಮತದಾರರಿಗೆ ಏಪ್ರಿಲ್ 26ರಂದು ರಜೆ ನೀಡಬೇಕಾಗಿದೆ. ಪ್ರತಿ ಬಾರಿಯೂ ಬೆಂಗಳೂರು ನಗರದಲ್ಲಿ ಕಡಿಮೆ ಪ್ರಮಾಣದ ಮತದಾನ ಆಗುತ್ತದೆ. ಹೀಗಾಗಿ ಈ ಬಾರಿ ಹೆಚ್ಚು, ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಮನವಿ ಮಾಡಲಾಗಿದೆ.

ಸರ್ಕಾರಿ ನೌಕರರಿಂದ ನೀರಸ ಪ್ರತಿಕ್ರಿಯೆ
ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಸರ್ಕಾರಿ ನೌಕರರು ಭಾಗಿಯಾಗುತ್ತಾರೆ. ತಮ್ಮ, ತಮ್ಮ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಚುನಾವಣಾ ಕಾರ್ಯ ನಿರ್ವಹಿಸುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಮೂರು ದಿನ ಅಂಚೆ ಮತದಾನಕ್ಕೆ ಅವಕಾಶ ಇದ್ದರೂ ಸರ್ಕಾರಿ ನೌಕರರಿಂದಲೇ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಕೇವಲ 31% ರಷ್ಟು ಮಾತ್ರ ಮತದಾನ ಆಗಿದೆ.

ಚುನಾವಣಾ ಕರ್ತವ್ಯ, ಅಗತ್ಯ ಸೇವೆಯಲ್ಲಿ ಕೆಲಸ ನಿರ್ವಹಿಸುತ್ತಿರೋ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಅಂಚೆ ಮತದಾನಕ್ಕೆ ವಿವಿಧ ಇಲಾಖೆಯಿಂದ 1342 ಸಿಬ್ಬಂದಿ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ ಕೇವಲ 426 ಮಂದಿಯಿಂದ ಮಾತ್ರ ಅಂಚೆ ಮತದಾನ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲೇ 916 ಮಂದಿ ಸರ್ಕಾರಿ ನೌಕರರು ಹಕ್ಕು ಚಲಾಯಿಸದೇ ನಿರ್ಲಕ್ಷ್ಯ ತೋರಿದ್ದಾರೆ.

ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?

  • ಬೆಂಗಳೂರು ಕೇಂದ್ರ
  • ಬೆಂಗಳೂರು ಉತ್ತರ
  • ಬೆಂಗಳೂರು ದಕ್ಷಿಣ
  • ಬೆಂಗಳೂರು ಗ್ರಾಮಾಂತರ
  • ಚಿಕ್ಕಬಳ್ಳಾಪುರ
  • ಕೋಲಾರ
  • ಹಾಸನ
  • ದಕ್ಷಿಣ ಕನ್ನಡ
  • ಚಿತ್ರದುರ್ಗ
  • ತುಮಕೂರು
  • ಮಂಡ್ಯ
  • ಮೈಸೂರು
  • ಚಾಮರಾಜನಗರ
  • ಉಡುಪಿ ಚಿಕ್ಕಮಗಳೂರು

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಪ್ರಿಲ್‌ 26 ಚುನಾವಣೆ; ಮತದಾನದ ದಿನ ಯಾರಿಗೆಲ್ಲಾ ಕಡ್ಡಾಯ ರಜೆ ಇದೆ? ತಪ್ಪದೇ ಸ್ಟೋರಿ ಓದಿ!

https://newsfirstlive.com/wp-content/uploads/2024/03/VOTING-2.jpg

Load More