newsfirstkannada.com

ನಾಯಿ ಮಲವಿಸರ್ಜನೆ ಮಾಡಿದ್ದಕ್ಕೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಪೈಲಟ್​!

Share :

Published April 11, 2024 at 8:30pm

Update April 11, 2024 at 8:31pm

  ವಿಮಾನ ಪ್ರಯಾಣದ ವೇಳೆ ಮಲವಿಸರ್ಜನೆ ಮಾಡಿದ ಶ್ವಾನ

  ಶ್ವಾನ ಮಲವಿಸರ್ಜನೆ ಮಾಡಿತೆಂದು ತುರ್ತು ಭೂಸ್ಪರ್ಶ ಮಾಡಿದ ಪೈಲಟ್​

  ಫಸ್ಟ್​ ಕ್ಲಾಸ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಯಿಗಾಗಿ ತುರ್ತು ಭೂಸ್ಪರ್ಶ

ವಿಮಾನದಲ್ಲಿ ಎನಾದರೂ ದೊಡ್ಡ ಸಮಸ್ಯೆ ಕಂಡಾಗ ತುರ್ತು ಭೂಸ್ಪರ್ಶ ಮಾಡುತ್ತಾರೆ. ಪ್ರಯಾಣಿಕರ ಜೀವಕ್ಕೆ ತೊಂದರೆ ಆಗಬಾರದು ಎಂದು ಹತ್ತಿರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್​ ಮಾಡುತ್ತಾರೆ. ಆದರೆ ನಾಯಿಯೊಂದು ವಿಮಾನದಲ್ಲಿ ಮಲ ವಿಸರ್ಜನೆ ಮಾಡಿದೆ ಎಂದು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಯುನೈಟೆಡ್​ ಏರ್​ಲೈನ್ಸ್​ನಲ್ಲಿ ಈ ಘಟನೆ ನಡೆದಿದೆ. ವಿಮಾನವು ಹೂಸ್ಟನ್​ನಿಂದ ಸಿಯಾಟಲ್​ಗೆ ಪ್ರಯಾಣ ಬೆಳೆಸುತ್ತಿತ್ತು. ಆದರೆ ಇದೇ ವಿಮಾನದಲ್ಲಿದ್ದ ನಾಯಿಯೊಂದು ಮಲವಿಸರ್ಜನೆ ಮಾಡಿದೆ ಎಂಬ ಕಾರಣಕ್ಕೆ ತುರ್ತು ಭೂಸ್ಪರ್ಶ ಮಾಡಲಾಗಿದೆ.

ವಿಮಾನ ತುರ್ತು ಲ್ಯಾಂಡ್​ ಮಾಡಿರೋ ಬಗ್ಗೆ ಪ್ರಯಾಣಿಕ ಗಿಗ್​ ವಿಜಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಅದರಲ್ಲಿ ನಾಯಿಯೊಂದು ಪ್ರಥಮ ದರ್ಜೆಯ ವಿಮಾನದಲ್ಲಿ ಮಲ ವಿಸರ್ಜನೆ ಮಾಡುತ್ತದೆ. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿಗಳು ಎರಡು ಗಂಟೆಗಳ ಕಾಲ ಕಾಗದ, ಟವೆಲ್​ ಬಳಸಿ ಕಾರ್ಪೆಟ್​ ಸ್ವಚ್ಛಗೊಳಿಸಿದರು.. ಆದರೂ ಸಹ ವಾಸನೆ ಹೋಗಲಿಲ್ಲ. ಕೆಲ ಪ್ರಯಾಣಿಕರು ವಾಸನೆಯಿಂದ ಕಿರುಚಾಡುತ್ತಿದ್ದರು. ಕೊನೆಗೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅತ್ಯಂತ ಐಷಾರಾಮಿ ಕಾರು ಖರೀದಿಸಿದ ಖ್ಯಾತ ಸಿಂಗರ್​; ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಇನ್ನು ಈ ಘಟನೆ ಬಗ್ಗೆ ಓದಿದ ಅನೇಕರು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಕೆಲವರು ಶ್ವಾನವನ್ನು ವಿಮಾನದಲ್ಲಿ ಕರೆದೊಯ್ಯಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಿ ಮಲವಿಸರ್ಜನೆ ಮಾಡಿದ್ದಕ್ಕೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಪೈಲಟ್​!

https://newsfirstlive.com/wp-content/uploads/2024/04/Dog.jpg

Load More