2ನೇ ಪತ್ನಿ, ಮಕ್ಕಳಿಗೆ ₹100 ಕೋಟಿ.. ಮುತ್ತಪ್ಪ ರೈ ಮನೆ, ಜಮೀನು, ಆಸ್ತಿ ಹಂಚಿಕೆ; ಯಾರಿಗೆ ಎಷ್ಟು ಕೋಟಿ?

author-image
admin
Updated On
ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ; ಮಾಜಿ ಡಾನ್ ಎರಡನೇ ಪತ್ನಿಗೆ ಬಂದ ಆಸ್ತಿ ಎಷ್ಟು?
Advertisment
  • ಮುತ್ತಪ್ಪ ರೈ ಮಕ್ಕಳು, ಎರಡನೇ ಪತ್ನಿ ನಡುವೆ ಆಸ್ತಿಗಾಗಿ ಮನಸ್ತಾಪ
  • ತಮ್ಮ ಆಸ್ತಿ ಹಂಚಿಕೆ ಸಂಬಂಧ ವಿಲ್‌ ಮಾಡಿದ್ದ ಡಾನ್ ಮುತ್ತಪ್ಪ ರೈ
  • ಕೊನೆಗೆ ಮುತ್ತಪ್ಪ ರೈ ಆಸ್ತಿಯಲ್ಲಿ ಯಾಱರಿಗೆ ಎಷ್ಟು ಪಾಲು ಸಿಕ್ಕಿದೆ

ಬೆಂಗಳೂರು: ಮಾಜಿ ಡಾನ್‌ ಮುತ್ತಪ್ಪ ರೈ ವೃತ್ತಾಂತಗಳು ಯಾರಿಗೆ ಗೊತ್ತಿಲ್ಲ ಹೇಳಿ. ಹಲವು ವಿಚಾರಗಳಿಗೆ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಿದ್ದು ನಿಜ. ಆದ್ರೆ, ಅವರ ನಿಧನದ ನಂತರ ಹೆಚ್ಚು ಸದ್ದು ಮಾಡಿದ್ದು, ಅವರ ಆಸ್ತಿ ಹಂಚಿಕೆ ವಿವಾದ. ಈಗ ಬಂದಿರೋ ಹೊಸ ವಿಚಾರ ಏನಂದ್ರೆ ಕುಟುಂಬ ಸದಸ್ಯರು ಈ ಆಸ್ತಿ ಜಗ್ಗಾಟವನ್ನ ಬಗೆಹರಿಸಿಕೊಂಡಿದ್ದಾರೆ. ಆಶ್ಚರ್ಯ ಅಂದ್ರೆ, ಮುತ್ತಪ್ಪ ರೈ ಎರಡನೇ ಪತ್ನಿಗೆ 100 ಕೋಟಿಗೂ ಅಧಿಕ ಆಸ್ತಿ ಹಂಚಿಕೆ ಆಗಿದೆಯಂತೆ. ಹಾಗಾದ್ರೆ, ಒಟ್ಟಾರೆ ಆಸ್ತಿಯಲ್ಲಿ ಯಾಱರಿಗೆ ಎಷ್ಟು ಪಾಲು ಸಿಕ್ಕಿದೆ ಅನ್ನೋ ಡೀಟೈಲ್ಸ್ ಇಲ್ಲಿದೆ ನೋಡಿ.

ಮುತ್ತಪ್ಪ ರೈ ಅಗಲಿ ನಾಲ್ಕು ವರ್ಷಗಳು ಕಳೆದಿವೆ. ಅವರು ಸಾವನ್ನಪ್ಪೋ ಮುನ್ನ, ತಮ್ಮ ಇಡೀ ಲೈಫ್‌ ಜರ್ನಿಯನ್ನ ಇಡೀ ಕರ್ನಾಟಕದ ಮುಂದೆ ತೆರೆದಿಟ್ಟಿದ್ದರು. ದಿಟ್ಟತನದಿಂದ ಮಾತನಾಡಿದ್ದ ಮುತ್ತಪ್ಪ ರೈ, ಈ ಜೀವ ಜನರಿಗಾಗಿ ಮುಡಿಪು ಅಂತಾ ಘೋಷಿಸಿದ್ದರು.

ಇದನ್ನೂ ಓದಿ: ಕಾಲೇಜು 3ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ.. ಪ್ರೇಮಾ ಸಾವಿನ ರಹಸ್ಯ ಬಯಲು; ಅಸಲಿಗೆ ಆಗಿದ್ದೇನು? 

ಮುತ್ತಪ್ಪ ರೈ ಸಾವನ್ನಪ್ಪೋ ಮುನ್ನವೇ ಅವರ ಮೊದಲ ಪತ್ನಿ ರೇಖಾ ರೈ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಮುತ್ತಪ್ಪ ರೈ, ಅನುರಾಧ ರೈ ಎಂಬುವರನ್ನ ವರಿಸಿದ್ದರು. ಈ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಅವರೇ ಅನೌನ್ಸ್ ಮಾಡಿಕೊಂಡಿದ್ದರು. ಆದ್ರೆ, ಯಾವಾಗ ಮುತ್ತಪ್ಪ ರೈ ಸಾವನ್ನಪ್ಪುತ್ತಾರೋ, ಅಲ್ಲಿಂದ ಅವರ ಮಕ್ಕಳು ಮತ್ತು ಎರಡನೇ ಪತ್ನಿಯ ನಡುವೆ ಆಸ್ತಿಗಾಗಿ ಮನಸ್ತಾಪ ಉಂಟಾಗುತ್ತೆ. ಅದಕ್ಕೆ ಕಾರಣ, ಮುತ್ತಪ್ಪ ರೈ ಮಾಡಿದ್ದ ಆ ವಿಲ್‌.

2019ರಲ್ಲಿ ಮುತ್ತಪ್ಪ ರೈ ಅವರು ತಮ್ಮ ಆಸ್ತಿ ಹಂಚಿಕೆ ಸಂಬಂಧ ವಿಲ್‌ ಮಾಡಿದ್ದರು. ವಕೀಲ ನಾರಾಯಣಸ್ವಾಮಿ ಅವರನ್ನ ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿ, ವಕೀಲೆ ಗೀತಾರಾಜ್ ಎಂಬುವವರ ಮೂಲಕ ಆಸ್ತಿಗೆ ಸಂಬಂಧಿಸಿದ ವಿಲ್ ಬರೆಸಿದ್ದರು. ಸಾವಿರ ಕೋಟಿಗೂ ಅಧಿಕ ಮೌಲ್ಯ ಆಸ್ತಿ ಹೊಂದಿದ್ದರು ಎನ್ನಲಾಗ್ತಿದೆ. ವಿಲ್‌ ಒಟ್ಟು 41 ಪುಟಗಳಿವೆ ಎನ್ನಲಾಗ್ತಿದೆ. ವಿಲ್‌ನಲ್ಲಿ ಮುತ್ತಪ್ಪ ರೈ ಪುತ್ರರಾದ ರಾಕಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್ ರೈ, ಎರಡನೇ ಪತ್ನಿ ಅನುರಾಧ ರೈ ಸೇರಿ ಮನೆ ಕೆಲಸದವರಿಗೂ ಆಸ್ತಿ ಹಂಚಿಕೆ ಮಾಡಿದ್ದರು ಎನ್ನಲಾಗ್ತಿದೆ.

2020ರಲ್ಲಿ ಮುತ್ತಪ್ಪ ರೈ ನಿಧನರಾದ ನಂತರ ಎರಡನೇ ಪತ್ನಿ ಅನುರಾಧ ರೈ ಕೋರ್ಟ್‌ನಲ್ಲಿ ಆಸ್ತಿಯಲ್ಲಿ ಪಾಲು ಕೇಳಿ ದಾವೆ ಹೂಡಿದ್ದಾರೆ. ಮುತ್ತಪ್ಪ ರೈ ಪುತ್ರರಾದ ರಾಕಿ ರೈ, ರಿಕ್ಕಿ ರೈ ಅವರನ್ನು ಪ್ರತಿವಾದಿಗಳಾಗಿ ಮಾಡಿ ದಾವೆ ಹೂಡಿದ್ದರು. ಈಗ ಈ ಆಸ್ತಿ ವ್ಯಾಜ್ಯ, ಬೆಂಗಳೂರಿನ 19ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ ಎಂದು ಮಾಹಿತಿ ಸಿಕ್ಕಿದೆ. ಕಾಂಪ್ರಮೈಸ್ ಪಿಟಿಷನ್ ಮೂಲಕ ಆಸ್ತಿ ವಿವಾದ ಇತ್ಯರ್ಥವಾಗಿದ್ದು, ಸುಮಾರು ನೂರು ಕೋಟಿ ಮೌಲ್ಯದ ಆಸ್ತಿಯನ್ನ ಮುತ್ತಪ್ಪ ರೈ ಎರಡನೇ ಪತ್ನಿಗೆ ಮಕ್ಕಳು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಧಾನದ ಮೂಲಕ ಇಬ್ಬರು ಆ ಆಸ್ತಿ ಇತ್ಯರ್ಥ ಪಡಿಸಿಕೊಂಡಿರುವುದು ಖಚಿತವಾಗಿದೆ. ಹಾಗಾದ್ರೆ, ಮುತ್ತಪ್ಪ ರೈ ಎರಡನೇ ಪತ್ನಿ, ಅನುರಾಧ ರೈ ಹಾಗೂ ಅವರ ಮಕ್ಕಳಾದ ರಿಕ್ಕಿ ರೈ, ರಾಕಿ ರೈ ಏನೇನ್ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಕಾಲೇಜಿಗೆ ಬಂದು 3ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ; ಕಾರಣವೇನು? 

ಮುತ್ತಪ್ಪ ರೈ ಪತ್ನಿ ಅನುರಾಧ ರೈ ಹಾಗೂ ಮಕ್ಕಳಿಗೆ 7 ಕೋಟಿ ರೂಪಾಯಿ, ಮಂಡ್ಯದ ಪಾಂಡವಪುರ ಬಳಿಯಿರುವ 22 ಎಕರೆ ಜಮೀನು, ಮೈಸೂರಿನಲ್ಲಿರುವ 4800 ಚದರಡಿ ಇರುವ ನಿವೇಶನ ಮತ್ತು ಆ ನಿವೇಶನದಲ್ಲಿರುವ ದೊಡ್ಡ ಮನೆ, ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯ ಐದೂವರೆ ಎಕರೆ ಜಮೀನು ನೀಡಿದ್ದಾರೆ ಎನ್ನಲಾಗ್ತಿದೆ.

ಇದು ಕೋರ್ಟ್ ಸಂಧಾನದ ಮೂಲಕ ಅನುರಾಧ ರೈ ಅವರಿಗೆ ಮುತ್ತಪ್ಪ ರೈ ಮಕ್ಕಳಾದ ರಿಕ್ಕಿ ರೈ ರಾಕಿ ರೈ ನೀಡುವ ಆಸ್ತಿ ವಿವರ. ಅನುರಾಧ ರೈ, ಕೋರ್ಟ್‌ ಮೂಲಕ ಮುತ್ತಪ್ಪ ರೈ ಪುತ್ರರಿಂದ ಪಡೆದಿರುವ ಆಸ್ತಿ ಮೌಲ್ಯ ನೂರು ಕೋಟಿ ಬೆಲೆ ಬಾಳುತ್ತೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment