/newsfirstlive-kannada/media/post_attachments/wp-content/uploads/2024/04/RCB-Today.jpg)
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸದ್ಯ ಲೀಗ್​ ಹಂತದ ಕೊನೆ ಪಂದ್ಯಗಳು ನಡೆಯುತ್ತಿವೆ. ಇಷ್ಟಾದ್ರೂ ಪ್ಲೇ ಆಫ್​ಗೆ ಯಾರು ಹೋಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸತತ 5 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿದೆ. ಇದುವರೆಗೆ ತಾನು ಆಡಿರೋ 13 ಪಂದ್ಯಗಳಲ್ಲಿ 6 ಮ್ಯಾಚ್​ ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 6ನೇ ಸ್ಥಾನದಲ್ಲಿದೆ. ಮೇ 18ನೇ ತಾರೀಕು ನಡೆಯಲಿರೋ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದರೆ ಆರ್​​ಸಿಬಿ ಪ್ಲೇ ಆಫ್​ಗೆ ಹೋಗುವುದು ಪಕ್ಕಾ.
/newsfirstlive-kannada/media/post_attachments/wp-content/uploads/2024/05/RCB_Tean-1.jpg)
ಶನಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ನಡೆಯಲಿರೋ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಸೆಣಸಾಡಲಿದೆ. ಇಲ್ಲಿ ಗೆದ್ದ ತಂಡ ಪ್ಲೇ ಆಫ್​ಗೆ ಹೋಗಲಿದೆ. ಆದರೆ, ಈ ಪಂದ್ಯಕ್ಕೂ ಆರ್‌ಸಿಬಿಗೆ ಭಾರೀ ಹಿನ್ನಡೆ ಆಗಿದೆ. ಇಬ್ಬರು ಇಂಗ್ಲೆಂಡ್ ಆಟಗಾರರು ಆರ್‌ಸಿಬಿ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಹಾಗಾಗಿ ಆರ್​​ಸಿಬಿ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಮತ್ತು ವೇಗಿ ರೀಸ್ ಟೋಪ್ಲೆ ಅವರ ಸೇವೆಯನ್ನು ಕಳೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us