newsfirstkannada.com

ಸಿಎಸ್‌ಕೆ ವಿರುದ್ಧ ನಿರ್ಣಾಯಕ ಪಂದ್ಯ.. ಪ್ಲೇ ಆಫ್ ರೇಸ್​ನಲ್ಲಿರೋ ಆರ್​​​ಸಿಬಿಗೆ ಡಬಲ್​ ಶಾಕ್!

Share :

Published May 15, 2024 at 7:34pm

Update May 15, 2024 at 7:36pm

    ಮೇ 18ಕ್ಕೆ ಆರ್​​​ಸಿಬಿ, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ರೋಚಕ ಪಂದ್ಯ

    CSK ವಿರುದ್ಧ ಗೆದ್ರೆ ಆರ್​​ಸಿಬಿಗಿದೆ ಪ್ಲೇ ಆಫ್​ಗೆ ಹೋಗಲು ಅವಕಾಶ!​​

    ರೋಚಕ ಪಂದ್ಯಕ್ಕೆ ಮುನ್ನವೇ ಆರ್​​ಸಿಬಿ ತಂಡಕ್ಕೆ ಡಬಲ್​ ಆಘಾತ

ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸದ್ಯ ಲೀಗ್​ ಹಂತದ ಕೊನೆ ಪಂದ್ಯಗಳು ನಡೆಯುತ್ತಿವೆ. ಇಷ್ಟಾದ್ರೂ ಪ್ಲೇ ಆಫ್​ಗೆ ಯಾರು ಹೋಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸತತ 5 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿದೆ. ಇದುವರೆಗೆ ತಾನು ಆಡಿರೋ 13 ಪಂದ್ಯಗಳಲ್ಲಿ 6 ಮ್ಯಾಚ್​ ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 6ನೇ ಸ್ಥಾನದಲ್ಲಿದೆ. ಮೇ 18ನೇ ತಾರೀಕು ನಡೆಯಲಿರೋ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದರೆ ಆರ್​​ಸಿಬಿ ಪ್ಲೇ ಆಫ್​ಗೆ ಹೋಗುವುದು ಪಕ್ಕಾ.

ಶನಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ನಡೆಯಲಿರೋ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಸೆಣಸಾಡಲಿದೆ. ಇಲ್ಲಿ ಗೆದ್ದ ತಂಡ ಪ್ಲೇ ಆಫ್​ಗೆ ಹೋಗಲಿದೆ. ಆದರೆ, ಈ ಪಂದ್ಯಕ್ಕೂ ಆರ್‌ಸಿಬಿಗೆ ಭಾರೀ ಹಿನ್ನಡೆ ಆಗಿದೆ. ಇಬ್ಬರು ಇಂಗ್ಲೆಂಡ್ ಆಟಗಾರರು ಆರ್‌ಸಿಬಿ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಹಾಗಾಗಿ ಆರ್​​ಸಿಬಿ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಮತ್ತು ವೇಗಿ ರೀಸ್ ಟೋಪ್ಲೆ ಅವರ ಸೇವೆಯನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ಟಿ20 ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ರೋಹಿತ್​ ಶರ್ಮಾ ಗುಡ್​ ಬೈ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಿಎಸ್‌ಕೆ ವಿರುದ್ಧ ನಿರ್ಣಾಯಕ ಪಂದ್ಯ.. ಪ್ಲೇ ಆಫ್ ರೇಸ್​ನಲ್ಲಿರೋ ಆರ್​​​ಸಿಬಿಗೆ ಡಬಲ್​ ಶಾಕ್!

https://newsfirstlive.com/wp-content/uploads/2024/04/RCB-Today.jpg

Load More