/newsfirstlive-kannada/media/post_attachments/wp-content/uploads/2024/05/Prajawal-Revanna-1-1.jpg)
ಪೆನ್‍ಡ್ರೈವ್ ಕೇಸಲ್ಲಿ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಆಗೋದಕ್ಕೆ ಕೌಂಟ್‍ಡೌನ್ ಶುರುವಾಗಿದೆ. ಎಲ್ಲಾ ಅಂದ್ಕೊಂಡಂತೆ ನಡೆದ್ರೆ ಇಂದು ತಡರಾತ್ರಿ ಪ್ರಜ್ವಲ್​ ಬಂದಿಳಿಯಲ್ಲಿದ್ದು, ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಎಸ್​ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾಯ್ತಿದ್ದಾರೆ.
ಜರ್ಮನಿಯಲ್ಲಿ ಅಡಗಿ ಕೂತಿದ್ದ ಅಶ್ಲೀಲ ವಿಡಿಯೋ ಆರೋಪಿ ಸದ್ಯ ಬೆಂಗಳೂರಿಗೆ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದಾರೆ. ಇವತ್ತು ಮಧ್ಯಾಹ್ನ ಲುಫ್ತಾನ್ಸಾ ಏರ್ ಲೈನ್ಸ್ ವಿಮಾನ ಹತ್ತಲಿದ್ದಾರೆ.
​
ಸುಮಾರು 32 ಕೆ.ಜಿಯ 2 ಬ್ಯಾಗ್​ ಸಹಿತ ಆಗಮಿಸ್ತಿರೋ ಪ್ರಜ್ವಲ್
ಜರ್ಮನಿಯ ಮ್ಯೂನಿಕ್​​ನಿಂದ ಪ್ರಜ್ವಲ್ ಟಿಕೆಟ್​ ಬುಕ್ಕಿಂಗ್​ ಆಗಿದೆ. ಲುಫ್ತಾನ್ಸಾ ಏರ್​​ಲೈನ್ಸ್​ನ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ಮ್ಯುನಿಚ್​ನಿಂದ ಇಂದು ಮಧ್ಯಾಹ್ನ 12:05ಕ್ಕೆ ಹೊರಡಲಿರುವ ಪ್ರಜ್ವಲ್ ರೇವಣ್ಣ ಹೊರಡಲಿದ್ದು. ಸುಮಾರು 8ರಿಂದ9 ಗಂಟೆಗಳ ಪಯಣದ ಬಳಿಕ ಅಂದ್ರೆ ಮೇ 30ರ ರಾತ್ರಿ 12.30ಕ್ಕೆ ಪ್ರಜ್ವಲ್​ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿಯಲಿದ್ದಾರೆ. ಇನ್ನು ಪ್ರಜ್ವಲ್ ಟಿಕೆಟ್​ನಲ್ಲಿ ಇಮೇಲ್, ಮೊಬೈಲ್ ನಂಬರ್ ಮಿಸ್ಸಿಂಗ್ ಆಗಿದೆ. ಸುಮಾರು 32 ಕೆ.ಜಿಯ 2 ಬ್ಯಾಗ್​ ಜೊತೆ ಮತ್ತೆರಡು ಚಿಕ್ಕ ಬ್ಯಾಗ್​ಗಳನ್ನೂ ಪ್ರಜ್ವಲ್ ರೇವಣ್ಣ ತರುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/05/Prajawal-Revanna-1.jpg)
ಪ್ರಜ್ವಲ್​ ಬಂದಿಳಿಯುತ್ತಿದ್ದಂತೆ ಬಂಧನಕ್ಕೆ ಎಸ್​ಐಟಿ ಸಿದ್ಧತೆ
ಪ್ರಜ್ವಲ್ ರೇವಣ್ಣ ಕೆಐಎಎಲ್‍ಗೆ ಬಂದಿಳಿದ ಕೂಡ್ಲೇ ಅವರನ್ನು ಬಂಧಿಸಲು ಎಸ್‍ಐಟಿ ಸಕಲ ಸಿದ್ದತೆ ಮಾಡ್ಕೊಂಡಿದೆ. ಈಗಾಗಲೇ ಕೆಂಪೇಗೌಡ ಪೋರ್ಟ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಪ್ರಜ್ವಲ್​ನನ್ನು ಅರೆಸ್ಟ್​ ಮಾಡಿದ ಬಳಿಕ ಬಿಗಿ ಭದ್ರತೆಯಲ್ಲಿ ಅವರನ್ನು ಎಸ್​ಐಟಿ ಕಚೇರಿಗೆ ಕರೆಕೊಂಡು ಹೋಗುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/05/Prjawal-revanna.jpg)
ನಾಳೆ ಪ್ರಜ್ವಲ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಇನ್ನು ತಿಂಗಳ ಬಳಿಕ ಸ್ವದೇಶಕ್ಕೆ ವಾಪಸ್ಸಾಗ್ತಿದ್ರೂ ಎಸ್​ಐಟಿ ಅಧಿಕಾರಿಗಳಿಂದ ಎಸ್ಕೇಪ್ ಆಗಲು ಪ್ರಜ್ವಲ್ ಎಲ್ಲಾ ಪ್ಲಾನ್ ಮಾಡಿಕೊಂಡೇ ಬರ್ತಿದ್ದಾರೆ. ತಮ್ಮ ವಿರುದ್ಧದ ಮೂರು ಪ್ರಕರಣದಲ್ಲಿ ಪ್ರಜ್ವಲ್ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮೊರೆ ಹೋಗಿದ್ರು. ಹಾಗೂ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಆದರೆ ಇದಕ್ಕೊಪ್ಪದ ಕೋರ್ಟ್, ಆಕ್ಷೇಪಣೆ ಸಲ್ಲಿಸಲು ಎಸ್‍ಐಟಿಗೆ ಸೂಚಿಸಿ, ಮೇ 31ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಇದನ್ನೂ ಓದಿ: ಇದು ‘ಅಮೃತವರ್ಷಿಣಿ’ ಘಳಿಗೆ..! ಬಹಳ ದಿನಗಳ ನಂತರ ಒಂದಾದ ಅತ್ತೆ ಸೊಸೆ!
ಒಟ್ಟಾರೆ. ಕಳೆದೊಂದು ತಿಂಗಳಿಂದ ಎಸ್​ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರಲು ಕೌಂಟ್​ಡೌನ್​ ಶುರುವಾಗಿದೆ. ಇನ್ನು ಎಸ್​ಐಟಿ ಅಧಿಕಾರಿಗಳನ್ನು ಅಲರ್ಟ್ ಆಗಿದ್ದು, ಏರ್​ಪೋರ್ಟ್​ನಲ್ಲಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯುತ್ತಿದ್ದಾರೆ. ಏರ್​ಪೋರ್ಟ್​ಗೆ ಬಂದಿಳಿಯುತ್ತಿದ್ದಂತೆ ಲಾಕ್ ಮಾಡಿ ವಿಚಾರಣೆ ನಡೆಸಲು ಸರ್ವ ಸನ್ನದ್ಧರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us