newsfirstkannada.com

ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರೋದೇ ಡೌಟ್? ಪೆನ್‌ಡ್ರೈವ್ ಪ್ರಕರಣದ ತನಿಖೆ ಏನಾಗುತ್ತೆ?

Share :

Published May 12, 2024 at 11:38am

    14 ದಿನವಾದ್ರೂ ನಾಪತ್ತೆ ಆಗಿರುವ ಪೆನ್‌ಡ್ರೈವ್‌ ಆರೋಪಿ ಪ್ರಜ್ವಲ್ ರೇವಣ್ಣ

    ಮೇ15ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ವಾಪಸ್ ಬರೋದು ಅನುಮಾನ

    ಪ್ರಜ್ವಲ್ ರೇವಣ್ಣ ನಾಪತ್ತೆ ಆದರೂ ಎಸ್​ಐಟಿ ಅಧಿಕಾರಿಗಳ ತನಿಖೆಗಿಲ್ಲ ಅಡ್ಡಿ

ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ವೈರಲ್ ಹಾಗೂ ಪೆನ್‌ಡ್ರೈವ್‌ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಸದ್ಯ ರಾಜ್ಯಕ್ಕೆ ವಾಪಸ್ ಆಗೋದು ಡೌಟ್ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಚ್‌ನಿಂದ ಬುಕ್ ಆಗಿದ್ದ ರಿಟರ್ನ್‌ ಟಿಕೆಟ್‌ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಅವರು ಇದೇ ಮೇ15ರಂದು ಬೆಂಗಳೂರಿಗೆ ವಾಪಸ್ ಬರುತ್ತಾರೆ ಅನ್ನೋ ಮಾಹಿತಿ ಇತ್ತು. ಮೇ15ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ವಾಪಸ್ ಬಂದ್ರೆ ಅವರನ್ನು ಅರೆಸ್ಟ್ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೀಗ ಪ್ರಜ್ವಲ್ ರೇವಣ್ಣ ಅವರು ಮೇ15ಕ್ಕೆ ವಾಪಸ್ ಆಗಲು ಬುಕ್ ಮಾಡಿದ್ದ ಟಿಕೆಟ್ ಅನ್ನೇ ಕ್ಯಾನ್ಸಲ್ ಮಾಡಿದ್ದಾರೆ.

ಜರ್ಮನಿಯ ಲುಫ್ತಾನ್ಸಾ ಏರ್​ಲೈನ್ಸ್​​ನಲ್ಲಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಆಗಿತ್ತು. ಆದ್ರೀಗ ಬುಕ್ ಮಾಡಲಾಗಿದ್ದ ಟಿಕೆಟ್ ಕ್ಯಾನ್ಸಲ್ ಆಗಿದ್ದು, ಸದ್ಯಕ್ಕೆ ಪ್ರಜ್ವಲ್ ರೇವಣ್ಣ ಅವರು ರಾಜ್ಯಕ್ಕೆ ಮರಳೋದೇ ಅನುಮಾನವಾಗಿದೆ.

ಪೆನ್‌ಡ್ರೈವ್ ಪ್ರಕರಣದಲ್ಲಿ SIT ತನಿಖೆಗಿಲ್ಲ ಅಡ್ಡಿ!
ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ SIT ಅಧಿಕಾರಿಗಳು ನೋಟಿಸ್ ಕೊಟ್ರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಕೇಸ್​ನ ಆರೋಪಿ ಪ್ರಜ್ವಲ್ ರೇವಣ್ಣ ಅವರು 14 ದಿನವಾದ್ರೂ ನಾಪತ್ತೆ ಆಗಿದ್ದಾರೆ.

ಇದನ್ನೂ ಓದಿ: ಎಸ್‌ಐಟಿ ತನಿಖೆ ಬಗ್ಗೆ ಕೇಳಿ ಬರುತ್ತಿದೆ ಅಪಸ್ವರ.. ಪ್ರಜ್ವಲ್​ ರೇವಣ್ಣ ವಿಡಿಯೋ ಕೇಸ್‌ ತನಿಖೆ ಸಿಬಿಐಗೆ? 

ಪ್ರಜ್ವಲ್ ರೇವಣ್ಣ ಪತ್ತೆಯಾಗದೇ ಇದ್ದರೂ ಎಸ್​ಐಟಿ ಅಧಿಕಾರಿಗಳ ತನಿಖೆಗಿಲ್ಲ ಅಡ್ಡಿಯಾಗಿಲ್ಲ. SIT ತಂಡ ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು, ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಸಂತ್ರಸ್ತೆಯರ ಹೇಳಿಕೆ, ಸಾಂದರ್ಭಿಕ ಸಾಕ್ಷ್ಯ, ಟೆಕ್ನಿಕಲ್ ಎವಿಡೆನ್ಸ್, ಸಿಡಿಆರ್ ರಿಪೋರ್ಟ್​ಗಳನ್ನ ಸಂಗ್ರಹ ಮಾಡಲಾಗಿದೆ.

ಪ್ರಜ್ವಲ್ ರೇವಣ್ಣ ನಾಪತ್ತೆಯಾದರೂ ಎಸ್‌ಐಟಿ ಪೊಲೀಸರಿಗೆ ಅಬ್​ಸ್ಕಾಂಡ್ ಚಾರ್ಜ್​ಶೀಟ್ ಸಲ್ಲಿಸಲು ಅವಕಾಶ ಇದೆ. ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾದ್ರೆ ಆರೋಪಿ ಪತ್ತೆ ಮಾಡೋದಕ್ಕೆ ಎಲ್ಲಾ ರೀತಿಯ ಪಯತ್ನ ನಡೆಸಲಾಗಿದೆ. ಆದ್ರೂ ಆರೋಪಿ ಈವರೆಗೂ ಪತ್ತೆಯಾಗಿಲ್ಲ ಅಂತ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸೋದಕ್ಕೆ ತನಿಖಾ ತಂಡಕ್ಕೆ ಅವಕಾಶ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರೋದೇ ಡೌಟ್? ಪೆನ್‌ಡ್ರೈವ್ ಪ್ರಕರಣದ ತನಿಖೆ ಏನಾಗುತ್ತೆ?

https://newsfirstlive.com/wp-content/uploads/2024/05/Prajwal-Revanna-Pendrive.jpg

Load More