newsfirstkannada.com

ಎಸ್‌ಐಟಿ ತನಿಖೆ ಬಗ್ಗೆ ಕೇಳಿ ಬರುತ್ತಿದೆ ಅಪಸ್ವರ.. ಪ್ರಜ್ವಲ್​ ರೇವಣ್ಣ ವಿಡಿಯೋ ಕೇಸ್‌ ತನಿಖೆ ಸಿಬಿಐಗೆ? 

Share :

Published May 12, 2024 at 7:02am

    ‘ಅಶ್ಲೀಲ’ ತನಿಖೆ ಬಗ್ಗೆಯೇ ಬಿಜೆಪಿ ನಾಯಕನ ಅನುಮಾನ

    ಪ್ರಕರಣವನ್ನ ಸಿಬಿಐಗೆ ನೀಡಬೇಕು ಎಂದಿದ್ದ ಹೆಚ್‌ಡಿಕೆ

    ಬಿಜೆಪಿಗರ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೌಂಟರ್

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಅಶ್ಲೀಲ ವಿಡಿಯೋ ಕೇಸ್‌ ತನಿಖೆಯ ಬಗ್ಗೆಯೇ ದೋಸ್ತಿಗಳು ಅಪಸ್ವರ ಎತ್ತಿದ್ದಾರೆ. ಎಸ್‌ಐಟಿ ತನಿಖೆ ಸರಿಯಾಗಿ ನಡೀತಿಲ್ಲ ಅಂತ ಆರೋಪಿಸಿದ್ದಾರೆ. ಸಿಬಿಐ ತನಿಖೆಗೆ ನೀಡ್ಬೇಕು ಅಂತ ಬಿಜೆಪಿ ನಾಯಕರು ಧ್ವನಿ ಎತ್ತಿದ್ದಾರೆ. ಇತ್ತ ಬಿಜೆಪಿಗರ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ವಿರುದ್ಧ ಮಾತಿನ ಮಳೆ ಸುರಿಸಿದ್ದಾರೆ.

ಹಾಸನದಲ್ಲಿ ಹಲ್​ಚಲ್​ ಎಬ್ಬಿಸಿರೋ ಪೆನ್​ಡ್ರೈವ್​ ಪ್ರಕರಣ ಸದ್ಯ ರಾಜಕೀಯ ಪಡಸಾಲೆಯಲ್ಲಿ ಏಟು-ಎದಿರೇಟಿಗೆ ವೇದಿಕೆಯಾಗಿದೆ. ಒಂದ್ಕಡೆ ಆರೋಪ, ಪ್ರತ್ಯಾರೋಪ, ಮತ್ತೊಂದ್ಕಡೆ ಅಬ್ಬರ, ಆಕ್ರೋಶ, ಒಂದು ಪ್ರಕರಣ ಹತ್ತು ಅನುಮಾನ, ಹಲವರ ಮಧ್ಯೆ ವಾಕ್ ಸಮರ ಮತ್ತಷ್ಟು ತಾರಕಕ್ಕೇರಿದೆ.

ಕೇಸ್‌ನ ಸಿಬಿಐಗೆ ವಹಿಸಿ ಎಂದ ಬಿ.ಎಸ್. ಯಡಿಯೂರಪ್ಪ

ಅಶ್ಲೀಲ ವಿಡಿಯೋ ರೂವಾರಿ ಪ್ರಜ್ವಲ್ ರೇವಣ್ಣ ಸದ್ಯ ತಲೆಮರೆಸಿಕೊಂಡಿದ್ದಾರೆ. ಜೀವಮಾನದ ಕಳಂಕ ಹೊತ್ತು ಎಸ್‌ಐಟಿ ಕೈಗೆ ಸಿಗದಂತೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಪ್ರಕರಣವನ್ನ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ಹೊತ್ತಲ್ಲಿ ಪೆನ್‌ಡ್ರೈವ್ ಪಾಲಿಟಿಕ್ಸ್ ಮತ್ತಷ್ಟು ತಾರಕ್ಕೇರಿದೆ. ಎಸ್‌ಐಟಿ ತನಿಖೆಯ ಬಗ್ಗೆಯೇ ಬಿಜೆಪಿಗರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಅಲ್ಲದೇ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಜಲಾವೃತವಾದ ಪೊಲೀಸ್​​ ಠಾಣೆ, ಕೊಚ್ಚಿ ಹೋದ ಕಾರುಗಳು.. ರಾಜ್ಯದಲ್ಲಿ ಮಳೆಗಾದ ಅವಾಂತರ ಒಂದಾ.. ಎರಡಾ..

ಕುಮಾರಸ್ವಾಮಿ ಹೇಳಿಕೆಗೆ ಎಂ.ಬಿ. ಪಾಟೀಲ್ ಟಾಂಗ್

ಬಿಜೆಪಿಗರಷ್ಟೇ ಅಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಪೆನ್‌ಡ್ರೈವ್ ಪ್ರಕರಣವನ್ನ ಸಿಬಿಐಗೆ ಕೊಡಬೇಕು ಅಂತ ಆಗ್ರಹಿಸುತ್ತಿದ್ದಾರೆ. ಅಲ್ಲದೇ ಇದೇ ವಿಚಾರವಾಗಿ ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಹೆಚ್‌ಡಿಕೆಯ ಈ ನಡೆ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ. ಇದೇನು ಕ್ಲೀನ್ ಚಿಟ್ ಕೊಡೋಕಾ ಪ್ಲಾನ್‌ ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಅನಗತ್ಯ ಮೆಟ್ರೋ ನಿಲ್ದಾಣದಲ್ಲಿ ಕಾಲ ಕಳೆದ್ರೆ ಬೀಳುತ್ತೆ ದಂಡ.. ನೀವು ಓದಲೇಬೇಕಾದ ಸ್ಟೋರಿ!

ಒಟ್ಟಾರೆ, ರಾಜ್ಯದಲ್ಲಿ ಪೆನ್‌ಡ್ರೈವ್ ಪಾಲಿಟಿಕ್ಸ್‌ ಮತ್ತಷ್ಟು ತಾರಕಕ್ಕೇರಿದೆ. ಎಸ್‌ಐಟಿ ತನಿಖೆ ಬಗ್ಗೆ ದೋಸ್ತಿಗಳು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗೆ ಪ್ರಕರಣ ವಹಿಸುವಂತೆ ಆಗ್ರಹಿಸ್ತಿದ್ದಾರೆ. ಆದ್ರೀಗ ಬಿಜೆಪಿಗರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತೆ ಅಂತ ಹೇಳೋದು ಕಷ್ಟ. ಆದ್ರೆ, ಎಸ್‌ಐಟಿನೇ ಸತ್ಯಾಸತ್ಯತೆಯನ್ನ ಬಯಲಿಗೆಳೆಯುತ್ತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಸ್‌ಐಟಿ ತನಿಖೆ ಬಗ್ಗೆ ಕೇಳಿ ಬರುತ್ತಿದೆ ಅಪಸ್ವರ.. ಪ್ರಜ್ವಲ್​ ರೇವಣ್ಣ ವಿಡಿಯೋ ಕೇಸ್‌ ತನಿಖೆ ಸಿಬಿಐಗೆ? 

https://newsfirstlive.com/wp-content/uploads/2024/05/Prajwal-Revanna-6.jpg

Load More