newsfirstkannada.com

×

ಇಬ್ಬರು ಕನಸಿನಲ್ಲಿ ಪರಸ್ಪರ ಮಾತನಾಡಿದರು! ಸ್ವಪ್ನ ಪ್ರಪಂಚಕ್ಕೆ ಹೊಸ ರೂಪ ಕೊಟ್ಟ ವಿಜ್ಞಾನಿಗಳು..!

Share :

Published October 16, 2024 at 8:58am

Update October 16, 2024 at 9:02am

    ಅದ್ಭುತವಾದ ಹೇಳಿಕೆ ಕೊಟ್ಟ ವಿಜ್ಞಾನಿಗಳ ಲೋಕ

    ಕನಸುಗಳ ನಡುವೆ ಸಂವಹನ ನಡೆಸಲು ಯಶಸ್ವಿ

    ವಿಜ್ಞಾನಿಗಳು ಅದ್ಭುತ ತಂತ್ರಜ್ಞಾನ ಆವಿಷ್ಕಾರ

ಇನ್ಮೇಲೆ ಕನಸಿನಲ್ಲೂ ಸಂವಹನ ನಡೆಸಬಹುದು! ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಅದು ಸಹಜ ಪ್ರಕ್ರಿಯೆ. ನಿದ್ದೆಯ ಅವಧಿಯಲ್ಲಿ ಅನೇಕ ಬಗೆಯ ಕನಸುಗಳು ನಮಗೆ ಬೀಳುತ್ತವೆ. ಹಲವರು ಕನಸಿನಲ್ಲಿ ಏನೇನೋ ಮಾತನಾಡ್ತಾರೆ. ಕೆಲವರು ನಿದ್ದೆ ಮಂಪಲ್ಲೇ ಎದ್ದು ಓಡಾಡ್ತಾರೆ. ಆದರೆ, ಜನರು ಕನಸಿನಲ್ಲಿ ಪರಸ್ಪರ ಮಾತನಾಡ್ತಾರೆ ಅಂದರೆ ನೀವು ನಂಬ್ತೀರಾ? ಅಂತಹ ಪ್ರಯೋಗಕ್ಕೆ ಕೈಹಾಕಿದ್ದ ಅಮೆರಿಕ ಕಂಪನಿಯೊಂದು ಯಶಸ್ವಿಯಾಗಿದ್ದು, ಇಬ್ಬರು ಕನಸುಗಾರರ ನಡುವೆ ಕನಸಲ್ಲೇ ಮಾತುಕತೆ ನಡೆದಿದೆ!

ಅಮೆರಿಕದ startup ಕಂಪನಿ REMspace, ಇಬ್ಬರು ವ್ಯಕ್ತಿಗಳು ಕನಸಿನಲ್ಲಿ ಮಾತನಾಡಿಕೊಳ್ಳಲು ಸಹಾಯವಾಗುವಂಥ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಇಬ್ಬರು ವ್ಯಕ್ತಿಗಳು ಕನಸಿನಲ್ಲಿಯೂ ಮಾತನಾಡಬಹುದು! ಅಂದರೆ ನಿದ್ರೆ (Sleep) ಮತ್ತು ಕನಸು (Lucid dream) ಕಾಣುವ ತಂತ್ರಜ್ಞಾನವನ್ನು ಅಮೆರಿಕದ ಕಂಪನಿ ಕಂಡು ಹಿಡಿದಿದೆ. ಈ ತಂತ್ರಜ್ಞಾನವು ಕನಸು ಕಾಣುವ ಸಮಯದಲ್ಲಿ ಇಬ್ಬರ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಬಹುದು. ಇದು ಸರ್ವರ್, ಡಿವೈಸ್, ವೈಫೈ ಮತ್ತು ಸಂವೇದಕಗಳನ್ನು ಹೊಂದಿತ್ತು. ಇದರಲ್ಲಿ ಬಳಸಲಾಗಿರುವ ನಿಖರವಾದ ತಂತ್ರಜ್ಞಾನದ ಬಗ್ಗೆ ಕಂಪನಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ರೈಲಿನ ಕಿಟಕಿಯಿಂದ ಜಾರಿದ ಕಂದಮ್ಮ; ಕಗ್ಗತ್ತಲಲ್ಲಿ 16 ಕಿಮೀ ಓಡಿ ಮಗಳ ಉಳಿಸಿಕೊಂಡ ಅಪ್ಪ..

ಸಂಶೋಧನೆ ಹೇಗೆ ನಡೆಯಿತು?
ಈ ಸಂಶೋಧನೆಯಲ್ಲಿ ತೊಡಗಿದ್ದವರು ಬೇರೆ ಬೇರೆ ಮನೆಗಳಲ್ಲಿ ಮಲಗುತ್ತಿದ್ದರು. ಭಾಗವಹಿಸಿದವರಿಗೆ ಕನಸು ಬೀಳಲು ಪ್ರಾರಂಭವಾಗಿ ಅದರ ಆಳಕ್ಕೆ ಹೋಗ್ತಿದ್ದಂತೆ ಪ್ರಯೋಗ ಮಾಡಲಾಯಿತು. ತಂತ್ರಜ್ಞಾನದ ಸಹಾಯದಿಂದ ಅವರ ಮೆದುಳಿನ ತರಂಗಗಳನ್ನು ಪತ್ತೆ ಹಚ್ಚಲಾಯಿತು. ಅದು ನಂತರ ಡೇಟಾವನ್ನು ಸರ್ವರ್‌ಗೆ ಕಳುಹಿಸಿತು. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಉದ್ದೇಶವು ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುವುದು ಮತ್ತು ಹೊಸ ಕೌಶಲ್ಯಗಳನ್ನು ಕಲಿಸುವುದು ಎಂದು ಕಂಪನಿ ಹೇಳಿದೆ. ಈ ವಿದ್ಯಮಾನವು ಸ್ಪಷ್ಟವಾದ ಕನಸುಗಳ ಸಮಯದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದೆ.

ಸ್ಪಷ್ಟವಾದ ಕನಸು ಏನು?
ಸ್ಪಷ್ಟವಾದ ಕನಸು ಎಂದರೆ ವ್ಯಕ್ತಿಯು ತಾನು ಕನಸು ಕಾಣುತ್ತಿರುವುದನ್ನು ಅರಿತಾಗ. ಈ ಸಮಯದಲ್ಲಿ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಬಹುದು. ಇದು ಸಾಮಾನ್ಯವಾಗಿ ಆಳವಾದ ನಿದ್ರೆಯ ಸಮಯದಲ್ಲಿ ಸಂಭವಿಸುತ್ತದೆ.

REMSpace ಸಿಇಒ ಮತ್ತು ಸಂಸ್ಥಾಪಕ ಮೈಕೆಲ್ ರಾಡುಗಾ (Michael Raduga) ಮಾತನಾಡಿ.. ಇಲ್ಲಿಯವರೆಗೆ ಕನಸಿನಲ್ಲಿ ಮಾತನಾಡುವುದು ವಿಜ್ಞಾನದ ಕಥೆಗಳಂತೆ ಕಾಣುತ್ತಿತ್ತು. ಆದರೆ ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವಿಲ್ಲದೇ ಮನುಷ್ಯರು ತಮ್ಮ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ತಂತ್ರಜ್ಞಾನವು ಕನಸಿನ ಪ್ರಪಂಚದಲ್ಲಿ ಜನರ ಸಂವಹನ ಮತ್ತು ಆಲೋಚನೆಗೆ ಹೊಸ ರೂಪವನ್ನು ನೀಡುತ್ತದೆ.

ಇದನ್ನೂ ಓದಿ: ಮನೆಮಗ ರಾಹುಲ್​​ ಮೇಲೆ ಅಭಿಮಾನಿಗಳ ಕಣ್ಣು.. ಆ ಒಂದು ಕನಸು ಈಡೇರುತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ಬರು ಕನಸಿನಲ್ಲಿ ಪರಸ್ಪರ ಮಾತನಾಡಿದರು! ಸ್ವಪ್ನ ಪ್ರಪಂಚಕ್ಕೆ ಹೊಸ ರೂಪ ಕೊಟ್ಟ ವಿಜ್ಞಾನಿಗಳು..!

https://newsfirstlive.com/wp-content/uploads/2024/10/Dream-4.jpg

Load More