newsfirstkannada.com

ಇಲ್ಲಿ ಸೈನಿಕರು ಹಾವಿನ ರಕ್ತ ಕುಡಿಬೇಕು, ಚೇಳು, ಎರೆಹುಳು ತಿನ್ಬೇಕು.. ಇವರ ಮಿಲಿಟರಿ ಟ್ರೈನಿಂಗ್​ ನೋಡಿದ್ರೆ ಭಯವಾಗುತ್ತೆ

Share :

Published March 27, 2024 at 10:54am

Update March 27, 2024 at 11:05am

  ಕೋಬ್ರಾ ಗೋಲ್ಡ್​ ಮಿಲಿಟರಿ ವ್ಯಾಯಾಮ ಶಾಲೆಯ ಬಗ್ಗೆ ನಿಮಗೆಷ್ಟು ಗೊತ್ತು?

  ಇವರು ಹಾವಿನ ರಕ್ತ ಕುಡಿತಾರೆ, ಚೇಳನ್ನು ಆಹಾರವನ್ನಾಗಿ ಸ್ವೀಕರಿಸ್ತಾರೆ

  ಇಲ್ಲಿ ಸೈನಿಕರಿಗೆ 3 ರೀತಿ ವ್ಯಾಯಾಮ ಅಂಶವನ್ನು ಹೇಳಿಕೊಡುತ್ತಾರೆ

ಹಾವು ಅಂದ್ರೆ ಸಾಕು ಓಡಿ ಹೋಗುವವರೇ ಜಾಸ್ತಿ. ಅಂತಹದರಲ್ಲಿ ಹಾವಿನ ರಕ್ತ ಕುಡಿತಾರೆ ಅಂದ್ರೆ ನಂಬ್ತೀರಾ?. ನಂಬಲೇ ಬೇಕು. ವಿದೇಶಿ ಸೈನಿಕರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಅದಕ್ಕೆ ಕಾರಣವು ಇದೆ. ಈ ಬಗ್ಗೆ ಕುತೂಹಲಕಾರಿಯಾದ ವಿಚಾರ ಇಲ್ಲಿದೆ ಓದಿ.

ಥಾಯ್ಲೆಂಡ್​ ಸೈನಿಕರಿಗೆ ಹಾವಿನ ರಕ್ತವನ್ನು ಕುಡಿಯಲು ಟ್ರೈನಿಂಗ್​ ನೀಡಲಾಗುತ್ತದೆ. ಹೌದು. ಚಂತಬುರಿಯಲ್ಲಿ ಕೋಬ್ರಾ ಗೋಲ್ಡ್​ ಹೆಸರಿನ ಮಿಲಿಟರಿ ವ್ಯಾಯಾಮ ಶಾಲೆಯಲ್ಲಿ ಸೈನಿಕರಿಗೆ ಹಾವಿನ ರಕ್ತವನ್ನು ನೀಡಲಾಗುತ್ತದೆ.

ಅಂದಹಾಗೆಯೇ, ಇದು ವಾರ್ಷಿಕ ಕೋಬ್ರಾ ಗೋಲ್ಡ್​ ಮಿಲಿಟರಿ ವ್ಯಾಯಾಮ ಶಾಲೆಯಾಗಿದ್ದು, ವರ್ಷದಲ್ಲಿ ಒಂದು ಬಾರಿ ಏಷ್ಯಾ-ಫೆಸಿಪಿಕ್ ಅತಿದೊಡ್ಡ ಚಟುವಟಿಕೆಯನ್ನ ಇಲ್ಲಿ ನಡೆಸಲಾಗುತ್ತದೆ. ಸುಮಾರು 29 ರಾಷ್ಟ್ರಗಳು ಇಲ್ಲಿ ಭಾಗವಹಿಸುತ್ತಾರೆ.

ಇಲ್ಲಿ ಮೂರು ರೀತಿ ವ್ಯಾಯಾಮ ಅಂಶವನ್ನು ಹೇಳಿಕೊಡುತ್ತಾರೆ. ಅದರಲ್ಲಿ ಮಿಲಿಟರಿ ಕ್ಷೇತ್ರ ತರಬೇತಿ, ಮಾನವೀಯ ನೆರವು ಮತ್ತು ವಿಪತ್ತು ತರಬೇತಿಯನ್ನ ಇಲ್ಲಿ ನೀಡಲಾಗುತ್ತದೆ. ಅಚ್ಚರಿ ಸಂಗತಿ ಎಂದರೆ ಇಲ್ಲಿ ವಿಷಕಾರಿಯಲ್ಲದ ಹಾವುಗಳ ರಕ್ತವನ್ನು ಸೈನಿಕರಿಗೆ ಕುಡಿಸಲಾಗುತ್ತದೆ. ಮಾತ್ರವಲ್ಲದೆ, ಚೇಳು, ಎರೆಹುಳ, ಬಳ್ಳಿಗಳನ್ನು ತಿನ್ನಲು ನೀಡಲಾಗುತ್ತದೆ. ಕಾರಣ ಉಷ್ಣವಲಯದ ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆಯಾದಾಗ ಅದನ್ನು ನೀಗಿಸಲು ಈ ರೀತಿಯ ಟ್ರೈನಿಂಗ್​ ನೀಡುತ್ತಾರಂತೆ.

ಇದನ್ನೂ ಓದಿ: ಬೆಂಗಳೂರಲ್ಲಿ ‘ಮೈನಾ’ ಸಿನಿಮಾ ಸ್ಟೈಲ್​​ನಲ್ಲಿ ಚೀಟಿಂಗ್; ವಿಕಲ ಚೇತನ ಮಹಿಳೆಗೆ ಮದ್ವೆ ಆಸೆ ಹುಟ್ಟಿಸಿ ಮಹಾಮೋಸ

ಒಟ್ಟಿನಲ್ಲಿ ತುರ್ತು ಸಮಯದಲ್ಲಿ ಸೈನಿಕರು ಬದುಕುಳಿಯಂತೆ ಮಾಡುವ ಕೆಲವು ಚಟುವಟಿಕೆಗಳನ್ನ ಈ ವ್ಯಾಯಾಮ ಶಾಲೆಯಲ್ಲಿ ಹೇಳಿಕೊಡಲಾಗುತ್ತದೆ. ಅಂದಹಾಗೆಯೇ 1982ರಿಂದ ಇದು ಪ್ರಾರಭವಾಯಿತು. ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಈ ವ್ಯಾಯಾಮ ಶಾಲೆಯಲ್ಲಿ ಸೈನಿಕರು ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಲ್ಲಿ ಸೈನಿಕರು ಹಾವಿನ ರಕ್ತ ಕುಡಿಬೇಕು, ಚೇಳು, ಎರೆಹುಳು ತಿನ್ಬೇಕು.. ಇವರ ಮಿಲಿಟರಿ ಟ್ರೈನಿಂಗ್​ ನೋಡಿದ್ರೆ ಭಯವಾಗುತ್ತೆ

https://newsfirstlive.com/wp-content/uploads/2024/03/Snake-1.jpg

Load More