newsfirstkannada.com

ಉರಿ ಬಿಸಿಲಲ್ಲಿ ICE ನೀರು ಗಟಗಟ ಕುಡಿದ್ರೆ ಜೀವಕ್ಕೆ ಅಪಾಯ; ಈ ತಪ್ಪನ್ನು ಮಾಡಲೇ ಬೇಡಿ!

Share :

Published April 4, 2024 at 5:33pm

  ಹೊರಗೆ ಹೋಗಿ ಮನೆಗೆ ಬಂದಾಗ ತಕ್ಷಣವೇ ತಣ್ಣೀರು ಕುಡಿಯಬೇಡಿ

  ತಕ್ಷಣವೇ ಸ್ನಾನ ಮಾಡಿದರೂ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ

  ಬಿಸಿಲಿನಲ್ಲಿ ನಿಮ್ಮ ಕೈ ಅಥವಾ ಪಾದಗಳನ್ನು ತಕ್ಷಣ ತೊಳೆಯಬೇಡಿ

ಈ ವರ್ಷದ ಬೇಸಿಗೆಯಲ್ಲಿ ಸೂರ್ಯನ ಶಾಖ ವಿಪರೀತ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗಿದೆ. ಉದ್ಯಾನನಗರಿ ಬೆಂಗಳೂರಲ್ಲಿ ತೀವ್ರ ಉಷ್ಣಾಂಶ ಹೊಸ, ಹೊಸ ದಾಖಲೆಯನ್ನು ಬರೆಯುತ್ತಿದೆ. ಬಿಸಿಲೂರು ಕಲಬುರಗಿಯಲ್ಲಂತೂ ಬೆಳಗ್ಗೆ 8 ಗಂಟೆಗೆ ಸೂರ್ಯನ ಪ್ರತಾಪ ಆರಂಭವಾದ್ರೆ, ಸಂಜೆ 6 ಗಂಟೆಯಾದ್ರೂ ಕಡಿಮೆ ಆಗುತ್ತಿಲ್ಲ. ಕಲಬುರಗಿಯಲ್ಲಿ ಸದ್ಯ 42-43 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಬಳ್ಳಾರಿಯ ಜನರೂ ಕೂಡ 41 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ತತ್ತರಿಸಿ ಹೋಗಿದೆ.

ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ತುಂಬಾ ತಣ್ಣನೆಯ ನೀರನ್ನು ಕುಡಿಯೋದು ಡೇಂಜರ್. ತುಂಬಾ ಬಿಸಿಯಾದ ವಾತಾವರಣದಿಂದ ಬಂದ ತಕ್ಷಣವೇ ಐಸ್‌ ನೀರನ್ನು ಗಟಗಟ ಕುಡಿದ್ರೆ ವ್ಯಕ್ತಿಯ ಸಣ್ಣ ರಕ್ತನಾಳಗಳಿಗೆ ಅಪಾಯವಿದೆ. ಹೀಗಾಗಿ ನೀವು ಹೊರಗೆ ಹೋಗಿ ಮನೆಗೆ ಬಂದಾಗ ತಣ್ಣೀರು ಕುಡಿಯಬಾರದು. ಅದರಲ್ಲೂ ಫ್ರಿಡ್ಜ್‌ ವಾಟರ್‌ ಬಳಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯೋದು ಒಳ್ಳೆಯದು.

ಇದನ್ನೂ ಓದಿ: ಎಚ್ಚರ! ಏಪ್ರಿಲ್‌ ತಿಂಗಳು ಪೂರ್ತಿ ಹುಷಾರಾಗಿರಿ.. ಹವಾಮಾನ ಇಲಾಖೆಯಿಂದ ಜನರಿಗೆ ಎಚ್ಚರಿಕೆ; ಏನದು?

ಯಾರಾದರೂ ಬಿಸಿಲಿನ ಶಾಖದಿಂದ ತಣ್ಣಗಾಗಲು ಬಯಸುತ್ತಾರೆ. ಆಗ ತಕ್ಷಣವೇ ಸ್ನಾನ ಮಾಡಿದರೆ ಸ್ನಾನದ ನಂತರ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಗಳು ಇರಬಹುದು. ಬಿಸಿಲಿನಿಂದ ತುಂಬಾ ದಣಿದಿದ್ದರೆ ತಕ್ಷಣವೇ ತಣ್ಣನೆಯ ನೀರನ್ನು ಕುಡಿಯಬಾರದು. ಏಕೆಂದರೆ ಇದು ರಕ್ತನಾಳಗಳು ಅಥವಾ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ. ಇದರಿಂದ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಬಿಸಿಲಿನಲ್ಲಿ ನಿಮ್ಮ ಕೈ ಅಥವಾ ಪಾದಗಳನ್ನು ತಕ್ಷಣ ತೊಳೆಯಬೇಡಿ. ತೊಳೆಯುವ ಅಥವಾ ಸ್ನಾನ ಮಾಡುವ ಮೊದಲು ಕನಿಷ್ಠ ಅರ್ಧ ಗಂಟೆಯವರೆಗೆ ಕಾಯಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉರಿ ಬಿಸಿಲಲ್ಲಿ ICE ನೀರು ಗಟಗಟ ಕುಡಿದ್ರೆ ಜೀವಕ್ಕೆ ಅಪಾಯ; ಈ ತಪ್ಪನ್ನು ಮಾಡಲೇ ಬೇಡಿ!

https://newsfirstlive.com/wp-content/uploads/2024/04/Drinking-Water.jpg

Load More