newsfirstkannada.com

×

BBK10: ಕಾಗೆ ಹಾರಿಸಿಕೊಂಡು ಬಂದವ್ರಿಂದಲೇ ಗಲೀಜು.. ಇಶಾನಿ ಮಾತಿಗೆ ರೊಚ್ಚಿಗೆದ್ದ ಡ್ರೋನ್ ಪ್ರತಾಪ್‌ ಫ್ಯಾನ್ಸ್‌!

Share :

Published January 17, 2024 at 1:22pm

    ‘ಕಾಗೆ ಎಲ್ಲ ಕಡೆ ಗಲೀಜು ಮಾಡಿಕೊಂಡು ಸಿಂಪಥಿ ಕ್ರಿಯೇಟ್ ಮಾಡ್ತಿದೆ’

    ಡ್ರೋನ್ ವಿರುದ್ಧ ಇಶಾನಿ ಮಾತಿಗೆ ಬಿಗ್‌ಬಾಸ್‌ ಮನೆಯಲ್ಲಿ ಎಲ್ರೂ ಶಾಕ್

    ಡ್ರೋನ್ ಪ್ರತಾಪ್‌ಗೆ ನೀನ್ಯಾಕೋ ಇಲ್ಲಿಗೆ ಬಂದೆ ಅಂತ ಇಶಾನಿ ಕೂಗಾಟ

ಇನ್ನೆರೆಡು ವಾರ ಕಳೆದರೆ ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 19ರ​ ಫಿನಾಲೆ ಬಂದೇ ಬಿಡುತ್ತದೆ. ಇತರೆ ಎಲ್ಲಾ ಸೀಸನ್​ಗಳಂತೆ ಈ ಸೀಸನ್​ ಇಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯಾಕಂದ್ರೆ ಬೇರೆ ಸೀಸನ್​ಗಳಾಗಿದ್ರೆ ಇಷ್ಟು ಹೊತ್ತಿಗೆ ವಿನ್ನರ್ ಬಗ್ಗೆ ಒಂದು ಕ್ಲಿಯರ್ ಪಿಕ್ಚರ್ ಸಿಕ್ಕಿರೋದು. ಆದ್ರೆ ಈ ಬಾರಿ ಅಂತಹ ಊಹೆಗೆ ಅವಕಾಶವೇ ಇಲ್ಲ. ಯಾಕಂದ್ರೆ 13, 14ನೇ ವಾರವಾದ್ರೂ ಸೀಸನ್ 10 ತನ್ನ ಅದೇ ಕ್ಯೂರಿಯಾಸಿಟಿಯನ್ನ ಕಾಯ್ದುಕೊಂಡೇ ಬಂದಿದೆ.

ಹಳೇ ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್‌ ಮನೆಗೆ ಬಂದು ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದಾರೆ. ಇದು ಕೊನೆ ಎರಡು ವಾರದಲ್ಲಿ ಹೇಗೆ ಬದಲಾವಣೆ ತರುತ್ತೋ ಗೊತ್ತಿಲ್ಲ. ಆದ್ರೆ ಹಳೇ ಸ್ಪರ್ಧಿಗಳಿಂದ ಮನೆ ಒಳಗಿನ ಸ್ಪರ್ಧಿಗಳು ವಿಚಲಿತರಾಗಿರೋದಂತು ನಿಜ. ಅದರಲ್ಲೂ ಡ್ರೋನ್​ ಪ್ರತಾಪ್​ ಬಗ್ಗೆ ಇಶಾನಿ ನೇರವಾಗೇ ಕೆಂಡ ಕಾರ್ತಿದ್ದಾರೆ.

ಈ ವಾರದ ಆರಂಭದಲ್ಲೇ ತುಕಾಲಿ ಸಂತೋಷ್​ ಬರ್ತ್​ಡೇ ಇತ್ತು. ಮನೆ ಮಂದಿ ಬಹಳ ಸಂಭ್ರಮದಿಂದ ಆಚರಣೆ ಮಾಡಿದ್ದರು. ಇದಕ್ಕೆ ಮನೆ ಹೊರಗಿಂದ ಹಳೇ ಸ್ಪರ್ಧಿಗಳು ಬಂದು ಸೇರಿಕೊಂಡು ಸಖತ್ ಮಜಾ ಮಾಡಿದ್ದಾರೆ. ಮನೆಯಿಂದ ಹೊರಹೋಗಿದ್ದ ತಮ್ಮ ಸ್ನೇಹಿತರನ್ನು ಕಂಡು ಸ್ಪರ್ಧಿಗಳು ತುಂಬಾನೇ ಖುಷಿಯಾಗಿದ್ದಾರೆ. ಆದ್ರೆ ಅದ್ಯಾಕೋ ಗೊತ್ತಿಲ್ಲ ಇಶಾನಿ ಅವರು ಡ್ರೋನ್​ ಮೇಲೆ ನೇರವಾಗೇ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಟ್ರೋಫಿ ಯಾರ ಕೈ ಸೇರಲಿದೆ.. ಈ ವಾರ ಮನೆಯಿಂದ ಹೊರ ಬರೋ ಸ್ಪರ್ಧಿ ಯಾರು?

ತುಕಾಲಿ ಬರ್ತ್​ಡೇ ಸೆಲೆಬ್ರೇಷನ್ ಆಗಿದ್ದೇ ತಡ ಮನೆಯೊಳಗಿನ ಸ್ಪರ್ಧಿಗಳು ಹಳೇ ಸ್ಪರ್ಧಿಗಳ ಬಳಿ ಹೊರಗೆ ಹೇಗೆ ಕಾಣ್ತಿದ್ದೀವಿ, ಹೊರಗಿನ ಒಪಿನಿಯನ್ ಹೇಗಿದೆ ಎಂದು ಕೇಳ್ತಿದ್ದರು. ಆಗ ವಿನಯ್​ ಜೊತೆ ಮಾತಾಡ್ತಿದ್ದ ಇಶಾನಿ ಕಾಗೆ ಎಲ್ಲ ಕಡೆ ಗಲೀಜು ಮಾಡಿಕೊಂಡು, ಕಾಗೆ ಹಾರಿಸಿಕೊಂಡು ಸಿಂಪಥಿ ಕ್ರಿಯೇಟ್ ಮಾಡ್ತಿದೆ ಎಂದು ಏರುಧ್ವನಿಯಲ್ಲಿ ನೇರವಾಗೇ ಹೇಳಿದರು. ಇದನ್ನೂ ಕೇಳಿದ ಮನೆ ಮಂದಿ ಒಮ್ಮೆಲ್ಲೆ ಶಾಕ್ ಆಗ್ಬಿಟ್ಟಿದ್ದಾರೆ. ಡ್ರೋನ್ ಪ್ರತಾಪ್ ಇಶಾನಿಯನ್ನು ಮಾತಾಡಿಸಲು ಟ್ರೈ ಮಾಡಿದ್ರು ಕೂಡ ಅವರು ಖಾರವಾಗೇ ಉತ್ತರ ಕೊಟ್ಟಿದ್ದಾರೆ.

ಇಶಾನಿ ಸಿಟ್ಟು ಇಲ್ಲಿಗೆ ನಿಲ್ಲಲಿಲ್ಲ ವಿನಯ್, ನಮ್ರತಾ ರಕ್ಷಕ್ ಇಶಾನಿ ಕುಳಿತು ಮಾತಾಡ್ತಿದ್ದಾಗ ಕಾರ್ತಿಕ್​ ಅಲ್ಲಿಗೆ ಬರ್ತಾರೆ. ಆಗಲೂ ಕೂಡ ಇಶಾನಿ ನೀನ್ಯಾಕೋ ಇಲ್ಲಿಗೆ ಬಂದೆ ಅಂತ ಜೋರು ಮಾಡುತ್ತಾರೆ. ಆಗಲೂ ಕೂಡ ನಮ್ರತಾ, ವಿನಯ್, ಇಶಾನಿ ಮಾತು ಕೇಳಿ ಶಾಕ್ ಆಗ್ತಾರೆ. ಸಾಮಾನ್ಯವಾಗಿ ಹೊರಗಿಂದ ಯಾರೇ ಬಂದರೂ ಹೊರಗೆ ಏನು ನಡೀತಿದೆ ಅನ್ನೋದರ ಬಗ್ಗೆ ಮನೆ ಒಳಗಿನ ಸ್ಪರ್ಧಿಗಳಿಗೆ ಹೇಳುವಂತಿಲ್ಲ. ಆದರೆ ಇಶಾನಿ ಹೀಗೆ ಹೇಳ್ತಿರೋದು ಎಷ್ಟು ಸರಿ ಅಂತ ಬಿಗ್​ಬಾಸ್​ ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೇ ಪ್ರತಾಪ್ ಫ್ಯಾನ್ಸ್ ಪ್ರತಾಪ್​ ಬಗ್ಗೆ ನೆಗೆಟಿವ್ ಮಾಡ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಕಾಗೆ ಹಾರಿಸಿಕೊಂಡು ಬಂದವ್ರಿಂದಲೇ ಗಲೀಜು.. ಇಶಾನಿ ಮಾತಿಗೆ ರೊಚ್ಚಿಗೆದ್ದ ಡ್ರೋನ್ ಪ್ರತಾಪ್‌ ಫ್ಯಾನ್ಸ್‌!

https://newsfirstlive.com/wp-content/uploads/2024/01/bigg-boss-prathap.jpg

Load More