newsfirstkannada.com

×

BBK10: ಬಿಗ್​ಬಾಸ್​ ಬಳಿಕ ಮತ್ತೊಂದು ರಿಯಾಲಿಟಿ ಶೋಗೆ ರೆಡಿಯಾದ ಡ್ರೋನ್​ ಪ್ರತಾಪ್; ಯಾವುದು?

Share :

Published February 1, 2024 at 5:39pm

    ಪ್ರಬಲ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಡ್ರೋನ್​​ ಪ್ರತಾಪ್​

    ಅತಿ ಕಡಿಮೆ ವೋಟ್ಸ್​ಗಳಿಂದ ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದ​ ಪ್ರತಾಪ್

    ಮುಗ್ಧ ನಗುವಿನ ಮೂಲಕ ವೀಕ್ಷಕರನ್ನು ಮತ್ತೊಮ್ಮೆ ರಂಜಿಸಲಿದ್ದಾರೆ ಡ್ರೋನ್

ಸದ್ಯ ಎಲ್ಲಿ ನೋಡಿದರೂ ಡ್ರೋನ್​​​, ಎಲ್ಲರ ಬಾಯಲ್ಲೂ ಡ್ರೋನ್‌ ಪ್ರತಾಪ್​​ ಬಗ್ಗೆಯೇ ಮಾತುಕತೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​​ಬಾಸ್​ ಮನೆಯಲ್ಲಿ ಡ್ರೋನ್​ ಪ್ರತಾಪ್ ಆಟಕ್ಕೆ ರನ್ನರ್​ ಅಪ್​ ಪಟ್ಟ ದೊರೆತಿದೆ.  ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಅತಿ ಕಡಿಮೆ ವೋಟ್ಸ್​ಗಳಿಂದ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ರು ಡ್ರೋನ್​ ಪ್ರತಾಪ್​​.

ಬಿಗ್​ಬಾಸ್​ ಸೀಸನ್​ 10 ಎಂದ ತಕ್ಷಣ ಮೊದಲಿಗೆ ನೆನಪಾಗೋದೇ ಡ್ರೋನ್ ಪ್ರತಾಪ್​. ಅವರ ವ್ಯಕ್ತಿತ್ವದ ಬಗ್ಗೆ ಇದ್ದ ಅನುಮಾನಗಳು ಅವರನ್ನು ಕುತೂಹಲದ ಕಣ್ಣಿನಿಂದ ನೋಡೋ ಹಾಗೇ ಮಾಡಿದ್ದು. ಡ್ರೋನ್​ ಪ್ರತಾಪ್​​ ಅವರ ಬದುಕಿನ ರೀತಿಯೇ ಬದಲಾಗಿ ಬಿಟ್ಟಿದೆ. ಮಹಾ ಪವಾಡ ಅಂತಾರಲ್ಲ ಆ ರೀತಿ. ನಿಂದನೆ ಈಗ ವಂದನೆ ಆಗಿದೆ. ಅಪ್ಪ ಅಮ್ಮನ ಮಡಿಲು ಸೇರಿದ್ದಾರೆ. ಬದುಕಿನ ಭರವಸೆ ಕಳೆದುಕೊಂಡಿದ್ದ ಪ್ರತಾಪ್​ಗೆ ಹೊಸ ಬೆಳಕು ಮೂಡಿಸಿದ್ದು ಬಿಗ್​​ಬಾಸ್​ ಎಂದರೆ ತಪ್ಪಾಗಲಾರದು.

ನಾಲ್ಕೈದು ವರ್ಷಗಳಿಂದ ಪ್ರತಾಪ್​ ಅವರ ಬಗ್ಗೆ ಕೇಳಿ ಬರುತ್ತಿದ್ದ ಆರೋಪಗಳಿಗೆ ಜನ ರೊಚ್ಚಿಗೆದ್ದಿದ್ರು. ತಪ್ಪುಗಳನ್ನ ಒಪ್ಪಿಕೊಳ್ಳೋಕಾಗದೇ ಜನರನ್ನು ಎದುರಿಸಲು ಆಗದೇ ಒದ್ದಾಡುತ್ತಿದ್ದ ಪ್ರತಾಪ್​ಗೆ ಬಿಗ್​ ಬಾಸ್​ ವರವಾಯ್ತು. ಅವರ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಸದ್ಯ ಪ್ರತಾಪ್​ ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ವಿಶೇಷವಾಗಿ ಹೆಣ್ಮಕ್ಕಳು ಪ್ರತಾಪ್​ ಅವರನ್ನ ಮನೆ ಮಗನಂತೆ ಸ್ವೀಕಾರ ಮಾಡಿದ್ದಾರೆ. ಇದಲ್ವಾ ಪವಾಡ ಅಂದ್ರೆ. ಮೂರೇ ಮೂರು ತಿಂಗಳಲ್ಲಿ ಪ್ರತಾಪ್​ ಕ್ರೇಜ್​ ಅಷ್ಟಿಷ್ಟಲ್ಲ. ಪ್ರತಾಪ್​ಗೆ ಅಭಿನಯದ ಅವಕಾಶಗಳು ಒಲಿದು ಬರುತ್ತಿದ್ದು, ಸದ್ಯ ಗಿಚ್ಚಿ ಗಿಲಿಗಿಲಿ ಸೀಸನ್​ 3ಯಲ್ಲಿ ಪ್ರತಾಪ್​ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಜಡ್ಜ್ ಆಗಿರುವ ನಟಿ ತಾರಾ ಅವರ ಜೊತೆ ಕೂಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಡ್ರೋನ್​ ಪ್ರತಾಪ್​ ಅವರ ಮುಗ್ಧ ನಗುವಿನ ಮೂಲಕ ವೀಕ್ಷಕರನ್ನು ಮತ್ತೊಮ್ಮೆ ರಂಜಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BBK10: ಬಿಗ್​ಬಾಸ್​ ಬಳಿಕ ಮತ್ತೊಂದು ರಿಯಾಲಿಟಿ ಶೋಗೆ ರೆಡಿಯಾದ ಡ್ರೋನ್​ ಪ್ರತಾಪ್; ಯಾವುದು?

https://newsfirstlive.com/wp-content/uploads/2023/12/Drone-Pratap-2.jpg

Load More