newsfirstkannada.com

×

BIGG BOSS: ಜಾಣ್ಮೆಯಿಂದ ತಂಡವನ್ನು ಹ್ಯಾಂಡಲ್​​ ಮಾಡಿದ ಡ್ರೋನ್​ ಪ್ರತಾಪ್; ಭಾಗ್ಯಶ್ರೀ- ಸಂಗೀತಾ ಫುಲ್​ ಖುಷ್​ ಆಗಿದ್ದೇಕೆ?

Share :

Published November 8, 2023 at 7:22am

Update November 8, 2023 at 8:35am

    ಡ್ರೋನ್​​ ಪ್ರತಾಪ್ ಆಟ ನೋಡಿ ಬಿಗ್​ಬಾಸ್​ ಮನೆಮಂದಿ ಫುಲ್​​ ಶಾಕ್​

    ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಚೆನ್ನಾಗಿ ನಿಭಾಯಿಸುತ್ತಿರುವ ಸ್ಪರ್ಧಿಗಳು

    ಗಂಧದ ಗುಡಿ ಎಂದು ತಂಡದ ಹೆಸರನ್ನಿಟ್ಟ ಡ್ರೋನ್​​ ಪ್ರತಾಪ್​ಗೆ ಮೆಚ್ಚುಗೆ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​​ 10 ಈಗ ಐದನೇ ವಾರ ಕಾಲಿಟ್ಟಿದೆ. ಬಿಗ್​ಬಾಸ್​ ಶುರುವಾದ ದಿನದಿಂದ ಮನೆಯ ಎಲ್ಲ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿ ಆಚೆ ಬರುತ್ತಿದೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಅನ್ನು ಮನೆಯ ಮಂದಿ ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ನಿನ್ನೆ ಸಹ ಬಿಗ್​ಬಾಸ್​ ಮನೆಯಲ್ಲಿ ಎರಡು ತಂಡಗಳು ನಿರ್ಮಾಣಗೊಂಡಿದ್ದವು. ಅದರಂತೆ ಒಂದು ತಂಡದ ನಾಯಕ ಡ್ರೋನ್​​ ಪ್ರತಾಪ್​. ಇನ್ನೊಂದು ತಂಡದ ನಾಯಕಿ ಸಿರಿ. ಡ್ರೋನ್​​ ಪ್ರತಾಪ್ ತಂಡದ ಹೆಸರು ಗಂಧದ ಗುಡಿ. ಸಿರಿ ತಂಡದ ಹೆಸರು ವಜ್ರಕಾಯ.

ಹೀಗೆ ಬಿಗ್​ಬಾಸ್​ ಮನೆಯಲ್ಲಿ ಎರಡು ತಂಡಗಳು ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಆಡಲು ಎಲ್ಲ ರೀತಿಯಲ್ಲಿ ಪ್ಲಾನ್ ಮಾಡಿಕೊಂಡಿದ್ದರು. ಬಿಗ್​ಬಾಸ್​ ಕೊಟ್ಟ ಎರಡು ಟಾಸ್ಕ್​​​​ಗಳನ್ನು ಡ್ರೋನ್​​ ಪ್ರತಾಪ್ ತಂಡ ಗೆದ್ದು ಬೀಗಿದೆ. ಅದರಲ್ಲೂ ಪ್ರತಾಪ್​ ತಂಡ ಗೆದ್ದಿದ್ದಕ್ಕೆ ನಟಿ ಭಾಗ್ಯಶ್ರೀ ಅವರು ಈ ವಾರದ ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಹೌದು ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಲು ಭಾಗ್ಯಶ್ರೀ ಸೇರಿದಂತೆ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಇದೀಗ ನಾಮಿನೇಷನ್‌ನಿಂದ ಭಾಗ್ಯಶ್ರೀ ಹಾಗೂ ಸಂಗೀತಾ ಅವರು ಸೇಫ್ ಆಗಿದ್ದಾರೆ.

ಬಿಗ್​ಬಾಸ್​ ಕೊಟ್ಟ ಎರಡು ಟಾಸ್ಕ್​ಗಳನ್ನು ಗೆದ್ದ ಡ್ರೋನ್‌ ಪ್ರತಾಪ್‌ ಅವರಿಗೆ ಬಿಗ್​ಬಾಸ್​ ವಿಶೇಷ ಅಧಿಕಾರವೊಂದನ್ನು ನೀಡಿದರು. ನಿಮ್ಮ ತಂಡದಿಂದ ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಒಬ್ಬರನ್ನು ನಾಮಿನೇಷನ್‌ನಿಂದ ಸೇಫ್ ಮಾಡಬಹುದು. ನಿರ್ಧಾರ ನಿಮ್ಮದೇ ಆಗಿರಬೇಕು. ಯಾರೊಂದಿಗೂ ಚರ್ಚಿಸುವಂತಿಲ್ಲ ಎಂದಿದ್ದರು. ಅದರಂತೆ ಯಾರ ಬಳಿಯೂ ಚರ್ಚೆ ಮಾಡದೇ ಡ್ರೋನ್​ ಪ್ರತಾಪ್​ ಭಾಗ್ಯಶ್ರೀ ಹಾಗೂ ಸಂಗೀತಾ ಅವರನ್ನು ನಾಮಿನೇಷನ್‌ನಿಂದ ಸೇಫ್ ಮಾಡಿದ್ದಾರೆ.

ಗಂಧದ ಗುಡಿ ತಂಡದ ನಾಯಕನಾಗಿದ್ದ ಡ್ರೋನ್​ ಪ್ರತಾಪ್​ ಅವರು ಭಾಗ್ಯಶ್ರೀ ಹಾಗೂ ಸಂಗೀತಾ ಅವರ ಹೆಸರನ್ನು ಹೇಳುತ್ತಿದ್ದಂತೆ ಮನೆಯ ಮಂದಿ ಫುಲ್​​ ಶಾಕ್​ ಆಗಿದ್ದರು. ಬಳಿಕ ನಾಮಿನೇಷನ್‌ನಿಂದ ಸೇಫ್​ ಮಾಡಿದ್ದಕ್ಕೆ ಭಾಗ್ಯಶ್ರೀ ಹಾಗೂ ಸಂಗೀತಾ ಪ್ರತಾಪ್​ಗೆ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಜಾಣ್ಮೆಯಿಂದ ತಂಡವನ್ನು ಹ್ಯಾಂಡಲ್​​ ಮಾಡಿದ ಡ್ರೋನ್​ ಪ್ರತಾಪ್; ಭಾಗ್ಯಶ್ರೀ- ಸಂಗೀತಾ ಫುಲ್​ ಖುಷ್​ ಆಗಿದ್ದೇಕೆ?

https://newsfirstlive.com/wp-content/uploads/2023/11/bigg-boss-2023-11-08T071720.106.jpg

Load More